ಏರ್ ಶೋ, ಡ್ರೋನ್ ಶೋ, ಮ್ಯೂಸಿಕ್ ಶೋ..; ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಏನೆಲ್ಲ ಇರಲಿದೆ ಗೊತ್ತಾ?

ICC World Cup 2023 Closing Ceremony: ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನದಲ್ಲಿ ಈ ಫೈನಲ್ ಪಂದ್ಯ ನಡೆಯಲ್ಲಿದೆ. ಈ ಪಂದ್ಯವನ್ನು ಇನ್ನಷ್ಟು ಸ್ಮರಣೀಯಗೊಳಿಸಲು ಐಸಿಸಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಒಟ್ಟಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಏರ್ ಶೋ, ಡ್ರೋನ್ ಶೋ, ಮ್ಯೂಸಿಕ್ ಶೋ..; ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಏನೆಲ್ಲ ಇರಲಿದೆ ಗೊತ್ತಾ?
ವಿಶ್ವಕಪ್ ಸಮಾರೋಪ ಸಮಾರಂಭ
Follow us
|

Updated on:Nov 18, 2023 | 7:41 AM

2023ರ ಏಕದಿನ ವಿಶ್ವಕಪ್​ನ (ICC World Cup 2023) ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹಾಸಂಗ್ರಮಕ್ಕೆ ಕೇವಲ ಇನ್ನೊಂದೆ ದಿನ ಬಾಕಿ ಉಳಿದಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium in Ahmedabad) ಈ ಫೈನಲ್ ಪಂದ್ಯ ನಡೆಯಲ್ಲಿದೆ. ಈ ಪಂದ್ಯವನ್ನು ಇನ್ನಷ್ಟು ಸ್ಮರಣೀಯಗೊಳಿಸಲು ಐಸಿಸಿ (ICC) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಟ್ಟಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅಭಿಮಾನಿಗಳು ಹಿಂದೆಂದು ನಡೆಯದ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಟೂರ್ನಿಯ ಅಂತಿಮ ಪಂದ್ಯ ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆಯಲಿದ್ದು, ಈ ಪಂದ್ಯ ಆರಂಭಕ್ಕೂ ಮುನ್ನ ಹಾಗೂ ಪಂದ್ಯದ ನಡುವೆ ವಿವಿಧ ಕಾರ್ಯಕ್ರಮಗಳೊಂದಿಗೆ ಅಭಿಮಾನಿಗಳನ್ನು ರಂಜಿಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದೆ.

ಈ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಹಾಜರಾಗಲಿದ್ದು, ಪಂದ್ಯಕ್ಕೆ ಇನ್ನಷ್ಟು ಮೆರಗು ತರಲಿದ್ದಾರೆ. ಅಲ್ಲದೆ ಪಂದ್ಯದ ದಿನದಂದು ಅಂದರೆ, ಭಾನುವಾರದಂದು ವಿವಿಧ ಸಂಗೀತ ಮತ್ತು ಲೈಟ್ ಶೋ, ಏರ್ ಶೋ ಕೂಡ ನಡೆಯಲ್ಲಿದೆ. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ನಡೆದ ಎರಡು ಐಪಿಎಲ್ ಫೈನಲ್​ ಪಂದ್ಯಗಳಲ್ಲೂ ಹಲವು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೀಗಾಗಿ ಈ ಬಾರಿಯ ವಿಶ್ವಕಪ್​ ಫೈನಲ್‌ನಲ್ಲೂ ಅದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ.

IND vs AUS, Air Show: ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಸೂರ್ಯ ಕಿರಣ್ ತಂಡದಿಂದ ವೈಮಾನಿಕ ಪ್ರದರ್ಶನ

ವಿಶ್ವಕಪ್ ಸಮಾರೋಪ ಸಮಾರಂಭದ ವೇಳಾಪಟ್ಟಿ

ODI World Cup 2023

ಮಧ್ಯಾಹ್ನ 12:30ಕ್ಕೆ 10 ನಿಮಿಷಗಳ ಕಾಲ ವಾಯುಪಡೆಯಿಂದ ಏರ್ ಶೋ

ಭಾರತೀಯ ವಾಯುಪಡೆಯ ಸೂರ್ಯಕಿರಣ್ ಅಕ್ರೋಬ್ಯಾಟಿಕ್ ತಂಡದಿಂದ 10 ನಿಮಿಷಗಳ ಏರ್ ಶೋ ಮೂಲಕ ಈ ಕಾರ್ಯಕ್ರಮ ಆರಂಭವಾಗಲಿದೆ. ತಂಡದ ಫ್ಲೈಟ್ ಕಮಾಂಡರ್ ಮತ್ತು ಡೆಪ್ಯುಟಿ ಟೀಮ್ ಲೀಡರ್ ವಿಂಗ್ ಕಮಾಂಡರ್ ಸಿದ್ದೇಶ್ ಕಾರ್ತಿಕ್ ನೇತೃತ್ವದಲ್ಲಿ ಈ ಏರ್​ ಶೋ ನಡೆಯಲ್ಲಿದೆ. ಸೂರ್ಯಕಿರಣ್ ಅಕ್ರೋಬ್ಯಾಟಿಕ್ ತಂಡವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟು ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ವರ್ಟಿಕಲ್ ಏರ್ ಶೋ ನಡೆಸಲಿದೆ.

