‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ

ICC World Cup 2023: ಸರ್ಕಾರವಾಗಿ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರಿಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸಚಿವ ವಿಜೆಶೇಖರ ಹೇಳಿದರು. ನಮ್ಮ ಸಂಸ್ಥೆಗಳ ನ್ಯೂನತೆಗಳಿಗೆ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಾರ್ಯದರ್ಶಿ ಅಥವಾ ಇತರ ದೇಶಗಳನ್ನು ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

‘ನಮ್ಮಲ್ಲೇ ತಪ್ಪಿದೆ’; ರಣತುಂಗ ಆರೋಪಕ್ಕೆ ಜಯ್ ಶಾ ಬಳಿ ಕ್ಷಮೆಯಾಚಿಸಿದ ಶ್ರೀಲಂಕಾ ಸರ್ಕಾರ
ಜಯ್ ಶಾ, ಅರ್ಜುನ ರಣತುಂಗ
Follow us
|

Updated on: Nov 18, 2023 | 9:39 AM

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ (ICC World Cup 2023) ಶ್ರೀಲಂಕಾ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಹೀಗಾಗಿ ತಂಡದ ಪ್ರದರ್ಶನದಿಂದ ತಂಡದ ಮಾಜಿ ಆಟಗಾರರು ಗರಂ ಆಗಿದ್ದರು. ಇದೆಲ್ಲದರ ನಡುವೆ ಲಂಕಾ ತಂಡದ ಈ ಕಳಪೆ ಪ್ರದರ್ಶನಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah) ಅವರೇ ನೇರ ಕಾರಣ ಎಂದು ಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ (Arjuna Ranatunga) ಆರೋಪ ಹೊರಿಸಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಹೇಳಿಕೆಗಾಗಿ ಸಂಬಂಧಿಸಿದಂತೆ ಶ್ರೀಲಂಕಾ ಸರ್ಕಾರ (Sri Lanka government), ಜಯ್ ಶಾ ಅವರ ಕ್ಷಮೆಯಾಚಿಸಿದೆ. ನಿನ್ನೆ (ಶುಕ್ರವಾರ) ಸಂಸತ್ತಿನಲ್ಲಿ ಮಾತನಾಡಿದ ಸಚಿವರಾದ ಹರಿನ್ ಫರ್ನಾಂಡೋ ಮತ್ತು ಕಾಂಚನಾ ವಿಜೆಶೇಖರ ಅವರು ಈ ವಿಷಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಶ್ರೀಲಂಕಾದ ಆಡಳಿತಗಾರರಿಂದ ತಪ್ಪಾಗಿದೆಯೇ ಹೊರತು, ಬೇರೆ ಯಾವುದೇ ದೇಶವಲ್ಲ ಎಂದಿದ್ದಾರೆ.

ಶ್ರೀಲಂಕಾ ಸರ್ಕಾರ ಹೇಳಿದ್ದೇನು?

ಸರ್ಕಾರವಾಗಿ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರಿಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸಚಿವ ವಿಜೆಶೇಖರ ಹೇಳಿದರು. ನಮ್ಮ ಸಂಸ್ಥೆಗಳ ನ್ಯೂನತೆಗಳಿಗೆ ನಾವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಾರ್ಯದರ್ಶಿ ಅಥವಾ ಇತರ ದೇಶಗಳನ್ನು ದೂಷಿಸಲು ಸಾಧ್ಯವಿಲ್ಲ. ಇದು ತಪ್ಪು ಕಲ್ಪನೆ. ಏತನ್ಮಧ್ಯೆ, ಶ್ರೀಲಂಕಾ ಕ್ರಿಕೆಟ್‌ಗೆ ಐಸಿಸಿ ನಿಷೇಧದ ಕುರಿತು ಚರ್ಚಿಸಲು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಜಯ್ ಶಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಹರಿನ್ ಫರ್ನಾಂಡೋ ಹೇಳಿದ್ದಾರೆ.

ಶ್ರೀಲಂಕಾ ಕ್ರಿಕೆಟ್‌ಗೆ ಐಸಿಸಿ ನಿಷೇಧ ಹೇರಿರುವುದು ದೇಶಕ್ಕೆ ಒಳ್ಳೆಯ ಸಂಗತಿಯಲ್ಲ ಎಂದು ಹರಿನ್ ಫೆರ್ನಾಂಡೋ ಹೇಳಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಅಂಡರ್-19 ಕ್ರಿಕೆಟ್ ವಿಶ್ವಕಪ್ ಮೇಲೆ ನಿಷೇಧದ ಪರಿಣಾಮ ಬೀರಲಿದೆ. ಐಸಿಸಿ ನಿಷೇಧವನ್ನು ಹಿಂತೆಗೆದುಕೊಳ್ಳದಿದ್ದರೆ ಯಾರೂ ಶ್ರೀಲಂಕಾಕ್ಕೆ ಪಂದ್ಯಾವಳಿಗೆ ಭೇಟಿ ನೀಡುವುದಿಲ್ಲ. ಶ್ರೀಲಂಕಾ ಕ್ರಿಕೆಟ್ ಪಂದ್ಯಾವಳಿಯಿಂದ ಒಂದು ಪೈಸೆಯನ್ನೂ ಗಳಿಸುವುದಿಲ್ಲ ಎಂದು ಅವರು ಹೇಳಿದರು.

ರಣತುಂಗ ಆರೋಪವೇನು?

ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ಶ್ರೀಲಂಕಾ ಕ್ರಿಕೆಟ್​ನ ಪತನಕ್ಕೆ ಜಯ್ ಶಾ ಕಾರಣ ಎಂದು ಆರೋಪಿಸಿದ್ದರು. ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು ಮತ್ತು ಜಯ್ ಶಾ ನಡುವೆ ಒಳವ್ಯವಹಾರಗಳಿವೆ ಎಂದು ರಣತುಂಗಾ ಆರೋಪಿಸಿದ್ದಾರೆ. ಅಲ್ಲದೆ ಲಂಕಾ ಕ್ರಿಕೆಟ್​ ಮಂಡಳಿಯ ವ್ಯವಹಾರಗಳಲ್ಲಿ ಬಿಸಿಸಿಐನ ಅಸ್ತಕ್ಷೇಪವಿದೆ. ಶ್ರೀಲಂಕಾ ಕ್ರಿಕೆಟ್ ಅನ್ನು ಜಯ್ ಶಾ ನಡೆಸುತ್ತಿದ್ದಾರೆ. ಜಯ್ ಶಾ ಅವರ ಒತ್ತಡದಿಂದ ಶ್ರೀಲಂಕಾ ಕ್ರಿಕೆಟ್ ಪತನದತ್ತ ಸಾಗಿದೆ ಎಂದು ರಣತುಂಗ ಆರೋಪ ಮಾಡಿದ್ದರು.

ತಾಜಾ ಸುದ್ದಿ
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಚುನಾವಣೆ ಹಿನ್ನಡೆಯಿಂದ ವಿಚಲಿತ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದರ್ಶನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯಲ್ಲಿ ಡಿಕೆಶಿ ಭಾಗಿ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