ಸೌತ್ ಆಫ್ರಿಕಾದ ಮಂಗಾಂಗ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾಗೆ ಯುವ ಆರಂಭಿಕ ಆಟಗಾರ ಆದರ್ಶ್ ಸಿಂಗ್ ಉತ್ತಮ ಆರಂಭ ಒದಗಿಸಿದ್ದಾರೆ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಅರ್ಶೀನ್ ಕುಲ್ಕರ್ಣಿ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮುಶೀರ್ ಖಾನ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಆದರ್ಶ್ 10 ಓವರ್ಗಳ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 61 ಕ್ಕೆ ತಂದು ನಿಲ್ಲಿಸಿದರು. ಅ ಬಳಿಕ ಕೂಡ ಉತ್ತಮ ಜೊತೆಯಾಟ ಮುಂದುವರೆಸಿದ ಈ ಜೋಡಿ 6 ರ ಸರಾಸರಿಯಲ್ಲಿ ರನ್ ಪೇರಿಸುತ್ತಿದ್ದಾರೆ.
ಇದೀಗ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿರುವ ಆದರ್ಶ್ ಸಿಂಗ್ ಹಾಗೂ ಮುಶೀರ್ ಖಾನ್ (34) ಕ್ರೀಸ್ನಲ್ಲಿದ್ದಾರೆ. ಅಲ್ಲದೆ 17 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 1 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ.
ನ್ಯೂಝಿಲೆಂಡ್ ಅಂಡರ್ 19 (ಪ್ಲೇಯಿಂಗ್ XI): ಜೇಮ್ಸ್ ನೆಲ್ಸನ್, ಟಾಮ್ ಜೋನ್ಸ್, ಸ್ನೇಹಿತ್ ರೆಡ್ಡಿ, ಲಾಚ್ಲಾನ್ ಸ್ಟಾಕ್‌ಪೋಲ್, ಆಸ್ಕರ್ ಜಾಕ್ಸನ್ (ನಾಯಕ), ಆಲಿವರ್ ಟೆವಾಟಿಯಾ, ಝಾಕ್ ಕಮ್ಮಿಂಗ್, ಅಲೆಕ್ಸ್ ಥಾಂಪ್ಸನ್ (ವಿಕೆಟ್‌ಕೀಪರ್), ಇವಾಲ್ಡ್ ಷ್ರೂಡರ್, ರಿಯಾನ್ ತ್ಸಾರ್ಕೆಸ್, ಮೇಸನ್ ಕ್ಲಾರ್ಕ್.
ಇದನ್ನೂ ಓದಿ: Shubman Gill: ಶುಭ್ಮನ್ ಗಿಲ್, ಅಹಮದಾಬಾದ್ ಪಿಚ್ನಲ್ಲಿ ಹುಲಿ, ಇತರೆಡೆ…
ಭಾರತ ಅಂಡರ್-19 (ಪ್ಲೇಯಿಂಗ್ XI): ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ನಮನ್ ತಿವಾರಿ, ರಾಜ್ ಲಿಂಬಾನಿ, ಸೌಮಿ ಪಾಂಡೆ.
ಭಾರತ: ಉದಯ್ ಸಹರನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೆಲ್ಲಿ ಅವನೀಶ್ ರಾವ್, ಸೌಮಿ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ ಮತ್ತು ರಾಜ್ ಲಿಂಬಾನಿ ನಮನ್ ತಿವಾರಿ.
ನ್ಯೂಝಿಲೆಂಡ್: ಆಸ್ಕರ್ ಜಾಕ್ಸನ್ (ನಾಯಕ), ಮೇಸನ್ ಕ್ಲಾರ್ಕ್, ಸ್ಯಾಮ್ ಕ್ಲೋಡ್, ಝಾಕ್ ಕಮ್ಮಿಂಗ್, ರೆಹಮಾನ್ ಹೆಕ್ಮಾಟ್, ಟಾಮ್ ಜೋನ್ಸ್, ಜೇಮ್ಸ್ ನೆಲ್ಸನ್, ಸ್ನೇಹಿತ್ ರೆಡ್ಡಿ, ಮ್ಯಾಟ್ ರೋವ್, ಇವಾಲ್ಡ್ ಸ್ರೂಡರ್, ಲಾಚ್ಲಾನ್ ಸ್ಟಾಕ್ಪೋಲ್, ಆಲಿವರ್ ತೆವಾಟಿಯಾ, ಅಲೆಕ್ಸ್ ಥಾಂಪ್ಸನ್, ಲುಕೆಸೋರ್ಗಸ್.