AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

India vs New Zealand: ಇಲ್ಲಿ ಟೀಮ್ ಇಂಡಿಯಾ ಮುಂದಿರುವುದು ನ್ಯೂಜಿಲೆಂಡ್ ಎಂಬ ಬಲಿಷ್ಠ ತಂಡ ಮಾತ್ರ. ಇನ್ನು ಅಫ್ಘಾನಿಸ್ತಾನ್ ಉತ್ತಮ ಪ್ರದರ್ಶನ ನೀಡುತ್ತಾದರೂ ಭಾರತ ತಂಡದ ವಿರುದ್ದ ಮೇಲುಗೈ ಸಾಧಿಸಿದ ಇತಿಹಾಸವಿಲ್ಲ.

T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 28, 2021 | 3:58 PM

ಟಿ20 ವಿಶ್ವಕಪ್​ನ (T20 World Cup 2021) ಸೂಪರ್ 12 ಪಂದ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಒಂದೊಂದು ಪಂದ್ಯಗಳನ್ನು ಆಡಿದೆ. ಅದರಲ್ಲೂ ಗ್ರೂಪ್​-2 ನಲ್ಲಿ ಪಾಕಿಸ್ತಾನ್ ಹಾಗೂ ಸ್ಕಾಟ್ಲೆಂಡ್​ ತಂಡಗಳ 2 ಪಂದ್ಯಗಳು ಮುಗಿದಿವೆ. ಇನ್ನು ಭಾರತ (Team India), ಅಫ್ಘಾನಿಸ್ತಾನ್, ನಮೀಬಿಯಾ, ನ್ಯೂಜಿಲೆಂಡ್ (New Zealand)​ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಆಡಿವೆ. ಇದರಲ್ಲಿ ಪಾಕ್ ತಂಡವು 2 ಪಂದ್ಯಗಳನ್ನು ಗೆದ್ದರೆ, ಸ್ಕಾಟ್ಲೆಂಡ್ 2 ಪಂದ್ಯಗಳನ್ನು ಸೋತಿದೆ. ಹಾಗೆಯೇ ಅಫ್ಘಾನಿಸ್ತಾನ್ ಹಾಗೂ ನಮೀಬಿಯಾ ತಲಾ ಒಂದು ಜಯ ಸಾಧಿಸಿದೆ.

ಇನ್ನು ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲ ಪಂದ್ಯದಲ್ಲೇ ಸೋಲನುಭವಿಸಿದೆ. ಹೀಗಾಗಿ ಮುಂದಿನ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕ. ಮುಂದಿನ ಪಂದ್ಯದಲ್ಲಿ ಕಿವೀಸ್ ವಿರುದ್ದ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಅದರಂತೆ ಮುಂದಿನ 4 ಪಂದ್ಯಗಳನ್ನು ಭಾರತ ಗೆದ್ದರೆ ಸೆಮಿಫೈನಲ್ ಆಡೋದು ಬಹುತೇಕ ಖಚಿತ. ಇಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ.

ಅಂದರೆ ಇಲ್ಲಿ ಟೀಮ್ ಇಂಡಿಯಾ ಮುಂದಿರುವುದು ನ್ಯೂಜಿಲೆಂಡ್ ಎಂಬ ಬಲಿಷ್ಠ ತಂಡ ಮಾತ್ರ. ಇನ್ನು ಅಫ್ಘಾನಿಸ್ತಾನ್ ಉತ್ತಮ ಪ್ರದರ್ಶನ ನೀಡುತ್ತಾದರೂ ಭಾರತ ತಂಡದ ವಿರುದ್ದ ಮೇಲುಗೈ ಸಾಧಿಸಿದ ಇತಿಹಾಸವಿಲ್ಲ. ಹಾಗೆಯೇ ಸ್ಕಾಟ್ಲೆಂಡ್ ಹಾಗೂ ನಬೀಯಾ ತಂಡಗಳು ಅರ್ಹತಾ ಸುತ್ತಿನಿಂದ ಎಂಟ್ರಿ ಕೊಟ್ಟ ತಂಡಗಳಾಗಿವೆ. ಹೀಗಾಗಿ ಬಲಿಷ್ಠ ಪಡೆಯನ್ನು ಒಳಗೊಂಡಿರುವ ಭಾರತಕ್ಕೆ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಖಚಿತ ಎನ್ನಬಹುದು.

ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು. ಒಂದು ವೇಳೆ ನ್ಯೂಜಿಲೆಂಡ್​ ವಿರುದ್ದ ಭಾರತ ಸೋತು ಮುಂದಿನ 3 ಪಂದ್ಯಗಳನ್ನು ಗೆದ್ದರೂ ಸೆಮಿ ಫೈನಲ್ ಹಾದಿ ಕಠಿಣವಾಗಲಿದೆ. ಏಕೆಂದರೆ ಈಗಾಗಲೇ ಪಾಕಿಸ್ತಾನ್ 4 ಅಂಕ ಪಡೆದಿದ್ದು, ಮುಂದಿನ 3 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದರೆ ಸೆಮಿಫೈನಲ್​ ಖಚಿತಪಡಿಸಿಕೊಳ್ಳಲಿದೆ.

ಇತ್ತ ಭಾರತ ನ್ಯೂಜಿಲೆಂಡ್ ವಿರುದ್ದ ಸೋತರೆ, ಸೆಮಿಫೈನಲ್​ ಪ್ರವೇಶಿಸಲು ಟೀಮ್ ಇಂಡಿಯಾ, ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ನಡುವಣ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಅಫ್ಘಾನ್​ ಗೆದ್ದರೆ ಮಾತ್ರ ಚಾನ್ಸ್ ಇರಲಿದೆ. ಒಂದು ವೇಳೆ ಅಫ್ಘಾನ್​ ಗೆದ್ದರೂ, ಅವರು ಪಾಕಿಸ್ತಾನ್ ವಿರುದ್ದ ಸೋಲುವುದನ್ನು ಕಾಯಬೇಕು. ಹೀಗೆ ಆದಲ್ಲಿ ಮಾತ್ರ ಅಂಕಪಟ್ಟಿಯಲ್ಲಿ 6 ಪಾಯಿಂಟ್​ಗಳಂತೆ ಸಮಬಲ ಕಂಡು ಬರಲಿದೆ. ಇಂತಹ ಸನ್ನಿವೇಶ ಎದುರಾದರೆ ಟೀಮ್ ಇಂಡಿಯಾ ಹೆಚ್ಚಿನ ರನ್​ ರೇಟ್ ಮೂಲಕ ಸೆಮಿಫೈನಲ್ ಪ್ರವೇಶಿಸಬಹುದು.

ಆದರೆ ಇಂತಹ ಕಠಿಣ ಹಾದಿಗಿಂತ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಗೆಲ್ಲುವ ಮೂಲಕ ಸುಲಭದ ಹಾದಿಯಲ್ಲಿ ಸೆಮಿಫೈನಲ್ ಪ್ರವೇಶಿಸುವುದನ್ನು ಎದುರು ನೋಡುತ್ತಿದೆ. ಹೀಗಾಗಿ ಕಿವೀಸ್ ವಿರುದ್ದದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಲಿದೆ. ಅತ್ತ ನ್ಯೂಜಿಲೆಂಡ್ ತಂಡಕ್ಕೂ ಕೂಡ ಟೀಮ್ ಇಂಡಿಯಾದಂತೆ ಈ ನಿರ್ಣಾಯಕ. ಹೀಗಾಗಿ ಉಭಯ ತಂಡಗಳಿಗೂ ಸೆಮಿಫೈನಲ್​ ರೇಸ್​ನಲ್ಲಿ ಅಗ್ರ ತಂಡವಾಗಿ ಉಳಿಯಲು ಅಕ್ಟೋಬರ್ 31 ರಂದು ನಡೆಯುವ ಪಂದ್ಯ ಬಹಳ ಮಹತ್ವದ್ದು. ಈ ಪಂದ್ಯದಲ್ಲಿ ಸೋಲುವ ತಂಡ ಮುಂದಿನ ಪಂದ್ಯಗಳ ಫಲಿತಾಂಶಗಳ ಆಧಾರ ಮೇಲೆ ಸೆಮಿಫೈನಲ್​ ರೇಸ್​ನಲ್ಲಿ ಇರಲಿದೆ. ಗೆದ್ದ ತಂಡವು ಮುಂದಿನ 3 ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿ ಕೊಡಬಹುದು.

ಹೀಗಾಗಿ ಮುಂದಿನ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್​ಗೇರಲು ಪ್ಲ್ಯಾನ್ ರೂಪಿಸುತ್ತಿದೆ. ಅದರಂತೆ ಅಕ್ಟೋಬರ್ 31 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದ್ದು, ಭಾರತ-ನ್ಯೂಜಿಲೆಂಡ್ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್

(T20 World Cup 2021: India’s chances of reaching the semi-finals)

ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!