T20 World Cup Point Table: ಪಾಯಿಂಟ್ ಟೇಬಲ್​ನಲ್ಲಿ ಪಾತಾಳಕ್ಕೆ ಕುಸಿದ ಭಾರತ: ಟಾಪ್​ಗೆ ಬರಲು ಏನು ಮಾಡಬೇಕು?

| Updated By: Vinay Bhat

Updated on: Nov 01, 2021 | 10:50 AM

ಐಸಿಸಿ ಟಿ20 ವಿಶ್ವಕಪ್​ನ ಪಾಯಿಂಟ್ ಟೇಬಲ್​ನಲ್ಲಿ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ರನ್​ರೇಟ್ ಆಧಾರದ ಮೇಲೆ ಕೊಹ್ಲಿ ಪಡೆ 5ನೇ ಸ್ಥಾನದಲ್ಲಿದ್ದರೆ, ಸ್ಕಾಟ್ಲೆಂಟ್ ಕೊನೆಯ ಆರನೇ ಸ್ಥಾನದಲ್ಲಿದೆ.

T20 World Cup Point Table: ಪಾಯಿಂಟ್ ಟೇಬಲ್​ನಲ್ಲಿ ಪಾತಾಳಕ್ಕೆ ಕುಸಿದ ಭಾರತ: ಟಾಪ್​ಗೆ ಬರಲು ಏನು ಮಾಡಬೇಕು?
T20 World Cup Team india
Follow us on

ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿ ರಂಗೇರುತ್ತಿದೆ. ಈಗಾಗಲೇ ಪಾಕಿಸ್ತಾನ (Pakistan) ಹಾಗೂ ಇಂಗ್ಲೆಂಡ್ ತಂಡಗಳು ಸೆಮಿ ಫೈನಲ್ ಹಂತಕ್ಕೆ ಬಹುತೇಕ ಕಾಲಿಟ್ಟಿದೆ. ಇತರೆ ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದೇ ಗುರುತಿಸಿಕೊಂಡಿದ್ದ ಭಾರತ (India) ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದಲೇ ಹೊರಬೀಳುವ ಭೀತಿಯಲ್ಲಿದೆ. ಭಾನುವಾರ ಟೀಮ್ ಇಂಡಿಯಾ (Team India) ವಿರುದ್ಧ ನ್ಯೂಜಿಲೆಂಡ್ (New Zealand) ಗೆದ್ದು ಬೀಗಿದ್ದು ಸೆಮೀಸ್ ಹಾದಿಯತ್ತ ಲಗ್ಗೆಯಿಡುತ್ತಿದೆ. ಹಾಗಾದ್ರೆ ಸದ್ಯದ ಟಿ20 ವಿಶ್ವಕಪ್ ಪಾಯಿಂಟ್ ಟೇಬಲ್ ಹೇಗಿದೆ? (T20 World Cup Points Table), ಯಾವ ತಂಡ ಅತಿ ಹೆಚ್ಚು ಪಂದ್ಯ ಗೆದ್ದಿದೆ ಎಂಬುದನ್ನು ನೋಡೋಣ.

ಗ್ರೂಪ್ 1 ಮತ್ತು ಗ್ರೂಪ್ 2 ಎಂಬ ಎರಡು ವಿಭಾಗಗಳಿವೆ. ಈ ಪೈಕಿ ಗ್ರೂಪ್ 1 ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ಇದರಲ್ಲಿ ಇಂಗ್ಲೆಂಡ್ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ 6 ಅಂಕದೊಂದಿಗೆ ಅಗ್ರಸ್ಥಾನಲ್ಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ. ಆದರೆ, ರನ್​ರೇಟ್ ಆಧಾರದ ಮೇಲೆ ಆಫ್ರಿಕಾ 4 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸೀಸ್ ಕೂಡ 4 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

4 ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, ಎರಡು ಪಂದ್ಯ ಸೋತು ಒಂದು ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ಇತ್ತ ವೆಸ್ಟ್​ ಇಂಡೀಸ್ ಸ್ಥಿತಿಕೂಡ ಇದೇರೀತಿಯಿದ್ದು 5ನೇ ಸ್ಥಾನದಲ್ಲಿದೆ. ಬಾಂಗ್ಲಾ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಮೂರೂ ಪಂದ್ಯಗಳಲ್ಲಿ ಬಾಂಗ್ಲಾ ಸೋಲು ಕಂಡಿದೆ.

ಇನ್ನು ಗ್ರೂಪ್ 2 ರಲ್ಲಿ ಪಾಕಿಸ್ತಾನ, ಭಾರತ, ಅಫ್ಘಾನಿಸ್ತಾನ, ನಮಿಬಿಯಾ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ತಂಡಗಳಿವೆ. ಇದರಲ್ಲಿ ಪಾಕಿಸ್ತಾನ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿ ಫೈನಲ್ ಹಂತಕ್ಕೇರುವುದು ಖಚಿತ ಪಡಿಸಿದೆ. 6 ಅಂಕ ಸಂಪಾದಿಸಿರುವ ಪಾಕ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ತಂಡವಿದ್ದು ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು 4 ಪಾಯಿಂಟ್ ತನ್ನ ಖಾತೆಯಲ್ಲಿ ಸೇರಿಸಿಕೊಂಡಿದೆ.

 

ಮೂರನೇ ಸ್ಥಾನಕ್ಕೆ ನ್ಯೂಜಿಲೆಂಡ್ ತಂಡ ಜಿಗಿದಿದ್ದು, ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ. ನಮಿಬಿಯಾ ತಂಡ ಆಡಿದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಜಯ ಕಂಡಿದೆ. ಭಾರತ ಮತ್ತು ಸ್ಕಾಟ್ಲೆಂಡ್ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ರನ್​ರೇಟ್ ಆಧಾರದ ಮೇಲೆ ಕೊಹ್ಲಿ ಪಡೆ 5ನೇ ಸ್ಥಾನದಲ್ಲಿದ್ದರೆ, ಸ್ಕಾಟ್ಲೆಂಟ್ ಅಂತಿಮ ಆರನೇ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಟೂರ್ನಿಯಲ್ಲಿ ಜೀವಂತವಾಗಿರಲು ಉಳಿದಿರುವ ಮೂರು ಪಂದ್ಯಗಳಲ್ಲಿ ಕೇವಲ ಗೆದ್ದರೆ ಸಾಲದು, ದೊಡ್ಡ ಮೊತ್ತದ ಜಯ ಕಾಣಬೇಕು. ರನ್​ರೇಟ್ ಅನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿದೆ. ಇದರ ಜೊತೆಗೆ ಇತರೆ ತಂಡಗಳ ಸೋಲಿನ ಮೇಲೆ ಟೀಮ್ ಇಂಡಿಯಾ ಭವಿಷ್ಯ ನಿಂತಿದೆ.

Jasprit Bumrah: ವಿಶ್ರಾಂತಿ ಬೇಕು: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಶಾಕಿಂಗ್ ಹೇಳಿಕೆ ಕೊಟ್ಟ ಜಸ್​ಪ್ರೀತ್ ಬುಮ್ರಾ

Virat Kohli: ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಯಾರನ್ನೂ ದೂರದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?

(India remain fifth in the T20 World Cup Super 12 Group 2 table Afetr lost against New Zealand)