Virat Kohli: ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದ: ಮಾಜಿ ಕ್ರಿಕೆಟಿಗನ ಗಂಭೀರ ಆರೋಪ

Virat Kohli: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು ಎಂದು ಮಾಜಿ ಆಟಗಾರ ಡೀನ್ ಎಲ್ಗರ್ ಗಂಭೀರ ಆರೋಪ ಮಾಡಿದ್ದಾರೆ. ಸೌತ್ ಆಫ್ರಿಕಾ ತಂಡದ ಮಾಜಿ ನಾಯಕನ ಹೇಳಿಕೆಯು ಇದೀಗ ಭಾರೀ ವೈರಲ್ ಆಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jan 30, 2024 | 3:22 PM

ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಡೀನ್ ಎಲ್ಗರ್ ವಿರಾಟ್ ಕೊಹ್ಲಿ (Virat Kohli) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯದ ವೇಳೆ ಅತಿರೇಕವಾಗಿ ವರ್ತಿಸಿದ್ದ ಕಿಂಗ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು ಎಂದು ಆರೋಪಿಸಿದ್ದಾರೆ.

1 / 8
'ಬ್ಯಾಂಟರ್ ವಿಥ್ ದಿ ಬಾಯ್ಸ್' ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಡೀನ್ ಎಲ್ಗರ್, ಈ ಘಟನೆ ನಡೆದಿರುವುದು 2015 ರಲ್ಲಿ. ಅಂದು ಸೌತ್ ಆಫ್ರಿಕಾ ತಂಡ ಭಾರತಕ್ಕೆ ಸರಣಿ ಆಡಲು ತೆರಳಿತ್ತು. ಮೊಹಾಲಿಯ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ನನ್ನ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದರು ಎಂದು ಡೀನ್ ಎಲ್ಗರ್ ತಿಳಿಸಿದ್ದಾರೆ.

2 / 8
ಮೊಹಾಲಿ ಪಿಚ್​ ಒಂದು ರೀತಿಯ ತಮಾಷೆಯಂತಿತ್ತು. ಪಿಚ್ ಮೇಲ್ಮೈ ಒಂದು ರೀತಿಯಲ್ಲಿ ವರ್ತಿಸುತ್ತಿತ್ತು. ಈ ಹಂತದಲ್ಲಿ ಕಣಕ್ಕಿಳಿದ ನಾನು ರವಿಚಂದ್ರನ್ ಅಶ್ವಿನ್ , ರವೀಂದ್ರ ಜಡೇಜಾ ವಿರುದ್ಧ ಮೇಲುಗೈ ಸಾಧಿಸಿದ್ದೆ. ಇದರಿಂದ ಕುಪಿತಗೊಂಡಿದ್ದ ಕೊಹ್ಲಿ ನನ್ನ ಮೇಲೆ ಉಗುಳಿದ್ದರು ಎಂದು ಡೀನ್ ಎಲ್ಗರ್ ಹೇಳಿದ್ದಾರೆ.

3 / 8
ಈ ವೇಳೆ ನಾನು ಕೂಡ ತಿರುಗಿ ನಿಂತೆ. ಇನ್ನೊಂದು ಬಾರಿ ಹಾಗೆ ಮಾಡಿದರೆ, ನಾನು ಈ ಬ್ಯಾಟ್‌ನಿಂದ ನಿಮ್ಮನ್ನು ******* ಜಿ *** ಮಾಡುತ್ತೇನೆ ಎಂದು ಕೆಟ್ಟದಾಗಿ ಬೈದೆ. ಆ ಬೈಗುಳದ ಅರ್ಥ ಅವರಿಗೆ ತಿಳಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಲ್ಗರ್, ಹೌದು, ಅವರಿಗೆ ಅದು ಅರ್ಥವಾಗಿತ್ತು. ಏಕೆಂದರೆ ಎಬಿ ಡಿವಿಲಿಯರ್ಸ್ RCB ನಲ್ಲಿ ಅವರ ಸಹ ಆಟಗಾರರಾಗಿದ್ದರು. ಹೀಗಾಗಿ ಅವರಿಗೆ ಬೈಗುಳದ ಅರ್ಥ ಗೊತ್ತಾಗಿತ್ತು.

4 / 8
ಈ ವಿಚಾರ ಆ ಬಳಿಕ ಎಬಿ ಡಿವಿಲಿಯರ್ಸ್​ಗೆ ತಿಳಿಯಿತು. ಈ ಬಗ್ಗೆ ಎಬಿಡಿ ಕೊಹ್ಲಿ ಜೊತೆ ಮಾತನಾಡಿದ್ದಾರೆ. ನನ್ನ ಸಹ ಆಟಗಾರನ ಮೇಲೆ ಏಕೆ ಉಗುಳಿದ್ದೀರಿ? ಎಂದು ಕೇಳಿದ್ದರು. ಅಲ್ಲದೆ ಇಂತಹ ನಡೆ ಒಳ್ಳೆಯದಲ್ಲ ಎಂದು ವಿರಾಟ್ ಕೊಹ್ಲಿಗೆ ತಿಳಿಸಿದ್ದರು.

5 / 8
ಇದಾದ ಎರಡು ವರ್ಷಗಳ ನಂತರ, ಅವರು (ಕೊಹ್ಲಿ) ಸೌತ್ ಆಫ್ರಿಕಾದಲ್ಲಿ ನಡೆದ ಪಂದ್ಯದ ವೇಳೆ ನನ್ನನ್ನು ಪಕ್ಕಕ್ಕೆ ಕರೆದು ಪಾರ್ಟಿಗೆ ಹೋಗೋಣ ಎಂದರು. ಅಲ್ಲದೆ ಹಳೆಯ ತಪ್ಪಿಗಾಗಿ ನನ್ನೊಂದಿಗೆ ಕ್ಷಮೆಯಾಚಿಸಿದ್ದರು ಎಂದು ಡೀನ್ ಎಲ್ಗರ್ ತಿಳಿಸಿದ್ದಾರೆ.

6 / 8
ಇದಾದ ಬಳಿಕ ನಾವಿಬ್ಬರೂ ಬೆಳಿಗ್ಗೆ 3 ಗಂಟೆಯವರೆಗೆ ಕುಡಿದಿದ್ದೇವೆ. ಈ ಸಮಯದಲ್ಲಿ ಕೊಹ್ಲಿ ಕೂಡ ಡ್ರಿಂಕ್ಸ್ ಮಾಡುತ್ತಿದ್ದರು. ಈಗ ಅವರು ಸ್ವಲ್ಪಮಟ್ಟಿಗೆ ಬದಲಾಗಿದ್ದಾರೆ ಎಂದು ಡೀನ್ ಎಲ್ಗರ್ ಹಳೆಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

7 / 8
ವಿಶೇಷ ಎಂದರೆ ಡೀನ್ ಎಲ್ಗರ್ ತನ್ನ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ್ದರು. ಈ ಕ್ಯಾಚ್ ಹಿಡಿದ ಕೊಹ್ಲಿ ಸಂಭ್ರಮಿಸಿರಲಿಲ್ಲ. ಅಲ್ಲದೆ ಡೀನ್ ಎಲ್ಗರ್ ಅವರನ್ನು ತಬ್ಬಿಕೊಳ್ಳುವ ಮೂಲಕ ಬೀಳ್ಕೊಟ್ಟಿದ್ದರು. ಅಷ್ಟೇ ಅಲ್ಲದೆ ಎಲ್ಗರ್​ ಅವರ ವಿದಾಯ ಪಂದ್ಯದಲ್ಲಿ ಕೊಹ್ಲಿ ತಮ್ಮ ಟೆಸ್ಟ್ ಜೆರ್ಸಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು ಎಂಬುದು ವಿಶೇಷ.

8 / 8
Follow us
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?

ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ

ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!

ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು

ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್

ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ

ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ

ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!

ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