- Kannada News Photo gallery Cricket photos ICC T20 Batter Rankings: Virat Kohli slips one slot to 5th
ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
ICC T20 Rankings: ವೆಸ್ಟ್ ಇಂಡೀಸ್ ವಿರುದ್ದ ಅರ್ಧಶತಕ ಬಾರಿಸಿದ 3- ಏಡೆನ್ ಮಾರ್ಕ್ರಮ್ 8ನೇ ಸ್ಥಾನ ಮೇಲೇರಿದ್ದಾರೆ. ಹಾಗಿದ್ರೆ ನೂತನ ಟಿ20 ರ‍್ಯಾಂಕಿಂಗ್ ನಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.
Updated on: Oct 27, 2021 | 5:11 PM

ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ ಅವರನ್ನು ಹಿಂದಿಕ್ಕಿ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಟಾಪ್ 10 ನಲ್ಲಿ ಈ ಬಾರಿ ಕೂಡ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.

ಅದರಲ್ಲೂ ಟಿ20 ವಿಶ್ವಕಪ್ನಲ್ಲಿಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 4ನೇ ಸ್ಥಾನ ಅಲಂಕರಿಸಿದ್ದಾರೆ.

ಹಾಗೆಯೇ ಪಾಕ್ ವಿರುದ್ದದ ಪಂದ್ಯದಲ್ಲಿ ವಿಫಲರಾಗಿದ್ದ ಕೆಎಲ್ ರಾಹುಲ್ ಕೂಡ ಹಿನ್ನಡೆ ಅನುಭವಿಸಿದ್ದು, ಅದರಂತೆ 2 ಸ್ಥಾನ ಕುಸಿದಿದ್ದಾರೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ದ ಅರ್ಧಶತಕ ಬಾರಿಸಿದ ಏಡೆನ್ ಮಾರ್ಕ್ರಮ್ 8ನೇ ಸ್ಥಾನ ಮೇಲೇರಿದ್ದಾರೆ. ಹಾಗಿದ್ರೆ ನೂತನ ಟಿ20 ರ‍್ಯಾಂಕಿಂಗ್ ನಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.

ಹಾಗೆಯೇ ಶ್ರೀಲಂಕಾ ವಿರುದ್ದ ಭರ್ಜರಿ ಶತಕ ಸಿಡಿಸಿ ಮುಂಚಿದ್ದ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಈ ಸಲ ಟಾಪ್-10 ರಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕಳೆದ ಬಾರಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದ ಅಫ್ಘಾನಿಸ್ತಾನ್ ತಂಡದ ಹಝ್ರತುಲ್ಲಾ ಝಝೈ ಈ ಬಾರಿ ಟಾಪ್ 10ನಿಂದ ಹೊರಬಿದ್ದಿದ್ದಾರೆ. ನೂತನ ಟಿ20 ರ‍್ಯಾಂಕಿಂಗ್ ಪಟ್ಟಿ ಹೀಗಿದೆ...

10- ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್)

8- ಕೆಎಲ್ ರಾಹುಲ್ (ಟೀಮ್ ಇಂಡಿಯಾ)

7- ಡೆವೊನ್ ಕಾನ್ವೆ (ನ್ಯೂಜಿಲೆಂಡ್)

3- ಆರೋನ್ ಫಿಂಚ್ (ಆಸ್ಟ್ರೇಲಿಯಾ)

5- ವಿರಾಟ್ ಕೊಹ್ಲಿ ( ಟೀಮ್ ಇಂಡಿಯಾ)

4- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)

6- ಏಡೆನ್ ಮಾರ್ಕ್ರಮ್ (ದಕ್ಷಿಣ ಆಫ್ರಿಕಾ)

1- ಬಾಬರ್ ಆಜಂ (ಪಾಕಿಸ್ತಾನ್)

2- ಡೇವಿಡ್ ಮಲಾನ್ ( ಇಂಗ್ಲೆಂಡ್)



















