
ಭಾರತದ ಹಿರಿಯ ಕ್ರಿಕೆಟ್ ತಂಡವು ನವೆಂಬರ್ 14 ರಿಂದ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ (Asia Cup Rising Stars 2025) ಲೀಗ್ ಕೂಡ ಕತಾರ್‌ನ ದೋಹಾದಲ್ಲಿ ಪ್ರಾರಂಭವಾಗಲಿದೆ. ಇದೆಲ್ಲದರ ನಡುವೆ, ಇನ್ನೂ ಎರಡು ಭಾರತೀಯ ತಂಡಗಳು ಮೈದಾನದಲ್ಲಿ ಕಾಣಿಸಿಕೊಳ್ಳಲಿವೆ. ವಾಸ್ತವವಾಗಿ ಅಫ್ಘಾನಿಸ್ತಾನ ಅಂಡರ್ -19 ಕ್ರಿಕೆಟ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ತ್ರಿಕೋನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಅಫ್ಘಾನಿಸ್ತಾನ ಅಂಡರ್ -19, ಭಾರತ ಅಂಡರ್ -19 ಎ ಮತ್ತು ಬಿ ತಂಡಗಳು ಭಾಗವಹಿಸಲಿವೆ. ಇದಕ್ಕಾಗಿ ಬಿಸಿಸಿಐನ (BCCI) ಜೂನಿಯರ್ ಆಯ್ಕೆ ಸಮಿತಿ ಎರಡು ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ.
ಈ ತ್ರಿಕೋನ ಸರಣಿಯು ನವೆಂಬರ್ 17 ರಂದು ಪ್ರಾರಂಭವಾಗಲಿದೆ. ಸರಣಿಯ ಸ್ವರೂಪವು ಡಬಲ್ ರೌಂಡ್-ರಾಬಿನ್ ಸ್ವರೂಪವಾಗಿರುತ್ತದೆ, ಅಂದರೆ ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಆಡುತ್ತದೆ. ನಂತರ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಆಡುತ್ತವೆ. ಈ ಅಂತಿಮ ಪಂದ್ಯವು ನವೆಂಬರ್ 30 ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿವೆ. ಈ ಸರಣಿಗಾಗಿ ವಿಹಾನ್ ಮಲ್ಹೋತ್ರಾ ಅವರನ್ನು ಭಾರತ ಅಂಡರ್ -19 ಎ ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಆರನ್ ಜಾರ್ಜ್ ಭಾರತ ಅಂಡರ್ -19 ಬಿ ತಂಡವನ್ನು ಮುನ್ನಡೆಸಲಿದ್ದಾರೆ.
ವೇಳಾಪಟ್ಟಿಯ ಪ್ರಕಾರ, ಮೊದಲ ಪಂದ್ಯವು ನವೆಂಬರ್ 17 ರಂದು ಭಾರತ ಎ ಮತ್ತು ಭಾರತ ಬಿ ನಡುವೆ ನಡೆಯಲಿದೆ. ನಂತರ ನವೆಂಬರ್ 19 ರಂದು ಭಾರತ ಬಿ ಹಾಗೂ ಅಫ್ಘಾನಿಸ್ತಾನ, ನವೆಂಬರ್ 21 ರಂದು ಭಾರತ ಎ ಹಾಗೂ ಅಫ್ಘಾನಿಸ್ತಾನ, ನವೆಂಬರ್ 23 ರಂದು ಭಾರತ ಎ ಮತ್ತು ಭಾರತ ಬಿ, ನವೆಂಬರ್ 25 ರಂದು ಭಾರತ ಬಿ ಮತ್ತು ಅಫ್ಘಾನಿಸ್ತಾನ ಮತ್ತು ನವೆಂಬರ್ 27 ರಂದು ಭಾರತ ಎ ಹಾಗೂ ಅಫ್ಘಾನಿಸ್ತಾನ ನಡುವೆ ಪಂದ್ಯಗಳು ನಡೆಯಲಿವೆ. ನಂತರ ಫೈನಲ್ ಪಂದ್ಯ ನಡೆಯಲಿದೆ.
🚨 NEWS 🚨
India A U19 and India B U19 squads for U19 Triangular Series announced.
The triangular series will be played at the BCCI COE from November 17 to 30, with Afghanistan U19 as the third participating team.
Details 🔽 @IDFCFIRSTBankhttps://t.co/ELqwaNcVKX pic.twitter.com/KnTwAdeu7E
— BCCI (@BCCI) November 11, 2025
ಭಾರತ ಅಂಡರ್ 19 ಎ ತಂಡ: ವಿಹಾನ್ ಮಲ್ಹೋತ್ರಾ (ನಾಯಕ), ಅಭಿಗ್ಯಾನ್ ಕುಂಡು (ಉಪನಾಯಕ), ವಾಫಿ ಕುಚ್ಚಿ, ವಂಶ ಆಚಾರ್ಯ, ವಿನೀತ್ ವಿಕೆ, ಲಕ್ಷ್ಯ ರಾಯ್‌ಚಂದಾನಿ, ಎ. ರಾಪೋಲ್ (ವಿಕೆಟ್ ಕೀಪರ್), ಕನಿಷ್ಕ್ ಚೌಹಾಣ್, ಖಿಲನ್ ಎ ಪಟೇಲ್, ಅನ್ಮೋಲ್ಜೀತ್ ಸಿಂಗ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಅಶುತೋಷ್ ಮಹೀದಾ, ಆದಿತ್ಯ ರಾವತ್, ಮೊಹಮ್ಮದ್ ಮಲಿಕ್.
ಭಾರತ ಅಂಡರ್-19 ಬಿ ತಂಡ: ಆರನ್ ಜಾರ್ಜ್ (ನಾಯಕ), ವೇದಾಂತ್ ತ್ರಿವೇದಿ (ಉಪನಾಯಕ), ಯುವರಾಜ್ ಗೋಹಿಲ್, ಮೌಲ್ಯರಾಜ್ ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಆರ್ ಎಸ್ ಅಂಬ್ರಿಸ್, ಬಿ ಕೆ ಕಿಶೋರ್, ನಮನ್ ಪುಷ್ಪಕ್, ಹೇಮಾಚೂಡೇಶನ್ ಜೆ, ಉಧವ್ ಮೋಹನ್, ಇಶಾನ್ ಸೂದ್, ಡಿ ದೀಪೇಶ್, ರೋಹಿತ್ ಕುಮಾರ್ ದಾಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