T20 World Cup 2022: ಟಿ20 ವಿಶ್ವಕಪ್ಗಾಗಿ ಭರ್ಜರಿ ಸಿದ್ಧತೆಯಲ್ಲಿರುವ ಟೀಮ್ ಇಂಡಿಯಾ (Team India) ಈ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಎರಡು ತಂಡಗಳ ವಿರುದ್ಧ ಸರಣಿಗಳನ್ನು ಆಡಲಿದೆ. ನವೆಂಬರ್ 13 ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಇದರ ಬೆನ್ನಲ್ಲೇ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯು ನವೆಂಬರ್ 18 ರಿಂದ ಶುರುವಾಗಲಿದೆ. ಕಿವೀಸ್ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ನವೆಂಬರ್ 30 ರಂದು ಕೊನೆಯಗೊಳ್ಳಲಿದ್ದು, ಇದಾದ ಬಳಿಕ ಭಾರತ ತಂಡವು ಬಾಂಗ್ಲಾದೇಶ್ ವಿರುದ್ಧ ಸರಣಿಗಾಗಿ ತೆರಳಲಿದೆ.
ಡಿಸೆಂಬರ್ 4 ರಿಂದ ಬಾಂಗ್ಲಾದೇಶ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ 2015 ರ ಬಳಿಕ ಭಾರತ ತಂಡವು ಬಾಂಗ್ಲಾದೇಶದಲ್ಲಿ ಯಾವುದೇ ಸರಣಿ ಆಡಿಲ್ಲ.
ಇದನ್ನೂ ಓದಿ: T20 World Cup 2022: ಸೂಪರ್-12 ಗೆ ಎಂಟ್ರಿಕೊಟ್ಟ ಮತ್ತೆರಡು ತಂಡಗಳು
ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿ ಈ ಕೆಳಗಿನಂತಿದೆ.
ಭಾರತ-ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ:
ಭಾರತ-ನ್ಯೂಜಿಲೆಂಡ್ ಏದಕಿನ ಸರಣಿ ವೇಳಾಪಟ್ಟಿ:
ಭಾರತ-ಬಾಂಗ್ಲಾದೇಶ್ ಏಕದಿನ ಸರಣಿ ವೇಳಾಪಟ್ಟಿ:
ಭಾರತ-ಬಾಂಗ್ಲಾದೇಶ್ ಟೆಸ್ಟ್ ಸರಣಿ ವೇಳಾಪಟ್ಟಿ:
Published On - 6:54 pm, Thu, 20 October 22