AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ತಂಡಗಳು, 4 ಗುಂಪುಗಳು, 55 ಪಂದ್ಯಗಳು: ಹೇಗಿರಲಿದೆ ಟಿ20 ವಿಶ್ವಕಪ್?

T20 World Cup 2024: 4 ಗ್ರೂಪ್​ಗಳ ನಡುವಣ ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್​ ಲೆಕ್ಕಾಚಾರ ಬರಲಿದೆ. ಅಂದರೆ ಆಯಾ ಗ್ರೂಪ್​ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ.

20 ತಂಡಗಳು, 4 ಗುಂಪುಗಳು, 55 ಪಂದ್ಯಗಳು: ಹೇಗಿರಲಿದೆ ಟಿ20 ವಿಶ್ವಕಪ್?
T20 World Cup 2024
TV9 Web
| Edited By: |

Updated on:Jan 06, 2024 | 11:21 AM

Share

T20 World Cup 2024: ಬಹುನಿರೀಕ್ಷಿತ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಯುಎಸ್​ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿರುವ ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿರುವುದು ವಿಶೇಷ. ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಮೂಲಕ ಒಂದು ತಿಂಗಳ ಅಂತರದಲ್ಲಿ ಒಟ್ಟು 55 ಪಂದ್ಯಗಳನ್ನು ಆಯೋಜಿಸಲು ಐಸಿಸಿ ಭರ್ಜರಿ ಪ್ಲ್ಯಾನ್ ರೂಪಿಸಿದೆ.

ಹೇಗಿರಲಿದೆ ಟಿ20 ವಿಶ್ವಕಪ್?

ಈ ಬಾರಿಯ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 20 ತಂಡಗಳನ್ನು 4 ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪುಗಳಲ್ಲಿ 5 ತಂಡಗಳು ಕಾಣಿಸಿಕೊಳ್ಳಲಿದೆ. ಅದರಂತೆ ಲೀಗ್ ಹಂತದಲ್ಲಿ A,B,C ಮತ್ತು D ಗುಂಪುಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ.

ಇಲ್ಲಿ ಪ್ರತಿ ಗುಂಪುಗಳಲ್ಲಿರುವ ತಂಡ ಒಟ್ಟು 4 ಪಂದ್ಯಗಳನ್ನಾಡಲಿದೆ. ಉದಾಹರಣೆಗೆ ಭಾರತ ತಂಡವು ಎ ಗ್ರೂಪ್​ನಲ್ಲಿದ್ದು, ಈ ಗ್ರೂಪ್​ನಲ್ಲಿರುವ ಪಾಕಿಸ್ತಾನ್, ಐರ್ಲೆಂಡ್, ಕೆನಡಾ ಮತ್ತು ಯುಎಸ್​ಎ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.

ಸೂಪರ್-8 ಎಂಟ್ರಿ:

4 ಗ್ರೂಪ್​ಗಳ ನಡುವಣ ಪಂದ್ಯಗಳ ಬಳಿಕ ಪಾಯಿಂಟ್ಸ್ ಟೇಬಲ್​ ಲೆಕ್ಕಾಚಾರ ಬರಲಿದೆ. ಅಂದರೆ ಆಯಾ ಗ್ರೂಪ್​ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಇದರಿಂದಾಗಿ ನಾಲ್ಕು ಗುಂಪುಗಳಿಂದ ಒಟ್ಟು 8 ತಂಡಗಳು ಸೂಪರ್-8 ಹಂತಕ್ಕೇರಲಿದೆ.

ಸೂಪರ್-8 ಕಾದಾಟ:

ಸೂಪರ್-8 ಹಂತದಲ್ಲಿ ಒಟ್ಟು 8 ತಂಡಗಳ ನಡುವೆ ಕಾದಾಟ ನಡೆಯಲಿದೆ. ಈ ಹಂತದಲ್ಲಿ ಎಂಟು ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನಾಡಲಿದೆ. ಈ ವೇಳೆ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ 4 ತಂಡಗಳು ನಾಕೌಟ್ ಹಂತಕ್ಕೇರಲಿದೆ.

ಸೆಮಿಫೈನಲ್ ಪೈಪೋಟಿ:

ಸೂಪರ್-8 ಹಂತದಿಂದ ಒಟ್ಟು 4 ತಂಡಗಳು ಸೆಮಿಫೈನಲ್​ಗೇರಲಿದೆ. ಇಲ್ಲಿ ಸೂಪರ್-8 ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡ 4ನೇ ಸ್ಥಾನದಲ್ಲಿದ್ದ ತಂಡದ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯವಾಡಲಿದೆ. ಇನ್ನು 2ನೇ ಸೆಮಿಫೈನಲ್​ನಲ್ಲಿ 2ನೇ ಮತ್ತು 3ನೇ ಸ್ಥಾನಗಳಲ್ಲಿದ್ದ ತಂಡಗಳು ಮುಖಾಮುಖಿಯಾಗಲಿದೆ.

ಫೈನಲ್ ಫೈಟ್​:

ಸೆಮಿಫೈನಲ್​ನಲ್ಲಿ ಗೆಲ್ಲುವ 2 ತಂಡಗಳು ಜೂನ್ 29 ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಟಿ20 ವಿಶ್ವಕಪ್ ಗ್ರೂಪ್​:

ಗ್ರೂಪ್-A

  • ಭಾರತ
  • ಪಾಕಿಸ್ತಾನ್
  • ಐರ್ಲೆಂಡ್
  • ಕೆನಡಾ
  • ಯುಎಸ್​ಎ

ಗ್ರೂಪ್-B

  • ಇಂಗ್ಲೆಂಡ್
  • ಆಸ್ಟ್ರೇಲಿಯಾ
  • ನಮೀಬಿಯಾ
  • ಸ್ಕಾಟ್ಲೆಂಡ್
  • ಒಮಾನ್

ಗ್ರೂಪ್-C

  • ನ್ಯೂಝಿಲೆಂಡ್
  • ಅಫ್ಘಾನಿಸ್ತಾನ್
  • ವೆಸ್ಟ್ ಇಂಡೀಸ್
  • ಉಗಾಂಡ
  • ಪಪುವಾ ನ್ಯೂಗಿನಿಯಾ

ಗ್ರೂಪ್-D

  • ಸೌತ್ ಆಫ್ರಿಕಾ
  • ಬಾಂಗ್ಲಾದೇಶ್
  • ನೆದರ್​ಲೆಂಡ್ಸ್​
  • ಶ್ರೀಲಂಕಾ
  • ನೇಪಾಳ

ಇದನ್ನೂ ಓದಿ: IPL 2024: RCB ತಂಡವನ್ನು ನಂಬಿ ಕೆಟ್ಟ ಯುವ ಸ್ಪೋಟಕ ಬ್ಯಾಟರ್..!

ಟಿ20 ವಿಶ್ವಕಪ್ ಯಾವಾಗ ಶುರು?

2024 ರ ಟಿ20 ವಿಶ್ವಕಪ್ ಜೂನ್ 1 ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯವು ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಇನ್ನು ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Published On - 7:22 am, Sat, 6 January 24

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