ODI World Cup 2023

ಸಂಜೆ 5:30ಕ್ಕೆ 15 ನಿಮಿಷಗಳ ಕಾಲ ಚಾಂಪಿಯನ್‌ಗಳ ಪರೇಡ್

ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಐಸಿಸಿ ಎಲ್ಲಾ ವಿಶ್ವಕಪ್ ವಿಜೇತ ತಂಡಗಳ ನಾಯಕರನ್ನು 2023 ರ ಫೈನಲ್ ವೀಕ್ಷಿಸಲು ಆಹ್ವಾನಿಸಿದೆ. 1975 ರ ವಿಶ್ವಕಪ್ ವಿಜೇತ ನಾಯಕ ಕ್ಲೈವ್ ಲಾಯ್ಡ್‌ ಅವರಿಂದ ಹಿಡಿದು ಕೊನೆಯ ಆವೃತ್ತಿಯ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್​ವರೆಗೆ, ಪ್ರತಿಯೊಬ್ಬ ವಿಶ್ವಕಪ್ ವಿಜೇತ ತಂಡಗಳ ನಾಯಕರು ತಮ್ಮ ವಿಶ್ವಕಪ್ ಟ್ರೋಫಿಗಳೊಂದಿಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ವಿಶ್ವಕಪ್ ಇತಿಹಾಸದ ಎಲ್ಲಾ ಐದು ರೀತಿಯ ಟ್ರೋಫಿಗಳು ಕಾಣಸಿಗಲಿವೆ. ಈ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಶ್ವಕಪ್‌ನ ಥೀಮ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಒಂದೇ ರೀತಿಯ ಬ್ಲೇಜರ್ ಅನ್ನು ಎಲ್ಲಾ ನಾಯಕರು ಧರಿಸಲಿದ್ದಾರೆ.

ODI World Cup 2023

ಸಂಗೀತ ಕಾರ್ಯಕ್ರಮ

ಭಾರತದ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಅವರು ‘ದಿಲ್ ಜಶ್ನ್ ಬೋಲೆ’ ಎಂಬ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ತಂಡದೊಂದಿಗೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 500 ಕ್ಕೂ ಹೆಚ್ಚು ನೃತ್ಯಗಾರರು ಕೇಸರಿಯಾ, ದೇವ ದೇವ, ಲಹರಾ ದೋ ಮತ್ತು ಇನ್ನೂ ಅನೇಕ ಪ್ರಸಿದ್ಧ ಹಾಡುಗಳಿಗೆ ಪ್ರದರ್ಶನ ನೀಡಲಿದ್ದಾರೆ.

ODI World Cup 2023

ಚಾಂಪಿಯನ್ ತಂಡಕ್ಕಾಗಿ 1200 ಡ್ರೋನ್​ಗಳಿಂದ ಡ್ರೋನ್ ಶೋ

ವಿಶ್ವಕಪ್ ವಿಜೇತ ತಂಡದ ಹೆಸರನ್ನು ಲೇಸರ್ ಶೋ ಮೂಲಕ ಪ್ರದರ್ಶಿಸುವುದರೊಂದಿಗೆ ಸಮಾರೋಪ ಸಮಾರಂಭವನ್ನು ಮುಕ್ತಾಯಗೊಳಿಸಲು ಐಸಿಸಿ ಯೋಜಿಸಿದೆ. 1200 ಕ್ಕೂ ಹೆಚ್ಚು ಡ್ರೋನ್‌ಗಳು ಅಹಮದಾಬಾದ್‌ನ ಆಕಾಶವನ್ನು ಬೆಳಗಿಸಲಿದ್ದು, ವಿಜೇತ ತಂಡದ ಹೆಸರಿನ್ನು ಆಗಸದಲ್ಲಿ ಪ್ರದರ್ಶಿಸಲಿವೆ. ಇದರೊಂದಿಗೆ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಈ ಬಾರಿಯ ವಿಶ್ವಕಪ್​ಗೆ ಅದ್ಧೂರಿ ತೆರೆ ಎಳೆಯಲಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 am, Sat, 18 November 23

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್