PSG ಯ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಇಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದರೆ ಜೂನ್ 24 ರಂದು ಜನಿಸಿದ ಮೆಸ್ಸಿ ಸುಮಾರು ಎರಡು ದಶಕಗಳಿಂದ ಫುಟ್ಬಾಲ್ ಜಗತ್ತನ್ನು ಆಳುತ್ತಿದ್ದಾರೆ. ತನ್ನ ಆಟದ ಆಧಾರದ ಮೇಲೆ, ಸಾಮಾನ್ಯ ಜನರು ಕನಸು ಕಾಣದಂತಹ ಜೀವನಶೈಲಿಯನ್ನು ಅವರು ಸ್ವತಃ ರಚಿಸಿಕೊಂಡಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಆಟಗಾರನಲ್ಲಿ ಎಲ್ಲವೂ ದುಬಾರಿ ಮತ್ತು ವಿಶೇಷವಾಗಿದೆ, ಅದು ಅವರ ಮನೆಯಾಗಿರಲಿ, ವಾಹನಗಳು ಅಥವಾ ಖಾಸಗಿ ಜೆಟ್ ಆಗಿರಲಿ.
ಲಿಯೋನೆಲ್ ಮೆಸ್ಸಿ ಅವರ ವಾರ್ಷಿಕ ನಿವ್ವಳ ಮೌಲ್ಯ ಸುಮಾರು 31 ಬಿಲಿಯನ್ ಆಗಿದೆ. ಮೆಸ್ಸಿ ಮನೆ ಬಾರ್ಸಿಲೋನಾದಲ್ಲಿದ್ದು, ಅಲ್ಲಿ ಅವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಿದ್ದಾರೆ. ಇವರ ಮನೆಯ ಮೌಲ್ಯ ಸುಮಾರ 52 ಕೋಟಿಯಾಗಿದ್ದು, ಮೆಸ್ಸಿ ಅವರ ಮನೆಯಲ್ಲಿ ಫುಟ್ಬಾಲ್ ಪಿಚ್, ಈಜುಕೊಳ, ಒಳಾಂಗಣ ಜಿಮ್ ಮತ್ತು ಮಕ್ಕಳಿಗೆ ಆಟವಾಡಲು ಆಟದ ಮೈದಾನವಿದೆ. ಅವರ ಮನೆಯಿಂದ ಸಮುದ್ರದ ಅತ್ಯುತ್ತಮ ನೋಟವೂ ಕಂಡುಬರುತ್ತದೆ. ತನ್ನ ಖಾಸಗಿತನಕ್ಕಾಗಿ, ಮೆಸ್ಸಿ ತನ್ನ ಮನೆಯ ನೆರೆಹೊರೆಯಲ್ಲಿ ಮನೆಯನ್ನು ಸಹ ಖರೀದಿಸಿದ್ದಾರೆ. ಮೆಸ್ಸಿ ಅವರು ತಮ್ಮ ಮನೆಯಲ್ಲಿ ತಮ್ಮ ಜೆರ್ಸಿಯ ವಿಶೇಷ ಸಂಗ್ರಹವನ್ನು ಇಟ್ಟುಕೊಂಡಿದ್ದಾರೆ.
ಅನೇಕ ಸ್ಟಾರ್ ಫುಟ್ಬಾಲ್ ಆಟಗಾರರಂತೆ, ಮೆಸ್ಸಿ ಕೂಡ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಈ ಖಾಸಗಿ ಜೆಟ್ ಬೆಲೆ ಬರೋಬ್ಬರಿ 125 ಕೋಟಿ ರೂಪಾಯಿ. ಈ ವಿಮಾನದ ಮೆಟ್ಟಿಲುಗಳ ಮೇಲೆ ಅವರ ಕುಟುಂಬದ ಹೆಸರನ್ನು ಬರೆಯಲಾಗಿದೆ. ಒಂದೇ ಬಾರಿಗೆ 16 ಮಂದಿ ಆರಾಮವಾಗಿ ವಿಮಾನದಲ್ಲಿ ಪ್ರಯಾಣಿಸಬಹುದು. ಮೆಸ್ಸಿ ಈ ಜೆಟ್ ಅನ್ನು ಖರೀದಿಸಿಲ್ಲ ಆದರೆ ಅದನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ.
ಫುಟ್ಬಾಲ್ ಆಟಗಾರನ ಹೊರತಾಗಿ, ಮೆಸ್ಸಿ ದೊಡ್ಡ ಉದ್ಯಮಿ ಕೂಡ. ಅವರು ಬಾರ್ಸಿಲೋನಾದಲ್ಲಿ ನಾಲ್ಕು-ಸ್ಟಾರ್ ಹೋಟೆಲ್‌ನ ಮಾಲೀಕರಾಗಿದ್ದಾರೆ, ಇದು ಆ ಪ್ರದೇಶದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಹೋಟೆಲ್ ನಲ್ಲಿ 77 ಬೆಡ್ ರೂಂಗಳಿದ್ದು, ಇಲ್ಲಿ ಒಂದು ರಾತ್ರಿ ಕಳೆಯಲು ಕನಿಷ್ಠ 10 ಸಾವಿರ ರೂ. ಇದರ ಜೊತೆಯಲ್ಲಿ, ಇಲ್ಬಿಜಾ, ಮಜೋರ್ಕಾ, ಬಾಕ್ವೇರಾ ಮತ್ತು ಅಂಡೋರಾದಲ್ಲಿ ಮ್ಯಾಕಿಸ್ ಹೋಟೆಲ್‌ಗಳನ್ನು ಸಹ ಖರೀದಿಸಿದ್ದಾರೆ.
ಮೆಸ್ಸಿ ಅವರ ಕಾರು ಸಂಗ್ರಹವೂ ವಿಶೇಷವಾಗಿದೆ. ಹಲವು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಆಡಿ, ಫೆರಾರಿಯಿಂದ 11 ಕೋಟಿಯ ಪಗಾನಿ ಜೊಂಡಾ ಕಾರನ್ನು ಸಹ ಹೊಂದಿದ್ದಾರೆ. ಅದೇ ಸಮಯದಲ್ಲಿ, ಅವರು 95 ಲಕ್ಷ ಮೌಲ್ಯದ ಗ್ರಾಂಟುರಿಸ್ಮೊ ಮತ್ತು ಫೆರಾರಿ ಎಫ್ 43 ಮಾಲೀಕರೂ ಆಗಿದ್ದಾರೆ. ಮೆಸ್ಸಿ ಆಡಿ ಕಂಪನಿಯ ರಾಯಭಾರಿಯೂ ಆಗಿದ್ದಾರೆ.
Published On - 6:07 pm, Fri, 24 June 22