AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಯಾರನ್ನೂ ದೂರದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?

'Not Brave Enough' Indian captain Virat Kohli said: ಪ್ರತಿಬಾರಿ ನಾವು ದೊಡ್ಡ ಹೊಡೆತಕ್ಕೆ ಮುಂದಾದಾಗ ವಿಕೆಟ್ ಕೈಚೆಲ್ಲುತ್ತಲೇ ಇದ್ದೆವು. ಹೀಗಾದಾಗ ನಮಗೆ ದೊಡ್ಡ ಹೊಡೆತ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾರತ ನ್ಯೂಜಿಲೆಂಡ್ ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli: ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಯಾರನ್ನೂ ದೂರದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?
Virat Kohli India vs New Zealand
TV9 Web
| Updated By: Vinay Bhat|

Updated on: Nov 01, 2021 | 8:43 AM

Share

ಆರನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಟೀಮ್ ಇಂಡಿಯಾ (Team India) ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಪಾಕಿಸ್ತಾನ (Pakistan) ವಿರುದ್ಧದ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದ ಭಾರತ, ಭಾನುವಾರದ ನ್ಯೂಜಿಲೆಂಡ್ (India vs New Zealand) ವಿರುದ್ಧವೂ ಗೆಲುವು ಕಾಣಲು ವಿಫಲವಾಯಿತು. ತಂಡದಲ್ಲಿ ಕೆಲವು ಬದಲಾವಣೆ, ನಾನಾ ಪ್ರಯೋಗವನ್ನು ನಡೆಸಿ ಕೊಹ್ಲಿ ಪಡೆ ಪಂದ್ಯ ಆಡಿದರೂ ಫಲಿತಾಂಶ ಭಾರತದ (India) ಕಡೆ ಆಗಲಿಲ್ಲ. ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಕನಸನ್ನು ಬಹುತೇಕ ಭಗ್ನಗೊಳಿಸಿದಂತಾಗಿದೆ. ಉಳಿದಿರುವ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಗೆದ್ದರೆ ಸಾಲದು, ದೊಡ್ಡ ಮೊತ್ತದ ಜಯ ಕಂಡರೂ ಉಳಿಯುವುದು ಅನುಮಾನ. ಇತರೆ ತಂಡಗಳ ಸೋಲಿನ ಮೇಲೆ ಟೀಮ್ ಇಂಡಿಯಾ ಭವಿಷ್ಯ ನಿಂತಿದೆ. ಆದರೆ, ಕಿವೀಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ (Virat Kohli) ಸೋಲಿಗೆ ಯಾರನ್ನೂ ಹೊಣೆ ಮಾಡಲಿಲ್ಲ.

‘ನಮಗೆ ಬಾಲ್ ಜೊತೆ ಆಡಲು ಸಾಕಷ್ಟು ಸಮಯವೇ ಸಿಗಲಿಲ್ಲ. ನಾವು ಫೀಲ್ಡ್​ಗೆ ಇಳಿದಾಗ ನಮ್ಮ ಬಾಡಿ ಲ್ಯಾಗ್ವೇಂಜ್​ನಲ್ಲಿ ಧೈರ್ಯವಿರಲಿಲ್ಲ. ನ್ಯೂಜಿಲೆಂಡ್ ಆಟಗಾರರಲ್ಲಿ ಧೈರ್ಯ ನಮಗಿಂತ ಹೆಚ್ಚಿತ್ತು. ನಮಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಕೂಡ ಧೈರ್ಯ ಸಾಕಾಗಲಿಲ್ಲ. ಪ್ರತಿಬಾರಿ ನಾವು ದೊಡ್ಡ ಹೊಡೆತಕ್ಕೆ ಮುಂದಾದಾಗ ವಿಕೆಟ್ ಕೈಚೆಲ್ಲುತ್ತಲೇ ಇದ್ದೆವು. ಹೀಗಾದಾಗ ನಮಗೆ ದೊಡ್ಡ ಹೊಡೆತ ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಿಂಜರಿಕೆ ಉಂಟಾಗುತ್ತಿತ್ತು’ ಎಂದು ಕೊಹ್ಲಿ ಹೇಳಿದ್ದಾರೆ.

