IND vs LEI: ಭರತ್ ಮೇಲೆ ಭಾರತ ನಂಬಿಕೆ: ದ್ವಿತೀಯ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ ಮುನ್ನಡೆ

| Updated By: Vinay Bhat

Updated on: Jun 25, 2022 | 7:33 AM

IND vs ENG: ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಕೆಎಸ್ ಭರತ್ ಹಾಗೂ ಶುಭ್ಮನ್ ಗಿಲ್ 62 ರನ್​ಗಳ ಜೊತೆಯಾಟ ಆಡಿದರು. ಗಿಲ್ 34 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು.

IND vs LEI: ಭರತ್ ಮೇಲೆ ಭಾರತ ನಂಬಿಕೆ: ದ್ವಿತೀಯ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ ಮುನ್ನಡೆ
Follow us on

ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ ಒಂದು ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್ ಇಂಡಿಯಾ ಲೀಸೆಸ್ಟರ್ಷೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಮೊದಲ ದಿನ 246 ರನ್ ಗಳಿಸಿ ಡಿಕ್ಕೇರ್ ಘೋಷಿಸಿದ್ದ ರೋಹಿತ್ ಪಡೆ ಬಳಿಕ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಲೀಸೆಸ್ಟರ್ಷೈರ್ ಪರ ಆಡುತ್ತಿರುವ ರಿಷಭ್ ಪಂತ್ ಅರ್ಧಶತಕ ಸಿಡಿಸಿದರೂ ಭಾರತಕ್ಕೆ ದೊಡ್ಡ ತೊಂದರೆ ಆಗಲಿಲ್ಲ. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಬೌಲಿಂಗ್ ದಾಳಿಗೆ ತತ್ತರಿಸಿದ ಲೀಸೆಸ್ಟರ್ಷೈರ್ 244 ರನ್​ಗೆ ಆಲೌಟ್ ಆಯಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. 82 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅಜೇಯ 70 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಶ್ರೀಕರ್ ಭರತ್ ಎರಡನೇ ಇನ್ನಿಂಗ್ಸ್​​ನಲ್ಲಿ ಉತ್ತಮ ಆಟವಾಡುತ್ತಿದ್ದಾರೆ.

ಮೊದಲ ಇನ್ನಿಂಗ್ಸ್​​ನಲ್ಲಿ ಏನಾಗಿತ್ತು?:

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ 100 ರನ್​ಗೂ ಮೊದಲೇ ತನ್ನ ಮುಖ್ಯ 5 ವಿಕೆಟ್​ಗಳನ್ನು ಕಳೆದುಕೊಂಡಿತು. ಓಪನರ್​​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್​ಗೆ 35 ರನ್​ಗಳ ಕಾಣಿಕೆ ನೀಡಿದರಷ್ಟೆ. 21 ರನ್ ಗಳಿಸಿ ಗಿಲ್ ಔಟಾದರೆ, 25 ರನ್ ಗಳಿಸಿ ಹಿಟ್​ಮ್ಯಾನ್ ಪೆವಿಲಿಯನ್ ಸೇರಿಕೊಂಡರು. ಹನುಮಾ ವಿಹಾರಿ ಆಟ ಕೇವಲ 3 ರನ್​ಗೆ ಅಂತ್ಯವಾಯಿತು. ವಿರಾಟ್ ಕೊಹ್ಲಿ 69 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಫೋರ್, 1 ಸಿಕ್ಸರ್​ನೊಂದಿಗೆ 33 ರನ್​ಗೆ ಔಟಾದರು. ಶ್ರೇಯಸ್ ಅಯ್ಯರ್ ಕಳಪೆ ಫಾರ್ಮ್ ಮುಂದುವರೆಸಿ ಸೊನ್ನೆ ಸುತ್ತಿದರು.

