IND U19 vs AUS U19: ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಏಕದಿನ ಸರಣಿ ಗೆದ್ದ ಭಾರತ ಯುವ ಪಡೆ
IND U19 vs AUS U19: ಭಾರತದ ಅಂಡರ್-19 ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಆತಿಥೇಯರ ವಿರುದ್ಧ ನಡೆದ ಯೂತ್ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ವೈಭವ್ ಸೂರ್ಯವಂಶಿ (70 ರನ್), ವಿಹಾನ್ ಮಲ್ಹೋತ್ರಾ (70 ರನ್) ಮತ್ತು ಅಭಿಗ್ಯಾನ್ ಕುಂಡು (71 ರನ್) ಅವರ ಅರ್ಧಶತಕಗಳ ನೆರವಿನಿಂದ ಭಾರತ 300 ರನ್ ಗಳಿಸಿತು. ಆಸ್ಟ್ರೇಲಿಯಾದ ಜೇಡನ್ ಡ್ರೇಪರ್ ಅವರ ಶತಕ (107 ರನ್) ಹೊರತಾಗಿಯೂ, ತಂಡ 249 ರನ್‌ಗಳಿಗೆ ಆಲೌಟ್ ಆಯಿತು. ಭಾರತೀಯ ಬೌಲರ್‌ಗಳು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು.

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಅಂಡರ್-19 ತಂಡವು, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ (IND U19 vs AUS U19) ಸತತ ಎರಡನೇ ಯೂತ್ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೂವರ ಅರ್ಧಶತಕದ ನೆರವಿನಿಂದ 300 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 249 ರನ್‌ಗಳಿಗೆ ಆಲೌಟ್ ಆಗುವ ಮೂಲಕ 51 ರನ್ಗಳಿಂದ ಸೋಲೊಪ್ಪಿಕೊಂಡಿತು.
ಭಾರತದ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ 70 ರನ್ ಬಾರಿಸಿದರು. ವಿಹಾನ್ ಮಲ್ಹೋತ್ರಾ ಕೂಡ 70 ರನ್ಗಳ ಕಾಣಿಕೆ ನೀಡಿದರು. ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು 71 ರನ್ ಕಲೆಹಾಕಿದರು. ಇತ್ತ ಆಸ್ಟ್ರೇಲಿಯಾದ ಸೋಲಿನ ಹೊರತಾಗಿಯೂ ತಂಡದ ಸ್ಫೋಟಕ ಬ್ಯಾಟರ್ ಜೇಡೆನ್ ಡ್ರೇಪರ್ ಕೇವಲ 65 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದರು. ಆದಾಗ್ಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಜೇಡನ್ ಡ್ರೇಪರ್ ಶತಕ
ಜೇಡನ್ ಡ್ರೇಪರ್ ಕೇವಲ 72 ಎಸೆತಗಳಲ್ಲಿ 5 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳ ಸಹಾಯದಿಂದ 107 ರನ್ ಗಳಿಸಿದರು. ಯೂತ್ ಏಕದಿನ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಡ್ರೇಪರ್, ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆದಾಗ್ಯೂ, ಅವರ ಅತ್ಯುತ್ತಮ ಇನ್ನಿಂಗ್ಸ್ ಹೊರತಾಗಿಯೂ, ಆಸ್ಟ್ರೇಲಿಯಾ ತಂಡವು 249 ರನ್‌ಗಳಿಗೆ ಆಲೌಟ್ ಆಯಿತು.
ಪಂದ್ಯದಲ್ಲಿ 15 ಸಿಕ್ಸರ್‌ಗಳು
ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಒಟ್ಟು 15 ಸಿಕ್ಸರ್‌ಗಳು ಸಿಡಿದವು. ಇದರಲ್ಲಿ ವೈಭವ್ ಸೂರ್ಯವಂಶಿ ಅವರ ಕೊಡುಗೆ ಅತಿ ಹೆಚ್ಚು. ಸೂರ್ಯವಂಶಿ 6 ಸಿಕ್ಸರ್‌ಗಳನ್ನು ಬಾರಿಸಿದರೆ, ಅಭಿಗ್ಯಾನ್ ಕುಂದು ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಜೇಡನ್ ಡ್ರೇಪರ್ ಐದು ಸಿಕ್ಸರ್‌ಗಳನ್ನು ಬಾರಿಸಿದರು.
IND A vs AUS A: ಆರ್ಸಿಬಿ ನಾಯಕ ರಜತ್ ಪಾಟಿದರ್ಗೆ ನಾಯಕತ್ವ; ಏಕದಿನ ಸರಣಿಗೆ ಭಾರತ ತಂಡ ಪ್ರಕಟ
ಬ್ಯಾಟ್ಸ್‌ಮನ್‌ಗಳಲ್ಲದೆ, ಭಾರತೀಯ ಬೌಲರ್‌ಗಳು ಸಹ ಅಸಾಧಾರಣ ಪ್ರದರ್ಶನ ನೀಡಿದರು. ನಾಯಕ ಆಯುಷ್ ಮ್ಹಾತ್ರೆ ನಾಲ್ಕು ಓವರ್‌ಗಳಲ್ಲಿ 27 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಕನಿಷ್ಕ್ ಚೌಹಾಣ್ ಎರಡು ವಿಕೆಟ್‌ಗಳನ್ನು ಪಡೆದರು. ಸರಣಿಯ ಕೊನೆಯ ಯೂತ್ ಏಕದಿನ ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
