AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಈ 9 ಸ್ಥಳಗಳಲ್ಲಿ ನಡೆಯಲ್ಲಿದೆ ಈ ಬಾರಿಯ ಟಿ20 ವಿಶ್ವಕಪ್

ICC T20 World Cup 2024 Venues: ವಿಶ್ವಕಪ್‌ನ ಎಲ್ಲಾ ಪಂದ್ಯಗಳು 9 ಸ್ಥಳಗಳಲ್ಲಿ ನಡೆಯಲಿವೆ. ಈ ಎಲ್ಲಾ ಸ್ಥಳಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿವೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಈ ಮಾದರಿಯಲ್ಲಿ ಆಡಲಾಗುತ್ತಿದೆ. ಇದರಿಂದಾಗಿ ಟೂರ್ನಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

T20 World Cup 2024: ಈ 9 ಸ್ಥಳಗಳಲ್ಲಿ ನಡೆಯಲ್ಲಿದೆ ಈ ಬಾರಿಯ ಟಿ20 ವಿಶ್ವಕಪ್
ಟಿ20 ವಿಶ್ವಕಪ್
Follow us
ಪೃಥ್ವಿಶಂಕರ
|

Updated on: Jan 05, 2024 | 9:44 PM

2024ರ ಟಿ20 ವಿಶ್ವಕಪ್‌ಗೆ (T20 World Cup 2024) ಸಿದ್ಧತೆಗಳು ಆರಂಭವಾಗಿ ತಿಂಗಳುಗಳೆ ಕಳೆದಿವೆ. ಅದರಂತೆ ಈಗಾಗಲೇ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದಿದ್ದು, ಇದರೊಂದಿಗೆ ಈ ಟೂರ್ನಿಯಲ್ಲಿ ಬಾಗಿಯಾಗಲಿರುವ 20 ತಂಡಗಳನ್ನು ಸಹ ಅಂತಿಮಗೊಳಿಸಲಾಗಿತ್ತು. ಇದೀಗ ಶುಕ್ರವಾರ ಅಂದರೆ ಇಂದು ಐಸಿಸಿ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ಜೂನ್ 1 ರಿಂದ ಜೂನ್ 29 ರವರೆಗೆ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಈ ವರ್ಷದ ಟಿ20 ವಿಶ್ವಕಪ್ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದೆ. ಮೊದಲ ಬಾರಿಗೆ, ಐಸಿಸಿ ಪಂದ್ಯಾವಳಿಯ ಪಂದ್ಯವನ್ನು ಯುಎಸ್ಎಯಲ್ಲಿ ಆಡಲಾಗುತ್ತದೆ.

ವಿಶ್ವಕಪ್‌ನ ಎಲ್ಲಾ ಪಂದ್ಯಗಳು 9 ಸ್ಥಳಗಳಲ್ಲಿ ನಡೆಯಲಿವೆ. ಈ ಎಲ್ಲಾ ಸ್ಥಳಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿವೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಈ ಮಾದರಿಯಲ್ಲಿ ಆಡಲಾಗುತ್ತಿದೆ. ಇದರಿಂದಾಗಿ ಟೂರ್ನಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಟೂರ್ನಿಯ ಮೊದಲ ಪಂದ್ಯ ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವೆ ನಡೆಯಲಿದೆ. ಎರಡೂ ತಂಡಗಳು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 05 ರಿಂದ ಆಡಲಿದೆ. ಇನ್ನು ಚುಟುಕು ವಿಶ್ವಕಪ್‌ಗೆ ಆತಿಥ್ಯವಹಿಸುತ್ತಿರುವ 9 ಸ್ಥಳಗಳು ಯಾವುವು ಎಂಬುದನ್ನು ನೋಡುವುದಾದರೆ..

T20 World Cup 2024: ಜೂ.9 ರಂದು ಭಾರತ- ಪಾಕ್ ಫೈಟ್; ಬದ್ಧವೈರಿಗಳ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

ವೆಸ್ಟ್ ಇಂಡೀಸ್‌

  • ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್
  • ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್
  • ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
  • ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ
  • ಡ್ಯಾರೆನ್ ಸ್ಯಾಮಿ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ
  • ಆರ್ನೋಸ್ ವೇಲ್ ಸ್ಟೇಡಿಯಂ, ಸೇಂಟ್ ವಿನ್ಸೆಂಟ್

ಅಮೆರಿಕ

  • ಐಸೆನ್‌ಹೋವರ್ ಪಾರ್ಕ್, ನ್ಯೂಯಾರ್ಕ್
  • ಲಾಡರ್‌ಹಿಲ್, ಫ್ಲೋರಿಡಾ
  • ಗ್ರ್ಯಾಂಡ್ ಪ್ರೈರೀ, ಟೆಕ್ಸಾಸ್

ಭಾರತದ ವೇಳಾಪಟ್ಟಿ

ಟೀಂ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದರೊಂದಿಗೆ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಯುಎಸ್​ಎ ಕೂಡ ಒಂದೇ ಗುಂಪಿನಲ್ಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 05 ರಂದು ಆಡಬೇಕಾಗಿದೆ. ಟೀಂ ಇಂಡಿಯಾದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯದ ನಂತರ, ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಕಪ್‌ನ ಅತಿದೊಡ್ಡ ಪಂದ್ಯ ನಡೆಯಲಿದೆ. ಅಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಭಾರತ ತನ್ನ ಮೂರನೇ ಗುಂಪು ಹಂತದ ಪಂದ್ಯವನ್ನು ಅಮೆರಿಕ ವಿರುದ್ಧ ಜೂನ್ 12 ರಂದು ನ್ಯೂಯಾರ್ಕ್‌ನಲ್ಲಿ ಮತ್ತು ನಾಲ್ಕನೇ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಜೂನ್ 15 ರಂದು ಫ್ಲೋರಿಡಾದಲ್ಲಿ ಆಡಲಿದೆ. ಭಾರತ ತನ್ನ ಗುಂಪು ಹಂತದ ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದ್ದು, ಮುಂದಿನ ಸುತ್ತಿಗೆ ಅರ್ಹತೆ ಪಡೆದರೆ ಮುಂದಿನ ಸುತ್ತಿನ ಪಂದ್ಯಗಳನ್ನು ವೆಸ್ಟ್ ಇಂಡೀಸ್​ನಲ್ಲಿ ಆಡಲಿದೆ. ಭಾರತೀಯ ಕಾಲಮಾನ ರಾತ್ರಿ 8.30ರಿಂದ ಭಾರತ ತಂಡ ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