T20 World Cup 2021: ಸೆಮಿಫೈನಲ್ಗೇರಲು ಟೀಮ್ ಇಂಡಿಯಾಗೆ ಇನ್ನೂ ಇದೆ ಅವಕಾಶ
India vs New Zealand: ಇಲ್ಲಿ ಪಾಕಿಸ್ತಾನ್ ಸೆಮಿಫೈನಲ್ ಖಚಿತಪಡಿಸಿದರೆ, ಉಳಿದ 3 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂದರೆ ಗ್ರೂಪ್-2 ನಿಂದ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ. ಈಗ ಸೆಮಿಫೈನಲ್ ರೇಸ್ನಲ್ಲಿ ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳಿವೆ.
ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup 2021) 28ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಭಾರತ (India vs New Zealand) ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಇದಾಗ್ಯೂ ಟೀಮ್ ಇಂಡಿಯಾಗೆ (Team India) ಇನ್ನೂ ಕೂಡ ಸೆಮಿಫೈನಲ್ಗೇರುವ ಅವಕಾಶ ಇದೆ. ಇದಕ್ಕಾಗಿ ಭಾರತ ತಂಡವು ಮುಂದಿನ ಪಂದ್ಯಗಳ ಫಲಿತಾಂಶಗಳನ್ನು ಎದುರು ನೋಡಬೇಕು.
ಏಕೆಂದರೆ ಗ್ರೂಪ್-2ನಲ್ಲಿ ಪಾಕಿಸ್ತಾನ್ ಸತತ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಪಾಕಿಸ್ತಾನ್ ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಇನ್ನೊಂದೆಡೆ ಮೂರು ಪಂದ್ಯಗಳಲ್ಲಿ ಎರಡು ಜಯ ಸಾಧಿಸಿರುವ ಅಫ್ಘಾನಿಸ್ತಾನ್ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇದೀಗ ಭಾರತದ ವಿರುದ್ದ ಗೆದ್ದಿರುವ ನ್ಯೂಜಿಲೆಂಡ್ 3ನೇ ಸ್ಥಾನವನ್ನು ಅಲಂಕರಿಸಿದೆ. ಸತತ 2 ಸೋಲನುಭವಿಸಿರುವ ಭಾರತ 5ನೇ ಸ್ಥಾನದಲ್ಲಿದೆ.
ಇಲ್ಲಿ ಪಾಕಿಸ್ತಾನ್ ಸೆಮಿಫೈನಲ್ ಖಚಿತಪಡಿಸಿದರೆ, ಉಳಿದ 3 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂದರೆ ಗ್ರೂಪ್-2 ನಿಂದ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ. ಈಗ ಸೆಮಿಫೈನಲ್ ರೇಸ್ನಲ್ಲಿ ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳಿವೆ. ಇಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ಗೆ ಇನ್ನೂ 3 ಪಂದ್ಯಗಳಿವೆ. ಅದರಂತೆ ಸೆಮಿಫೈನಲ್ ರೇಸ್ನಲ್ಲಿ ಮುಂಚೂಣಿಗೆ ಬರಲು ಭಾರತ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಭಾರೀ ಅಂತರದಿಂದ ಜಯ ಸಾಧಿಸಬೇಕು. ಅಷ್ಟೇ ಅಲ್ಲದೆ ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ದ ಕೂಡ ಭರ್ಜರಿ ಗೆಲುವು ದಾಖಲಿಸಬೇಕು. ಇದರೊಂದಿಗೆ ಟೀಮ್ ಇಂಡಿಯಾಗೆ 6 ಪಾಯಿಂಟ್ ಸಿಗಲಿದೆ.
ಅತ್ತ ನಾಲ್ಕು ಪಾಯಿಂಟ್ ಹೊಂದಿರುವ ಅಫ್ಘಾನಿಸ್ತಾನ್ ತಂಡ ನ್ಯೂಜಿಲೆಂಡ್ ವಿರುದ್ದ ಗೆಲ್ಲಬೇಕು. ಇದರೊಂದಿಗೆ ಅಫ್ಘಾನಿಸ್ತಾನ್ ತಂಡದ ಪಾಯಿಂಟ್ ಕೂಡ 6 ಆಗಲಿದೆ. ಇನ್ನು ನ್ಯೂಜಿಲೆಂಡ್ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೂ 6 ಅಂಕಗಳನ್ನು ಹೊಂದಲಿದೆ. ಅಂದರೆ ಮೂರು ತಂಡಗಳ ಪಾಯಿಂಟ್ ಸಮಗೊಳ್ಳಲಿದೆ. ಈ ವೇಳೆ ನೆಟ್ ರನ್ ರೇಟ್ ಲೆಕ್ಕಕ್ಕೆ ಬರಲಿದೆ.
ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಮುಂದಿದ್ದರೆ ಸೆಮಿಫೈನಲ್ಗೇರುವ ಅವಕಾಶ ದೊರೆಯಲಿದೆ. ಹೀಗಾಗಿ ಭಾರತ ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಹೆಚ್ಚಿಸುವುದು ಅನಿವಾರ್ಯ. ಹಾಗೆಯೇ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ ತಂಡ ಸೋಲುವುದನ್ನು ಎದುರು ನೋಡಬೇಕು. ಹೀಗೆ ಆದಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬಹುದಾಗಿದೆ.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(India’s Chances of Entering T20 World Cup Semi Finals)