ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕಾಗಿ ಘೋಷಿಸಲಾಗಿರುವ 16 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಎಡಗೈ ವೇಗಿ ಯಶ್ ದಯಾಳ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹಾಗೆಯೇ ಈ ಸರಣಿಯ ಮೂಲಕ ರಿಷಭ್ ಪಂತ್ ಭಾರತ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಇನ್ನು ಈ ಬಾರಿ ಆಯ್ಕೆ ಮಾಡಲಾದ 16 ಸದಸ್ಯರಲ್ಲಿ ಆರು ಪರಿಪೂರ್ಣ ಬ್ಯಾಟರ್ಗಳಿದ್ದಾರೆ. ಇವರ ಜೊತೆ ಮೂವರು ಆಲ್ರೌಂಡರ್ಗಳಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ವಿಕೆಟ್ ಕೀಪರ್ಗಳಾಗಿ ಇಬ್ಬರಿದ್ದರೆ, ಬೌಲರ್ಗಳಾಗಿ ಐವರಿಗೆ ಸ್ಥಾನ ಕಲ್ಪಿಸಲಾಗಿದೆ.
ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!
ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಬಿಸಿಸಿಐ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಇನ್ನು 2ನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಬದಲಾಗುವ ಸಾಧ್ಯತೆಯಿದೆ. ಅಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದ್ದು, ಈ ಮೂಲಕ ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆಹಾಕಬಹುದು. ಹೀಗಾಗಿಯೇ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮಾತ್ರ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ಅದರಂತೆ ಭಾರತ ಟೆಸ್ಟ್ ತಂಡದ ಈ ಕೆಳಗಿನಂತಿದೆ…
ಭಾರತ vs ಬಾಂಗ್ಲಾದೇಶ್ ಸರಣಿ ವೇಳಾಪಟ್ಟಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಗುರುವಾರ, 19 ಸೆಪ್ಟೆಂಬರ್ 2024 | 9:30 AM | ಚೆನ್ನೈ |
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಶುಕ್ರವಾರ, 27 ಸೆಪ್ಟೆಂಬರ್ 2024 | 9:30 AM | ಕಾನ್ಪುರ |
1ನೇ ಟಿ20, ಭಾರತ vs ಬಾಂಗ್ಲಾದೇಶ | ಸೋಮವಾರ, 7 ಅಕ್ಟೋಬರ್ 2024 | 7 PM | ಗ್ವಾಲಿಯರ್ |
2ನೇ ಟಿ20, ಭಾರತ vs ಬಾಂಗ್ಲಾದೇಶ | ಗುರುವಾರ, 10 ಅಕ್ಟೋಬರ್ 2024 | 7 PM | ದೆಹಲಿ |
3ನೇ ಟಿ20, ಭಾರತ vs ಬಾಂಗ್ಲಾದೇಶ | ಭಾನುವಾರ, 13 ಅಕ್ಟೋಬರ್ 2024 | 7 PM | ಹೈದರಾಬಾದ್ |
Published On - 7:59 am, Mon, 9 September 24