AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jay Shah: ದೊಡ್ಡ ಹುದ್ದೆ ಮೇಲೆ ಕಣ್ಣು; ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್​ ಶಾ ರಾಜೀನಾಮೆ?

Jay Shah: ಬಿಸಿಸಿಐ ಕಾರ್ಯದರ್ಶಿ ಜೊತೆಗೆ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಆದರೆ ಇದೀಗ ಶಾ ಶೀಘ್ರದಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹುದ್ದೆ ತೊರೆಯಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಜಯ್ ಶಾ ತಮ್ಮ ಅಧ್ಯಕ್ಷ ಹುದ್ದೆ ತೊರೆಯಲು ಕಾರಣವೂ ಇದ್ದು, ಇಷ್ಟು ವರ್ಷ ಭಾರತ ಕ್ರಿಕೆಟ್ ಹಾಗೂ ಏಷ್ಯಾ ಕ್ರಿಕೆಟ್​ನಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿದ್ದ ಜಯ್ ಶಾ ಇದೀಗ ವಿಶ್ವ ಕ್ರಿಕೆಟ್ ಆಳಲು ಚಿಂತಿಸಿದ್ದಾರೆ ಎಂದು ವರದಿಯಾಗಿದೆ.

Jay Shah: ದೊಡ್ಡ ಹುದ್ದೆ ಮೇಲೆ ಕಣ್ಣು; ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್​ ಶಾ ರಾಜೀನಾಮೆ?
ಜಯ್​ ಶಾ
ಪೃಥ್ವಿಶಂಕರ
|

Updated on:Jan 30, 2024 | 3:33 PM

Share

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ ಜನವರಿ 31 ಹಾಗೂ ಫೆಬ್ರವರಿ 1 ರಂದು  ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲ್ಲಿದೆ. ಎಸಿಸಿ ಅಧ್ಯಕ್ಷ ಜೈ ಶಾ (Jay Shah) ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ವರದಿಯಾಗಿದೆ. ಪ್ರಸ್ತುತ ಬಿಸಿಸಿಐ (BCCI) ಕಾರ್ಯದರ್ಶಿ ಜೊತೆಗೆ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಆದರೆ ಇದೀಗ ಶಾ ಶೀಘ್ರದಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹುದ್ದೆ ತೊರೆಯಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಜಯ್ ಶಾ ತಮ್ಮ ಅಧ್ಯಕ್ಷ ಹುದ್ದೆ ತೊರೆಯಲು ಕಾರಣವೂ ಇದ್ದು, ಇಷ್ಟು ವರ್ಷ ಭಾರತ ಕ್ರಿಕೆಟ್ ಹಾಗೂ ಏಷ್ಯಾ ಕ್ರಿಕೆಟ್​ನಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿದ್ದ ಜಯ್ ಶಾ ಇದೀಗ ವಿಶ್ವ ಕ್ರಿಕೆಟ್ ಆಳಲು ಚಿಂತಿಸಿದ್ದಾರೆ ಎಂದು ವರದಿಯಾಗಿದೆ.

ಐಸಿಸಿ ಅಧ್ಯಕ್ಷ ಹುದ್ದೆ ಮೇಲೆ ಜಯ್​ ಶಾ ಕಣ್ಣು

ಅಂದರೆ ಜಯ್​ ಶಾ ಇದೀಗ ಐಸಿಸಿ ಅಧ್ಯಕ್ಷ ಹುದ್ದೆಗೇರಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ವರ್ಷದ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಜೈ ಶಾ ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆಯಲ್ಲಿ ಗೆದ್ದು ಐಸಿಸಿ ಅಧ್ಯಕ್ಷರಾದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯಾಗಲಿದೆ. ಈ ಕಾರಣಕ್ಕಾಗಿ ಜಯ್ ಶಾ ಎಸಿಸಿಗೆ ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ. ಬಾಲಿಯಲ್ಲಿ ನಡೆಯುತ್ತಿರುವ ಎಸಿಸಿ ವಾರ್ಷಿಕ ಸಭೆ 2 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಏಷ್ಯಾದ ಎಲ್ಲಾ ಕ್ರಿಕೆಟ್ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ

ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ?

ಜೈ ಶಾ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಎಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಎಸಿಸಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿ 2 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಅಂದರೆ ಜೈ ಶಾ ಅಧಿಕಾರಾವಧಿಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಐಸಿಸಿ ಚುನಾವಣೆ ಹಿನ್ನಲೆಯಲ್ಲಿ ಜಯ್ ಶಾ ಮಹತ್ವದ ನಿರ್ಧಾರ ಕೈಗೊಂಡು ಒಂದು ವರ್ಷ ಮುಂಚಿತವಾಗಿ ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಆದರೆ, ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಜೈ ಶಾ ರಾಜೀನಾಮೆ ನೀಡುವುದು ಯಾವಾಗ, ರಾಜೀನಾಮೆ ನೀಡುತ್ತಾರೋ ಇಲ್ಲವೋ? ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.

ಮುಂದಿನ ಏಷ್ಯಾಕಪ್ 2025ರಲ್ಲಿ ನಡೆಯಲಿದ್ದು, ಟಿ20 ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಾವಳಿಯ ಆತಿಥ್ಯದ ಬಗ್ಗೆಯೂ ಎಸಿಸಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಮಾನ್ ಮತ್ತು ಯುಎಇ 2025 ರ ಏಷ್ಯಾಕಪ್ ಆಯೋಜಿಸಲು ಪ್ರಬಲ ಸ್ಪರ್ಧಿಗಳಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 30 January 24