T20 World Cup 2022: ಟಿ20 ವಿಶ್ವಕಪ್​ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ

| Updated By: ಝಾಹಿರ್ ಯೂಸುಫ್

Updated on: Oct 22, 2022 | 8:30 PM

T20 World Cup 2022 India Schedule: ಭಾನುವಾರ (ಅ.23) ನಡೆಯಲಿರುವ ಈ ಪಂದ್ಯದ ಮೂಲಕ India vs Pakistan ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ.

T20 World Cup 2022: ಟಿ20 ವಿಶ್ವಕಪ್​ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ
ಟೀಮ್ ಇಂಡಿಯಾ
Follow us on

T20 World Cup 2022: ಟಿ20 ವಿಶ್ವಕಪ್​ನ ಸೂಪರ್-12 ಪಂದ್ಯಗಳು ಶುರುವಾಗಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ನ್ಯೂಜಿಲೆಂಡ್ (Australia vs New zealand) ತಂಡವು ಶುಭಾರಂಭ ಮಾಡಿದೆ. ಭಾರತ ತಂಡವು (Team India) ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ಧ ಆಡಲಿದೆ. ಭಾನುವಾರ (ಅ.23) ನಡೆಯಲಿರುವ ಈ ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ. ಸೂಪರ್​-12 ಸುತ್ತಿನಲ್ಲಿ ಟೀಮ್ ಇಂಡಿಯಾ ಗ್ರೂಪ್​-2 ನಲ್ಲಿದ್ದು, ಹೀಗಾಗಿ ಪಾಕಿಸ್ತಾನ್, ಬಾಂಗ್ಲಾದೇಶ್, ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನೆದರ್​ಲ್ಯಾಂಡ್ಸ್​ ತಂಡಗಳ ವಿರುದ್ಧ ಆಡಲಿದೆ.
ಟಿ20 ವಿಶ್ವಕಪ್ ಗ್ರೂಪ್​ಗಳು:

ಗ್ರೂಪ್- 1 ತಂಡಗಳು:

ಗ್ರೂಪ್- 1

  • ಅಫ್ಘಾನಿಸ್ತಾನ್
  • ಆಸ್ಟ್ರೇಲಿಯಾ
  • ಇಂಗ್ಲೆಂಡ್
  • ಐರ್ಲೆಂಡ್
  • ನ್ಯೂಜಿಲೆಂಡ್
  • ಶ್ರೀಲಂಕಾ

ಗ್ರೂಪ್-2

  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ನೆದರ್​ಲ್ಯಾಂಡ್ಸ್​
  • ಸೌತ್ ಆಫ್ರಿಕಾ
  • ಜಿಂಬಾಬ್ವೆ

ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:

  • ಅಕ್ಟೋಬರ್-23 : ಭಾರತ vs ಪಾಕಿಸ್ತಾನ- ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)
  • ಅಕ್ಟೋಬರ್-27: ಭಾರತ vs ನೆದರ್​ಲ್ಯಾಂಡ್ಸ್​- ಸಿಡ್ನಿ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 12.30 ಕ್ಕೆ ಶುರು)
  • ಅಕ್ಟೋಬರ್-30: ಭಾರತ vs ದಕ್ಷಿಣ ಆಫ್ರಿಕಾ- ಪರ್ತ್ ಸ್ಟೇಡಿಯಂ (ಸಮಯ: ಸಂಜೆ 4.30 ಕ್ಕೆ ಶುರು)
  • ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)
  • ನವೆಂಬರ್-6: ಭಾರತ vs ಜಿಂಬಾಬ್ವೆ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.