ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ನಾಯಕ ಹಶ್ಮತ್ (80) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿತು. 273 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಇಶಾನ್ ಕಿಶನ್ (47) ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ (131) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಜೇಯ 55 ರನ್ ಬಾರಿಸಿದರು. ಪರಿಣಾಮ 35 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಗುರಿ ಮುಟ್ಟಿತು. ಈ ಮೂಲಕ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫರೂಲ್ಹಕ್ ಫಾರೂಖಿ.
ಟೀಮ್ ಇಂಡಿಯಾಗೆ 8 ವಿಕೆಟ್ಗಳ ಭರ್ಜರಿ ಜಯ.
ಭಾರತದ ಪರ ಅಬ್ಬರಿಸಿದ ರೋಹಿತ್ ಶರ್ಮಾ (131) ಹಾಗೂ ವಿರಾಟ್ ಕೊಹ್ಲಿ (55)
30 ಓವರ್ಗಳಲ್ಲಿ 237 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (38) ಹಾಗೂ ಶ್ರೇಯಸ್ ಅಯ್ಯರ್ (7) ಬ್ಯಾಟಿಂಗ್.
ಇಶಾನ್ ಕಿಶನ್ (47) ಹಾಗೂ ರೋಹಿತ್ ಶರ್ಮಾ (131) ಔಟ್.
ರಶೀದ್ ಖಾನ್ ಗೂಗ್ಲಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ರೋಹಿತ್ ಶರ್ಮಾ.
84 ಎಸೆತಗಳಲ್ಲಿ 131 ರನ್ ಬಾರಿಸಿ ನಿರ್ಗಮಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 202 ರನ್ಗಳು.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (18) ಹಾಗೂ ರೋಹಿತ್ ಶರ್ಮಾ (131) ಬ್ಯಾಟಿಂಗ್.
ಗೆಲುವಿನತ್ತ ಮುನ್ನಡೆಯುತ್ತಿರುವ ಟೀಮ್ ಇಂಡಿಯಾ.
ಇಶಾನ್ ಕಿಶನ್ (47) ಔಟ್.
ರಶೀದ್ ಖಾನ್ ಎಸೆದ 23ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 164 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಇನ್ನು 30 ಓವರ್ಗಳಲ್ಲಿ ಭಾರತ ತಂಡಕ್ಕೆ ಗೆಲ್ಲಲು ಕೇವಲ 109 ರನ್ಗಳ ಅವಶ್ಯಕತೆ
ರಶೀದ್ ಖಾನ್ ಎಸೆದ 19ನೇ ಓವರ್ನ 4ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಇಶಾನ್ ಕಿಶನ್.
47 ಎಸೆತಗಳಲ್ಲಿ 47 ರನ್ ಬಾರಿಸಿ ನಿರ್ಗಮಿಸಿದ ಎಡಗೈ ದಾಂಡಿಗ ಕಿಶನ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
63 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ರೋಹಿತ್ ಶರ್ಮಾ.
4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಶತಕ ಪೂರೈಸಿದ ಹಿಟ್ಮ್ಯಾನ್.
ಇದು ಏಕದಿನ ವಿಶ್ವಕಪ್ನಲ್ಲಿ ಭಾರತೀಯ ಬ್ಯಾಟರ್ನಿಂದ ಮೂಡಿಬಂದ ಅತೀ ವೇಗದ ಶತಕ.
ಟೀಮ್ ಇಂಡಿಯಾ ಆರಂಭಿಕರಿಬ್ಬರ ಸ್ಪೋಟಕ ಬ್ಯಾಟಿಂಗ್.
15 ಓವರ್ಗಳಲ್ಲಿ 130 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಇಶಾನ್ ಕಿಶನ್ (31) ಹಾಗೂ ರೋಹಿತ್ ಶರ್ಮಾ (92) ಬ್ಯಾಟಿಂಗ್.
