ಅಹಮದಾಬಾದ್‌​ನಲ್ಲಿ ಎಷ್ಟು ರನ್ ಬಾರಿಸಿದರೆ ಗೆಲುವು ಖಚಿತ? ಮೋದಿ ಮೈದಾನದ ಪಿಚ್ ಹೇಗಿದೆ?

IND vs AUS Final: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ನವೆಂಬರ್ 17 ರಂದು ಕ್ರೀಡಾಂಗಣಕ್ಕೆ ಆಗಮಿಸಿ ಪಿಚ್ ಅನ್ನು ಪರಿಶೀಲಿಸಿದ್ದು, ಟಾಸ್ ಗೆದ್ದರೆ ಈ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಎಂಬ ಪ್ರಶ್ನೆಗೆ ಈ ಜೋಡಿ ಈಗಾಗಲೇ ಉತ್ತರ ಕಂಡುಕೊಂಡಿದೆ.

ಅಹಮದಾಬಾದ್‌​ನಲ್ಲಿ ಎಷ್ಟು ರನ್ ಬಾರಿಸಿದರೆ ಗೆಲುವು ಖಚಿತ? ಮೋದಿ ಮೈದಾನದ ಪಿಚ್ ಹೇಗಿದೆ?
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
| Updated By: Vinay Bhat

Updated on:Nov 18, 2023 | 12:48 PM

ಟೀಂ ಇಂಡಿಯಾ (Team India) ತನ್ನ 12 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಲು ಕೇವಲ ಇನ್ನೊಂದು ಹೆಜ್ಜೆ ದೂರ ಉಳಿದಿದೆ. ನವೆಂಬರ್ 19 ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆಯಲ್ಲಿರುವ ವಿಶ್ವಕಪ್ 2023 ರ ಫೈನಲ್‌ ಪಂದ್ಯಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯಾವನ್ನು ಬಗ್ಗುಬಡಿಯವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಅಹಮದಾಬಾದ್ ಪಿಚ್ ಹೇಗಿರುತ್ತದೆ? ಮತ್ತು ಆ ಪಿಚ್​ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿದರೆ, ಎಷ್ಟು ರನ್ ಬಾರಿಸಿದರೆ​ ಗೆಲುವನ್ನು ಖಾತ್ರಿಪಡಿಸಬಹುದು ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಪಂದ್ಯ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ನವೆಂಬರ್ 17 ರಂದು ಕ್ರೀಡಾಂಗಣಕ್ಕೆ ಆಗಮಿಸಿ ಪಿಚ್ ಅನ್ನು ಪರಿಶೀಲಿಸಿದ್ದು, ಟಾಸ್ ಗೆದ್ದರೆ ಈ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಎಂಬ ಪ್ರಶ್ನೆಗೆ ಈ ಜೋಡಿ ಈಗಾಗಲೇ ಉತ್ತರ ಕಂಡುಕೊಂಡಿದೆ. ಆದರೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವ ಪ್ರಕಾರ, ಫೈನಲ್‌ಗೆ ಹೊಸ ಪಿಚ್ ಬಳಸಲಾಗುವುದೇ ಅಥವಾ ಈಗಾಗಲೇ ಬಳಸಿದ ಪಿಚ್‌ನಲ್ಲಿ ಈ ಪಂದ್ಯವನ್ನು ಆಡಲಾಗುತ್ತದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.

ಏರ್ ಶೋ, ಡ್ರೋನ್ ಶೋ, ಮ್ಯೂಸಿಕ್ ಶೋ..; ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಏನೆಲ್ಲ ಇರಲಿದೆ ಗೊತ್ತಾ?

ಪಿಚ್ ಹೇಗಿದೆ?