‘ನೀವು ಭಾರತಕ್ಕೋಸ್ಕರ ಆಡಿದಾಗ ಅಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿರುತ್ತವೆ. ಜನರು ಪಂದ್ಯ ನೋಡಲು ಮೈದಾನಕ್ಕೆ ಬರುತ್ತಾರೆ, ನಾವು ಅದನ್ನು ಗಮನಿಸುತ್ತೇವೆ. ಯಾರು ಭಾರತಕ್ಕೋಸ್ಕರ ಆಡುತ್ತಾರೊ ಆ ಪ್ರತಿಯೊಬ್ಬರು ಕೂಡ ಇದನ್ನು ಅಳವಡಿಸಿಕೊಂಡು ನಿಭಾಯಿಸಬೇಕು. ನಾವು ಕಳೆದ ಎರಡು ಪಂದ್ಯಗಳಲ್ಲಿ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾವು ಗೆಲುವು ಕಾಣಲಿಲ್ಲ. ನಾವು ಸರಿಯಾದ ಕ್ರಿಕೆಟ್ ಆಡಬೇಕು. ಒತ್ತಡಗಳನ್ನು ಮೆಟ್ಟಿ ನಿಲ್ಲಬೇಕು. ಈ ಟೂರ್ನಮೆಂಟ್ ಇಲ್ಲಿಗೇ ಅಂತ್ಯಕಂಡಿಲ್ಲ. ಇನ್ನು ಸಾಕಷ್ಟು ಕ್ರಿಕೆಟ್ ಆಡಲು ಬಾಕಿಯಿದೆ’ ಎಂದು ಕೊಹ್ಲಿ ಪಂದ್ಯದ ಬಳಿಕ ಮಾತನಾಡಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ ಆಟಗಾರರ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ್ದಾರೆ. ‘ಪಂದ್ಯ ಶುರುವಾಗುವುದಕ್ಕೂ ಮುನ್ನ ಒಂದು ರಣತಂತ್ರ ಮಾಡಿರುತ್ತೇವೆ. ಆದರೆ, ಆಟಗಾರರು ಇಂದು ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಈ ಕಂಡೀಶನ್​ನಲ್ಲಿ ಬಲಿಷ್ಠ ಭಾರತದ ಎದುರು ಗೆಲುವು ಸಾಧಿಸಿದ್ದು ನಿಜಕ್ಕೂ ಸಂತಸ ತಂದಿದೆ. ಪ್ರಯಖವಾಗಿ ನಮ್ಮ ಸ್ಪಿನ್ನರ್​ಗಳು ಎದುರಾಳಿಯ ಬ್ಯಾಟರ್​ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಎರಡೂ ತಂಡಗಳಲ್ಲಿ ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ. ಇಶ್ ಸೋದಿ ಬೌಲಿಂಗ್ ಅಂತೂ ಅಮೋಘವಾಗಿತ್ತು. ಅವರಿಗೆ ಟಿ20 ಕ್ರಿಕೆಟ್​ನಲ್ಲಿ ಆಡಿದ ಅನುಭವವಿದೆ. ಬೇರೆಬೇರೆ ಲೀಗ್​ನಲ್ಲಿ ಕಣಕ್ಕಿಳಿದಿದ್ದಾರೆ. ಅದು ಚೆನ್ನಾಗಿ ಕೆಲಸ ಮಾಡುತ್ತಿದೆ’ ಎಂದು ವಿಲಿಯಮ್ಸನ್ ಹೇಳಿದರು.

MS Dhoni: ವರ್ಕ್ ಆಗದ ಮೆಂಟರ್ ಧೋನಿ ಪ್ಲಾನ್: ಹಲವು ಬದಲಾವಣೆ ಮಾಡಿ ಎರಡನೇ ಸೋಲುಂಡಿತು ಭಾರತ

(Virat Kohli talking at the post-match presentation ceremony after eight-wicket loss to New Zealand)

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್