ಮೊಹಮ್ಮದ್ ನಬಿ ಎಸೆದ 13ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್.
ಟೀಮ್ ಇಂಡಿಯಾ ಆರಂಭಿಕರ ಅಬ್ಬರ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
ಮುಜೀಬ್ ಎಸೆದ 10ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
10 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 94 ರನ್ಗಳು.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (76) ಹಾಗೂ ಇಶಾನ್ ಕಿಶನ್ (11) ಬ್ಯಾಟಿಂಗ್.
ನವೀನ್ ಉಲ್ ಹಕ್ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.
ಈ ಫೋರ್ನೊಂದಿಗೆ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್ಮ್ಯಾನ್.
5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
ಫಝಲ್ಹಕ್ ಫಾರೂಖಿ ಎಸೆದ 7ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಫೋರ್ ಬಾರಿಸಿದ ರೋಹಿತ್ ಶರ್ಮಾ.
4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಬ್ಯಾಟಿಂಗ್.
ಫಝಲ್ಹಕ್ ಫಾರೂಖಿ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಕವರ್ಸ್ನತ್ತ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.
5ನೇ ಮತ್ತು 6ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಹಿಟ್ಮ್ಯಾನ್.
5 ಓವರ್ಗಳ ಮುಕ್ತಾಯದ ವೇಳೆಗೆ 37 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
ಮುಜೀಬ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಇಶಾನ್ ಕಿಶನ್…ಫೋರ್.
5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್.
ಫಝಲ್ಹನ್ ಫಾರೂಖಿ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ.
ಇದು ಟೀಮ್ ಇಂಡಿಯಾ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
ಆರಂಭಿಕರು: ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್.
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಅಫ್ಘಾನ್ ಎಡಗೈ ವೇಗಿ ಫಝಲ್ಹಕ್ ಫಾರೂಖಿ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿದೆ. ಈ ಮೂಲಕ ಟೀಮ್ ಇಂಡಿಯಾಗೆ 273 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಅಫ್ಘಾನ್ ಪರ ನಾಯಕ ಹಶ್ಮತ್ (80) ಗರಿಷ್ಠ ಸ್ಕೋರರ್.
ಜಸ್ಪ್ರೀತ್ ಬುಮ್ರಾ ಎಸೆದ 49ನೇ ಓವರ್ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿಯಾಗಿ ಬಾರಿಸಿದ ರಶೀದ್ ಖಾನ್. ಓಡಿ ಬಂದು ಅದ್ಭುತ ಕ್ಯಾಚ್ ಹಿಡಿದ ಕುಲ್ದೀಪ್ ಯಾದವ್. 12 ಎಸೆತಗಳಲ್ಲಿ 16 ರನ್ ಬಾರಿಸಿ ಔಟಾದ ರಶೀದ್ ಖಾನ್.
ಮೊಹಮ್ಮದ್ ಸಿರಾಜ್ ಎಸೆದ 48ನೇ ಓವರ್ನ 3ನೇ ಎಸೆತದಲ್ಲಿ ಫೋರ್ ಬಾರಿಸಿದ ರಶೀದ್ ಖಾನ್.
4ನೇ ಎಸೆತದಲ್ಲಿ ರಶೀದ್ ಖಾನ್ ಬ್ಯಾಟ್ನಿಂದ ಡೀಪ್ ಕವರ್ನತ್ತ ಭರ್ಜರಿ ಸಿಕ್ಸ್.
ಕ್ರೀಸ್ನಲ್ಲಿ ಮುಜೀಬ್ ಹಾಗೂ ರಶೀದ್ ಖಾನ್ ಬ್ಯಾಟಿಂಗ್
ಜಸ್ಪ್ರೀತ್ ಬುಮ್ರಾ ಎಸೆದ 47ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಶಾಟ್ ಹೊಡೆತ ಮಜೀಬ್…ಫೋರ್.
