Team India: ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jan 06, 2024 | 6:20 AM

Team India: ಜನವರಿ 11 ರಿಂದ ಶುರುವಾಗಲಿರುವ ಈ ಸರಣಿಯ ಮೂಲಕ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್​ಗೆ ಮರಳುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು 2022 ರ ಬಳಿಕ ಭಾರತದ ಪರ ಯಾವುದೇ ಟಿ20 ಪಂದ್ಯಗಳನ್ನಾಡಿಲ್ಲ.

Team India: ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
Team India
Follow us on

ಭಾರತ-ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಗಿದಿದೆ. 2 ಪಂದ್ಯಗಳ ಈ ಸರಣಿಯನ್ನು 1-1 ಅಂತರದಿಂದ ಸಮಗೊಳಿಸುವಲ್ಲಿ ಟೀಮ್ ಇಂಡಿಯಾ (Team India) ಯಶಸ್ವಿಯಾಗಿದೆ. ಇದೀಗ ಭಾರತ ತಂಡವು ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗಬೇಕಿದೆ. ಮೂರು ಪಂದ್ಯಗಳ ಈ ಸರಣಿಯು ಟಿ20 ವಿಶ್ವಕಪ್​ಗೂ ಮುನ್ನ ನಡೆಯುವ ಭಾರತದ ಕೊನೆಯ ಟಿ20 ಸರಣಿ ಎಂಬುದು ವಿಶೇಷ.

ಅಂದರೆ ಈ ಸರಣಿ ಬಳಿಕ ಟೀಮ್ ಇಂಡಿಯಾ ಯಾವುದೇ ಟಿ20 ಪಂದ್ಯಗಳನ್ನಾಡುತ್ತಿಲ್ಲ. ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ಈ ಸರಣಿಯ ಮೂಲಕ ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

ದಿಗ್ಗಜರ ಕಂಬ್ಯಾಕ್:

ಜನವರಿ 11 ರಿಂದ ಶುರುವಾಗಲಿರುವ ಈ ಸರಣಿಯ ಮೂಲಕ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್​ಗೆ ಮರಳುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು 2022 ರ ಬಳಿಕ ಭಾರತದ ಪರ ಯಾವುದೇ ಟಿ20 ಪಂದ್ಯಗಳನ್ನಾಡಿಲ್ಲ.

ಇದೀಗ ಟಿ20 ವಿಶ್ವಕಪ್​ಗಾಗಿ ಇಬ್ಬರು ಆಟಗಾರರು ಮತ್ತೆ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಹಾಗೆಯೇ ಕಳೆದ ಒಂದು ವರ್ಷದಿಂದ ಟಿ20 ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಫಿಟ್​ನೆಸ್ ಸಮಸ್ಯೆಯ ಕಾರಣ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಅಫ್ಘಾನ್ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ.

ಭಾರತ-ಅಫ್ಘಾನಿಸ್ತಾನ್ ಟಿ20 ಸರಣಿ ವೇಳಾಪಟ್ಟಿ:

ಜನವರಿ 11: ಮೊದಲ ಟಿ20 ಪಂದ್ಯ (ಮೊಹಾಲಿ)
ಜನವರಿ 14: ಎರಡನೇ ಟಿ20 ಪಂದ್ಯ (ಇಂದೋರ್)
ಜನವರಿ 17: ಮೂರನೇ ಟಿ20 ಪಂದ್ಯ (ಬೆಂಗಳೂರು)

ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

ಭಾರತ ಸಂಭಾವ್ಯ ಟಿ20 ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಂಕು ಸಿಂಗ್, ಕೆಎಲ್ ರಾಹುಲ್, ಜಿತೇಶ್ ಶರ್ಮಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ದೀಪಕ್ ಚಹರ್.