Jasprit Bumrah: ವಿಶ್ರಾಂತಿ ಬೇಕು: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಶಾಕಿಂಗ್ ಹೇಳಿಕೆ ಕೊಟ್ಟ ಜಸ್ಪ್ರೀತ್ ಬುಮ್ರಾ
India vs New Zealand: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಮ್ ಇಂಡಿಯಾ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವ ಶ್ರೇಷ್ಠ ಆಟಗಾರರಿದ್ದರೂ ತಂಡದ ಪ್ರದರ್ಶನದ ಬಗ್ಗೆ ಟೀಕೆಗಳು ಶುರುವಾಗಿದೆ. ಇದರ ನಡುವೆ ಜಸ್ಪ್ರೀತ್ ಬುಮ್ರಾ ಮಾತನಾಡಿದ್ದು, ಖಂಡಿತವಾಗಿಯೂ ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ.
ಸತತವಾಗಿ ಕ್ರಿಕೆಟ್ ಆಡುತ್ತಿರುವ ಟೀಮ್ ಇಂಡಿಯಾ (Team India) ಆಟಗಾರರು ಟಿ20 ವಿಶ್ವಕಪ್ನಲ್ಲಿ (T20 World Cup) ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್ನಲ್ಲಿ ಅಧಿಕೃತವಾಗಿ ಕಣಕ್ಕಿಳಿಯುವ ಮೊದಲು ಅಭ್ಯಾಸ ಪಂದ್ಯನ್ನಾಡಿದ್ದ ಭಾರತ ಆಡಿದ ಎರಡೂ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ನಂತರ ಪಾಕಿಸ್ತಾನ (India vs Pakistan) ವಿರುದ್ಧ ಸೋಲು ಕಾಣುವ ಮೂಲಕ ಅಭಿಯಾನ ಆರಂಭಿಸಿದ್ದ ಕೊಹ್ಲಿ ಪಡೆ, ಭಾನುವಾರ ನಡೆದ ನ್ಯೂಜಿಲೆಂಡ್ (India vs New Zealand) ವಿರುದ್ಧವೂ ಗೆಲುವು ಕಾಣಲಿಲ್ಲ. ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾದ ದೈತ್ಯ ಭಾರತ ತಂಡ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳಿಂದ ಸೋತು ಸುಣ್ಣವಾಗಿದೆ. ಸೆಮಿ ಫೈನಲ್ಗೇರುವುದು ತುಂಬಾನೆ ಕಷ್ಟ ಎಂಬಂತಾಗಿದೆ. ಹೀಗಿರುವಾಗ ಪಂದ್ಯ ಮುಗಿದ ಬಳಿಕ ಮಾತನಾಡಿರುವ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಒಂದಿಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಭಾನುವಾರ ದುಬೈ ಅಂತರಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ, ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 110 ರನ್‌ಗಳ ಅಲ್ಪ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಗೆಲ್ಲಲು 111 ರನ್‌ಗಳ ಸುಲಭದ ಗುರಿ ಬೆನ್ನತ್ತಿದ ಕಿವೀಸ್ ಪಡೆ ಎಚ್ಚರಿಕೆಯ ಆಟವಾಡಿ 14.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟದಲ್ಲಿ ಮೆಟ್ಟಿನಿಂತಿತು.
ಟೀಮ್ ಇಂಡಿಯಾ ಸೋಲಿನ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವ ಶ್ರೇಷ್ಠ ಆಟಗಾರರಿದ್ದರೂ ತಂಡದ ಪ್ರದರ್ಶನದ ಬಗ್ಗೆ ಟೀಕೆಗಳು ಶುರುವಾಗಿದೆ. ಇದರ ನಡುವೆ ಜಸ್ಪ್ರೀತ್ ಬುಮ್ರಾ ಮಾತನಾಡಿದ್ದು, ಖಂಡಿತವಾಗಿಯೂ ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ‘ನೀವು ಕುಟುಂಬವನ್ನು ಮಿಸ್ ಮಾಡಿಕೊಂಡಿರುತ್ತೀರಿ. ಕಳೆದ 6 ತಿಂಗಳುಗಳಿಂದ ಕ್ರಿಕೆಟ್ ಪಂದ್ಯಕ್ಕಾಗಿ ಅಲ್ಲಿ, ಇಲ್ಲಿ ಓಡಾಡುತ್ತಿದ್ದೇವೆ. ಈ ಎಲ್ಲ ವಿಚಾರ ಆಟಗಾರರಲ್ಲಿ ಕಾಡುತ್ತಿರುತ್ತವೆ. ಮೈದಾನದಲ್ಲಿ ಆಡುವಾಗ ಈ ಆಲೋಚನೆ ಇಲ್ಲದಿರಬಹುದು. ಆದರೆ, ನೀವು ಬಹಳಷ್ಟು ವಿಚಾರಗಳನ್ನು ಕಟ್ಟಿಕೊಂಡಿರಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಖಂಡಿತವಾಗಿಯೂ ನಿಮಗೆ ವಿಶ್ರಾಂತಿ ಬೇಕಾಗುತ್ತದೆ’ ಎಂದು ಬುಮ್ರಾ ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, ‘ಪಂದ್ಯಗಳ ವೇಳಾಪಟ್ಟಿ ಸಾಗುತ್ತಲೇ ಇರುತ್ತದೆ. ಹೀಗಾಗಿ ಬಯೋ ಬಬಲ್ನಲ್ಲೇ ನೀವು ಮುಂದುವರೆಯಬೇಕು. ಕುಟುಂಬದಿಂದ ದೂರವಿರಬೇಕು. ಇದು ಮನಸ್ಸನ್ನು ಹತೋಟಿಯಲ್ಲಿ ಇಡಲು ಸಾಧ್ಯಮಾಡುವುದಿಲ್ಲ. ಬಿಸಿಸಿಐ ಆಟಗಾರರನ್ನು ಸಾಕಷ್ಟು ಒತ್ತಡದಿಂದ ಪೂರ್ಣಗೊಳಿಸಲು ಶ್ರಮವಹಿಸುತ್ತಿದೆ. ಇದು ನಾವೀಗ ಸಾಗುತ್ತಿರುವ ಕಷ್ಟದ ದಿನವಾಗಿದೆ’ ಎಂದು ಬುಮ್ರಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Virat Kohli: ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಯಾರನ್ನೂ ದೂರದ ವಿರಾಟ್ ಕೊಹ್ಲಿ: ಏನಂದ್ರು ಗೊತ್ತೇ?
MS Dhoni: ವರ್ಕ್ ಆಗದ ಮೆಂಟರ್ ಧೋನಿ ಪ್ಲಾನ್: ಹಲವು ಬದಲಾವಣೆ ಮಾಡಿ ಎರಡನೇ ಸೋಲುಂಡಿತು ಭಾರತ
(Jasprit Bumrah talking during a virtual post-match press conference After India vs New Zealand T20 World Cup Match)