ಮರು ಎಸೆತದಲ್ಲೇ ಲೆಗ್ ಸೈಡ್ನತ್ತ ಮತ್ತೊಂದು ಬೌಂಡರಿ ಬಾರಿಸಿದ ಮುಜೀಬ್.
ಕ್ರೀಸ್ನಲ್ಲಿ ಮುಜೀಬ್ ಹಾಗೂ ರಶೀದ್ ಖಾನ್ ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ 45ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ನಜೀಬ್…ಬೌಂಡರಿ ಲೈನ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್.
ಕೊನೆಯ ಎಸೆತದಲ್ಲಿ ಮೊಹಮ್ಮದ್ ನಬಿ ಎಲ್ಬಿಡಬ್ಲ್ಯೂ.
ಒಂದೇ ಓವರ್ನಲ್ಲಿ 2 ವಿಕೆಟ್ ಪಡೆದ ಬುಮ್ರಾ.
45 ಓವರ್ಗಳ ಮುಕ್ತಾಯದ ವೇಳೆಗೆ 235 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
10 ಓವರ್ಗಳಲ್ಲಿ 40 ರನ್ ನೀಡಿ ಒಂದು ವಿಕೆಟ್ ಕಬಳಿಸಿದ ಸ್ಪಿನ್ನರ್ ಕುಲ್ದೀಪ್ ಯಾದವ್.
43 ಓವರ್ಗಳ ಮುಕ್ತಾಯದ ವೇಳೆಗೆ 225 ರನ್ ಕಲೆಹಾಕಿದ ಅಫ್ಗಾನಿಸ್ತಾನ್.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ನಜೀಬ್ ಝದ್ರಾನ್ ಬ್ಯಾಟಿಂಗ್.
ಕುಲ್ದೀಪ್ ಯಾದವ್ 43ನೇ ಓವರ್ನ 4ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ಗೆ ಯತ್ನಿಸಿದ ಹಶ್ಮತ್.
ಚೆಂಡು ನೇರವಾಗಿ ಪ್ಯಾಡ್ಗೆ…ಎಲ್ಬಿಡಬ್ಲ್ಯೂಗೆ ಮನವಿ ಮಾಡಿದ ಕುಲ್ದೀಪರ್ ಯಾದವ್…ಅಂಪೈರ್ ತೀರ್ಪು ಔಟ್.
88 ಎಸೆತಗಳಲ್ಲಿ 80 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ತಂಡದ ನಾಯಕ ಹಶ್ಮತ್.
ಮೊಹಮ್ಮದ್ ಸಿರಾಜ್ ಎಸೆದ 42ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಹಶ್ಮತ್.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತ್ ಬ್ಯಾಟಿಂಗ್.
ಶಾರ್ದೂಲ್ ಠಾಕೂರ್ ಎಸೆದ 40ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹಶ್ಮತ್.
40 ಓವರ್ಗಳ ಮುಕ್ತಾಯದ ವೇಳೆಗೆ 211 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.
38 ಓವರ್ಗಳಲ್ಲಿ 200 ರನ್ಗಳ ಗಡಿದಾಟಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.
4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ.
ಹಾರ್ದಿಕ್ ಪಾಂಡ್ಯ ಎಸೆದ 35ನೇ ಓವರ್ನ 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಅಝ್ಮತ್.
69 ಎಸೆತಗಳಲ್ಲಿ 62 ರನ್ ಬಾರಿಸಿ ನಿರ್ಗಮಿಸಿದ ಅಝ್ಮತ್.
35 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 189.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ಹಶ್ಮತ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 32ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಹಶ್ಮತ್.
62 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಅಝ್ಮತ್ಉಲ್ಲಾ ಒಮರ್ಝಾಹಿ.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಅಝ್ಮತ್ ಉತ್ತಮ ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ 31ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಹಶ್ಮತ್.
ಈ ಫೋರ್ನೊಂದಿಗೆ 150 ರನ್ಗಳ ಗಡಿದಾಟಿದ ಅಫ್ಘಾನಿಸ್ತಾನ್ ತಂಡದ ಸ್ಕೋರ್.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಅಝ್ಮತ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 30ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಆಫ್ ಸೈಡ್ನತ್ತ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಶ್ಮತ್.
30 ಓವರ್ಗಳಲ್ಲಿ 147 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಅಝ್ಮತ್ ಬ್ಯಾಟಿಂಗ್.
ರವೀಂದ್ರ ಜಡೇಜಾ ಎಸೆದ 28ನೇ ಓವರ್ನ 2ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಅಝ್ಮತ್.
ಅಫ್ಘಾನಿಸ್ತಾನ್ ತಂಡದ ಅಝ್ಮತ್ ಹಾಗೂ ಹಶ್ಮತ್ ಕಡೆಯಿಂದ ಉತ್ತಮ ಬ್ಯಾಟಿಂಗ್.
ಕುಲ್ದೀಪ್ ಯಾದವ್ ಎಸೆದ 25ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಝ್ಮತ್.
4ನೇ ಎಸೆತದಲ್ಲಿ ಅಝ್ಮತ್ ಬ್ಯಾಟ್ನಿಂದ ಡೀಪ್ ಕವರ್ನತ್ತ ಮತ್ತೊಂದು ಸಿಕ್ಸ್.
25 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 114 ರನ್ಗಳು.
21 ಓವರ್ಗಳಲ್ಲಿ 86 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕೇವಲ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಬಲಗೈ ಬ್ಯಾಟರ್ಗಳಾದ ಹಶ್ಮತ್ ಹಾಗೂ ಅಝ್ಮತ್ ಬ್ಯಾಟಿಂಗ್.
ಔಟಾಗಿ ಪೆವಿಲಿಯನ್ ಸೇರಿದ ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ
18 ಓವರ್ಗಳಲ್ಲಿ ಕೇವಲ 79 ರನ್ ನೀಡಿದ ಟೀಮ್ ಇಂಡಿಯಾ ಬೌಲರ್ಗಳು.
ರಹಮಾನುಲ್ಲಾ ಗುರ್ಬಾಝ್ , ಇಬ್ರಾಹಿಂ ಝದ್ರಾನ್, ಹಾಗೂ ರಹಮತ್ ಶಾ…ಔಟ್
ವಿಕೆಟ್ ಪಡೆದ ಬುಮ್ರಾ, ಹಾರ್ದಿಕ್ ಫಾಂಡ್ಯ ಹಾಗೂ ಶಾರ್ದೂಲ್ ಠಾಕೂರ್.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಅಝ್ಮತ್ ಬ್ಯಾಟಿಂಗ್.
15 ಓವರ್ಗಳಲ್ಲಿ 70 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಟೀಮ್ ಇಂಡಿಯಾ ಪರ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್.
ಕ್ರೀಸ್ನಲ್ಲಿ ಹಶ್ಮತ್ ಹಾಗೂ ಅಝ್ಮತ್ ಬ್ಯಾಟಿಂಗ್.
ಶಾರ್ದೂಲ್ ಠಾಕೂರ್ ಎಸೆದ 13ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದ ರಹಮತ್ ಶಾ.
22 ಎಸೆತಗಳಲ್ಲಿ 16 ರನ್ ಬಾರಿಸಿ ನಿರ್ಗಮಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ಹಶ್ಮತುಲ್ಲಾ ಶಾಹಿದಿ ಹಾಗೂ ಅಝ್ಮತುಲ್ಲಾ ಬ್ಯಾಟಿಂಗ್.
ಹಾರ್ದಿಕ್ ಪಾಂಡ್ಯ ಎಸೆದ 13ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಹೊಡೆತ ಬಾರಿಸಿದ ಗುರ್ಬಾಝ್.