ಫೈನಲ್‌ಗೆ ಪಿಚ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಸಿಸಿಐ ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ ಮತ್ತು ತಪೋಶ್ ಚಟರ್ಜಿ ಅವರಿಗೆ ನೀಡಲಾಗಿದೆ. ಅವರಲ್ಲದೆ, ಈ ಅವಧಿಯಲ್ಲಿ ಬಿಸಿಸಿಐ ಪ್ರಧಾನ ವ್ಯವಸ್ಥಾಪಕ (ದೇಶೀಯ ಕ್ರಿಕೆಟ್) ಅಬೆ ಕುರುವಿಲ್ಲಾ ಕೂಡ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಈ ಪಿಚ್ ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದ್ದು, ಸಾಮಾನ್ಯವಾಗಿ ನಿಧಾನವಾಗಿರಲಿದೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಪಿಚ್‌ನಲ್ಲಿ ಹೆವಿ ರೋಲರ್‌ಗಳನ್ನು ಬಳಸಲಾಗಿದೆ. ಹೀಗಾಗಿ ಫೈನಲ್ ದಿನದಂದು ಪಿಚ್ ನಿಧಾನವಾಗಬಹುದು ಎಂಬ ಸುಳಿವು ನೀಡಿದೆ. ಅಂದರೆ ಇದರರ್ಥ ಈ ಪಂದ್ಯದಲ್ಲಿ ರನ್​ಗಳ ಸುರಿಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಗೆಲುವಿಗೆ ಎಷ್ಟು ರನ್ ಕಲೆಹಾಕಬೇಕು?

ಈಗ ಪ್ರಶ್ನೆಯೆಂದರೆ, ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ಗೆಲ್ಲಲು ಎಷ್ಟು ಸ್ಕೋರ್ ಕಲೆಹಾಕಬೇಕು ಎಂಬುದು. ಇದಕ್ಕೆ ಸ್ಥಳೀಯ ಕ್ಯುರೇಟರ್ ಉತ್ತರ ನೀಡಿದ್ದು, ‘ಇಲ್ಲಿ ಸ್ವಲ್ಪ ದೊಡ್ಡ ಸ್ಕೋರ್ ಕಲೆಹಾಕಬಹುದಾಗಿದೆ. ಆದರೆ ನಿರಂತರವಾಗಿ ಹಾರ್ಡ್ ಹಿಟ್ಟಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 315 ರನ್ ಗಳಿಸಿದರೆ ಗೆಲುವು ಸನಿಹವಾಗಲಿದೆ. ಏಕೆಂದರೆ ಆ ನಂತರ ಚೇಸಿಂಗ್ ಸುಲಭವಲ್ಲ ಎಂದು ಕ್ಯುರೇಟರ್ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಪರಿಸ್ಥಿತಿ ಹೇಗಿತ್ತು?

ಅಕ್ಟೋಬರ್ 5 ರಂದು ಈ ಮೈದಾನದಲ್ಲಿಯೇ ವಿಶ್ವಕಪ್ ಉದ್ಘಾಟನಾ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದಾದ ಬಳಿಕ ಟೀಂ ಇಂಡಿಯಾ ಕೂಡ ಇದೇ ಮೈದಾನದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ 7 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಎರಡು ಪಂದ್ಯಗಳ ಬಳಿಕ ಮೋದಿ ಸ್ಟೇಡಿಯಂನಲ್ಲಿ ಇನ್ನೇರಡು ಪಂದ್ಯಗಳು ನಡೆದರೂ ಈ ಯಾವ ಪಂದ್ಯದಲ್ಲೂ 300ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಇಲ್ಲಿ ಆಡಿದ 4 ಪಂದ್ಯಗಳಲ್ಲಿ 286 ರನ್‌ಗಳೇ ಅತಿ ದೊಡ್ಡ ಸ್ಕೋರ್ ಆಗಿದ್ದು, ಇಂಗ್ಲೆಂಡ್​ಗೆ ಈ ಟಾರ್ಗೆಟ್ ನೀಡಿದ್ದ ಆಸ್ಟ್ರೇಲಿಯಾ ತಂಡ ಪಂದ್ಯವನ್ನು 33 ರನ್‌ಗಳಿಂದ ಗೆದ್ದುಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:18 am, Sat, 18 November 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು