India vs Australia Schedule 2022: ಟೀಮ್ ಇಂಡಿಯಾ (Team India) ಏಷ್ಯಾಕಪ್ನಿಂದ ಹೊರಬಿದ್ದಿದೆ. ಗುರುವಾರ ನಡೆಯಲಿರುವ ಅಫ್ಘಾನಿಸ್ತಾನ್ ವಿರುದ್ದದ ಔಪಚಾರಿಕ ಪಂದ್ಯದ ಬಳಿಕ ಭಾರತ ತಂಡದ ಆಟಗಾರರು ತವರಿಗೆ ಮರಳಲಿದ್ದಾರೆ. ಅಷ್ಟೇ ಅಲ್ಲದೆ ಇದರ ಬೆನ್ನಲ್ಲೇ ಮುಂದಿನ ಸರಣಿಗಾಗಿ ಸಜ್ಜಾಗಬೇಕಿದೆ. ಅಂದರೆ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಸರಣಿ ಆಡಲಿದೆ. ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭವಾಗಲಿದ್ದು, ಈ ಮೂಲಕ ಮುಂದಿನ ಟೂರ್ನಿಗಾಗಿ ಟೀಮ್ ಇಂಡಿಯಾ ಸಜ್ಜಾಗಲಿದೆ. ಸೆಪ್ಟೆಂಬರ್ 20 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ.
ಈ ಮೂರು ಪಂದ್ಯಗಳು ಕ್ರಮವಾಗಿ ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಶೇಷ ಎಂದರೆ ಏಷ್ಯಾಕಪ್ನಲ್ಲಿ ಆಡಿದ ಬಹುತೇಕ ಆಟಗಾರರು ಈ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಈಗಾಗಲೇ ಟಿ20 ವಿಶ್ವಕಪ್ ಅನ್ನು ಮುಂದಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದ್ದು, ಇದೇ ಬಳಗವನ್ನು ಆಸೀಸ್ ವಿರುದ್ದ ಕೂಡ ಆಡಿಸುವ ಸಾಧ್ಯತೆಯಿದೆ.
ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಈಗಾಗಲೇ ಟಿ20 ವಿಶ್ವಕಪ್ಗೆ ಶೇ.95 ರಷ್ಟು ತಂಡ ಫಿಕ್ಸ್ ಆಗಿದೆ. ಇದಾಗ್ಯೂ ತಂಡದಲ್ಲಿ ಒಂದೆರೆಡು ಬದಲಾವಣೆಗಳು ಕಂಡು ಬರಬಹುದು ಎಂದು ರೋಹಿತ್ ಶರ್ಮಾ ತಿಳಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಆಯ್ಕೆಯಾಗುವ ತಂಡವೇ ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಆಸ್ಟ್ರೇಲಿಯಾ ವಿರುದ್ಧ ಸರಣಿಯ ವೇಳಾಪಟ್ಟಿ ಹೀಗಿದೆ:
ಏಷ್ಯಾಕಪ್ಗೆ ಆಯ್ಕೆಯಾಗಿದ್ದ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ರವೀಂದ್ರ ಜಡೇಜಾ
ಮೀಸಲು ಆಟಗಾರರು: ದೀಪಕ್ ಚಹರ್, ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್.