ಭಾರತ-ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ ಬುಧವಾರದಿಂದ ಶುರುವಾಗಲಿದೆ. ಈ ಪಂದ್ಯದೊಂದಿಗೆ ಟೀಮ್ ಇಂಡಿಯಾ (Team India) ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಪದಾರ್ಪಣೆ ಮಾಡಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಭಾರತ ಏಕದಿನ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಆಡುತ್ತಿಲ್ಲ. ಇದಾಗ್ಯೂ ಮುಂದಿನ ದಿನಗಳಲ್ಲಿ ಟಿ20 ತಂಡದಲ್ಲಿ ಮಾಜಿ ನಾಯಕನ ಪಾತ್ರವೇನು ಎಂಬ ಪ್ರಶ್ನೆಯೊಂದು ಹೊಸ ನಾಯಕ ರೋಹಿತ್ ಶರ್ಮಾ ಮುಂದಿಡಲಾಗಿದೆ. ನ್ಯೂಜಿಲೆಂಡ್ ನಡುವಣ ಟಿ20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕೇಳಲಾದ ಈ ಪ್ರಶ್ನೆಗೆ ಹಿಟ್ಮ್ಯಾನ್ ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿ ತಂಡದಲ್ಲಿ ಇದುವರೆಗೆ ನಿರ್ವಹಿಸಿದ ಪಾತ್ರವನ್ನೇ ಮುಂದುವರೆಸಲಿದ್ದಾರೆ ಎಂದಿದ್ದಾರೆ ರೋಹಿತ್ ಶರ್ಮಾ. ಏಕೆಂದರೆ ಅವರು ತಂಡದ ಪ್ರಮುಖ ಆಟಗಾರ. ಟಿ20 ತಂಡದಲ್ಲಿ ಈ ಹಿಂದಿನಂತೆ ಪ್ರಮುಖ ಸದಸ್ಯರಾಗಿಯೇ ಇರಲಿದ್ದಾರೆ. ಇನ್ನು ಪ್ರತಿ ಪಂದ್ಯದಲ್ಲಿ ಆಡುವಾಗಲೂ ಪಾತ್ರ ಬದಲಾಗುತ್ತದೆ. ಅದರಂತೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬ ಆಟಗಾರನ ಪಾತ್ರ ಕೂಡ ಬದಲಾಗಿದೆ. ಇದಕ್ಕೆ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರರು ಕೂಡ ಸಿದ್ಧರಿರುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತೆ ತಂಡವನ್ನು ಸೇರಿಕೊಂಡ ಮೇಲೆ ಟೀಮ್ ಇಂಡಿಯಾ ಮತ್ತಷ್ಟು ಬಲಗೊಳ್ಳಲಿದೆ ಎಂದಿರುವ ಹಿಟ್ಮ್ಯಾನ್, ಅವರು ಅದ್ಭುತ ಆಟಗಾರ ಮತ್ತು ಅಷ್ಟೇ ಅನುಭವ ಕೂಡ ಹೊಂದಿದ್ದಾರೆ. ಹೀಗಾಗಿ ಅವರ ಆಗಮನವು ನಮ್ಮ ತಂಡದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಟೀಮ್ ಇಂಡಿಯಾ ಟಿ20 ನಾಯಕ ರೋಹಿತ್ ಶರ್ಮಾ ಹೇಳಿದರು.
ಭಾರತ ಟಿ20 ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಭಾರತ-ನ್ಯೂಜಿಲ್ಯಾಂಡ್ ಸರಣಿ ವೇಳಾಪಟ್ಟಿ
1ನೇ ಟಿ20: 17 ನವೆಂಬರ್ (ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಜೈಪುರ)
2ನೇ ಟಿ20 ಪಂದ್ಯ: 19 ನವೆಂಬರ್ (JSCA ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್, ರಾಂಚಿ)
3ನೇ ಟಿ20 ಪಂದ್ಯ: 21 ನವೆಂಬರ್ (ಈಡನ್ ಗಾರ್ಡನ್ಸ್, ಕೋಲ್ಕತಾ)
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(India T20I captain Rohit Sharma explains Virat Kohli’s role in Rahul Dravid era)