ಇದನ್ನೂ ಓದಿ
ENG vs NZ: ಆಂಗ್ಲರ ಎದುರು ಹ್ಯಾಟ್ರಿಕ್ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್; 73 ವರ್ಷಗಳ ಹಳೆಯ ದಾಖಲೆ ಪುಡಿ ಪುಡಿ!
Lionel Messi: ಐಷರಾಮಿ ಬಂಗಲೆ, ಖಾಸಗಿ ಜೆಟ್, ದುಬಾರಿ ಕಾರುಗಳ ಭರಾಟೆ, ಲಿಯೋನೆಲ್ ಮೆಸ್ಸಿ ವೈಭವದ ಬದುಕು ಹೇಗಿದೆ ಗೊತ್ತಾ?
PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ
ಐಪಿಎಲ್​ನಲ್ಲಿ ಕಳ್ಳಾಟ, ಕ್ರಿಕೆಟ್​ನಿಂದ ನಿಷೇಧ; ಜೀವನ ನಿರ್ವಹಣೆಗಾಗಿ ಶೂ, ಬಟ್ಟೆ ಮಾರುತ್ತಿರುವ ಪಾಕ್ ಮೂಲದ ಅಂಪೈರ್

T20I World Record: ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ ಭಾರತ; ಹೊಸ ದಾಖಲೆಯತ್ತ ರೋಹಿತ್ ಸೇನೆ!

ರವೀಂದ್ರ ಜಡೇಜಾ ಕೂಡ 13 ರನ್​​ಗೆ ಸುಸ್ತಾದರು. ಈ ಸಂದರ್ಭ ಕ್ರೀಸ್​ಗೆ ಬಂದ ಶ್ರೀಕರ್ ಭರತ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಶಾರ್ದೂಲ್ ಥಾಕೂರ್(6) ಇವರಿಗೆ ಸಾಥ್ ನೀಡಲಿಲ್ಲ. ಉಮೇಶ್ ಯಾದವ್ 23 ರನ್ ಗಳಿಸಿ ಕೆಲಹೊತ್ತು ಕ್ರೀಸ್​​ನಲ್ಲಿದ್ದರು. ಇದೀಗ ಮೊಹಮ್ಮದ್ ಶಮಿ ಜೊತೆಯಾಗಿರುವ ಭರತ್​ ಭಾರತಕ್ಕೆ ರನ್ ಕೊಡುಗೆ ನೀಡುತ್ತಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 60.2 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿ ಡಿಕ್ಲೇರ್ ಘೀಷಿಸಿತು. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್​​ನೊಂದಿಗೆ ಅಜೇಯ 70 ರನ್ ಗಳಿಸಿದರು.

 ಶಮಿ-ಜಡೇಜಾ ಬೌಲಿಂಗ್ ದಾಳಿ:

ಲೀಸೆಸ್ಟರ್ಷೈರ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಎದುರು ರನ್‌ ಹೆಕ್ಕಲು ಪರದಾಟ ನಡೆಸಿತು. ರಿಷಭ್ ಪಂತ್‌ 76 ರನ್‌ ಸಿಡಿಸಿದ್ದನ್ನು ಬಿಟ್ಟರೆ, ಲೂಯಿಸ್‌ ಕಿಂಬರ್‌ (31) ಮತ್ತು ರಿಷಿ ಪಟೇಲ್‌ (34) ಕೊಂಚ ಪ್ರತಿರೋಧವೊಡ್ಡಿದರು. ಭಾರತ ತಂಡದ ಪರ ಮೊಹಮ್ಮದ್‌ ಶಮಿ 12 ಓವರ್‌ಗಳಲ್ಲಿ 42 ರನ್‌ ಕೊಟ್ಟು 3 ವಿಕೆಟ್‌ ಪಡೆದರು. ಮೊಹಮ್ಮದ್‌ ಸಿರಾಜ್‌ 26ಕ್ಕೆ 2 ವಿಕೆಟ್‌ ಪಡೆದರೆ, ಶಾರ್ದುಲ್‌ ಠಾಕೂರ್‌ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್‌ ಪಡೆದರು.

ಭಾರತದ ಎರಡನೇ ಇನ್ನಿಂಗ್ಸ್:

ಬಳಿಕ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಕೆಎಸ್ ಭರತ್ ಹಾಗೂ ಶುಭ್ಮನ್ ಗಿಲ್ 62 ರನ್​ಗಳ ಜೊತೆಯಾಟ ಆಡಿದರು. ಗಿಲ್ 34 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ದಿನದಾಟದ ಅಂತ್ಯಕ್ಕೆ ಭಾರತ 18 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. ಭರತ್ 59 ಎಸೆತಗಳಲ್ಲಿ 31 ರನ್ ಮತ್ತು ಹನುಮಾ ವಿಹಾರಿ 9 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

IND VS LEI: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧವೇ ಅರ್ಧಶತಕ ಸಿಡಿಸಿದ ರಿಷಭ್ ಪಂತ್..!