ಬೌಂಡರಿ ಲೈನ್ನಲ್ಲಿ ಶಾರ್ದೂಲ್ ಠಾಕೂರ್ ಅತ್ಯುತ್ತಮ ಟೈಮಿಂಗ್ ಕ್ಯಾಚ್. ರಹಮಾನುಲ್ಲಾ ಗುರ್ಬಾಝ್ ಔಟ್.
28 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಹಮಾನುಲ್ಲಾ ಗುರ್ಬಾಝ್.
ಶಾರ್ದೂಲ್ ಠಾಕೂರ್ ಎಸೆದ 12ನೇ ಓವರ್ನ 4ನೇ ಎಸೆತದಲ್ಲಿ ಪುಲ್ ಶಾಟ್ ಮೂಲಕ ಫೋರ್ ಬಾರಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ಇಬ್ರಾಹಿಂ ಝದ್ರಾನ್ (22) ಔಟ್.
ಶಾರ್ದೂಲ್ ಠಾಕೂರ್ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗುರ್ಬಾಝ್.
10 ಓವರ್ಗಳ ಮುಕ್ತಾಯದ ವೇಳೆಗೆ 48 ರನ್ ಕಲೆಹಾಕಿದ ಅಫ್ಘಾನಿಸ್ತಾನ್
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ (20) ಹಾಗೂ ರಹಮತ್ ಶಾ (4) ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 8ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್.
8 ಓವರ್ಗಳ ಮುಕ್ತಾಯಕ್ಕೆ ಅಫ್ಗಾನ್ ತಂಡದ ಸ್ಕೋರ್ 37.
ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದ ಇಬ್ರಾಹಿಂ ಝದ್ರಾನ್.
28 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 6ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಗುರ್ಬಾಝ್.
ಕೊನೆಯ ಎಸೆತದಲ್ಲಿ ಮತ್ತೊಂದು ಕವರ್ ಡ್ರೈವ್ ಬಾರಿಸಿದ ಗುರ್ಬಾಝ್…ಫೋರ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
5 ಓವರ್ಗಳ ಮುಕ್ತಾಯದ ವೇಳೆಗೆ 19 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ರಹಮಾನುಲ್ಲಾ ಗುರ್ಬಾಝ್ (1) ಹಾಗೂ ಇಬ್ರಾಹಿಂ ಝದ್ರಾನ್ (17).
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ್.
ಮೊಹಮ್ಮದ್ ಸಿರಾಜ್ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದ ಇಬ್ರಾಹಿಂ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಇದು ಅಫ್ಘಾನಿಸ್ತಾನ್ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್.
ಮೊದಲ ಓವರ್ನಲ್ಲಿ ವೈಡ್ ಮೂಲಕ ಏಕೈಕ ರನ್ ನೀಡಿದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ಬಲಗೈ ದಾಂಡಿಗರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಅಫ್ಘಾನಿಸ್ತಾನ್.
ಅಫ್ಘಾನ್ ಆರಂಭಿಕರು: ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್.
ಟೀಮ್ ಇಂಡಿಯಾ ಪರ ಮೊದಲ ಓವರ್: ಜಸ್ಪ್ರೀತ್ ಬುಮ್ರಾ.
ಅಫ್ಘಾನಿಸ್ತಾನ್ ಬ್ಯಾಟಿಂಗ್ ಲೈನಪ್: ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್,
ಚಿಕ್ಕಬಳ್ಳಾಪುರ: ಐದು ಗ್ಯಾರಂಟಿ ಕೊಡುತ್ತೇವೆ ಅಂತೇಳಿ ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿ ನೀಡಿದೆ. ಇದು ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ, ಜನ ವಿರೋಧಿ ಸರ್ಕಾರ ಈಗಾಗಲೇ ಜನ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫರೂಲ್ಹಕ್ ಫಾರೂಖಿ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಶ್ವಿನ್ ಬದಲಿಗೆ ಶಾರ್ದೂಲ್ ಠಾಕೂರ್ಗೆ ಸ್ಥಾನ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
Published On - 1:33 pm, Wed, 11 October 23