IND vs AUS 2nd ODI Highlights: 11ನೇ ಓವರ್​ಗೆ ಮುಗಿದ ಪಂದ್ಯ; ಭಾರತಕ್ಕೆ ಹೀನಾಯ ಸೋಲು

ಪೃಥ್ವಿಶಂಕರ
|

Updated on:Mar 19, 2023 | 5:38 PM

India vs Australia, 2nd One Day Cricket Match: ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಬಲಿಷ್ಠ ಪುನರಾಗಮನ ಮಾಡಿದೆ.

IND vs AUS 2nd ODI Highlights: 11ನೇ ಓವರ್​ಗೆ ಮುಗಿದ ಪಂದ್ಯ; ಭಾರತಕ್ಕೆ ಹೀನಾಯ ಸೋಲು
ಏಕದಿನ ಪಂದ್ಯ

ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಬಲಿಷ್ಠ ಪುನರಾಗಮನ ಮಾಡಿದೆ. ಟೀಂ ಇಂಡಿಯಾ ನೀಡಿದ 118 ರನ್‌ಗಳ ಗೆಲುವಿನ ಸವಾಲನ್ನು ಆಸ್ಟ್ರೇಲಿಯಾ ಕೇವಲ 11 ಓವರ್‌ಗಳಲ್ಲಿ ಪೂರ್ಣಗೊಳಿಸಿತು. ಆಸ್ಟ್ರೇಲಿಯಾದ ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಗೆಲುವಿಗೆ ಕಾರಣರಾದರು. ಇವರಿಬ್ಬರೂ 121 ರನ್‌ಗಳ ಅಜೇಯ ಜೊತೆಯಾಟವಾಡಿದರು. ಮಿಚೆಲ್ ಮಾರ್ಷ್ ಅಜೇಯ 66 ರನ್ ಗಳಿಸಿದರೆ, ಟ್ರಾವಿಸ್ ಹೆಡ್ ಔಟಾಗದೆ 51 ರನ್ ಗಳಿಸಿ ಅರ್ಧಶತಕವನ್ನು ಹಂಚಿಕೊಂಡರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ. ಅಲ್ಲದೆ 3 ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

LIVE NEWS & UPDATES

The liveblog has ended.
  • 19 Mar 2023 05:35 PM (IST)

    ಸೋತ ಭಾರತ

    ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್​ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆಸ್ಟ್ರೇಲಿಯಾದ ಬೌಲರ್‌ಗಳು ಭಾರತಕ್ಕೆ ದೊಡ್ಡ ಸ್ಕೋರ್ ಮಾಡಲು ಅವಕಾಶ ನೀಡದೆ, ಕೇವಲ 117 ರನ್‌ಗಳಿಗೆ ಆಲೌಟ್ ಮಾಡಿದರು. ಇದಾದ ಬಳಿಕ ಆರಂಭಿಕ ಜೋಡಿ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ತಂಡಕ್ಕೆ ಜಯ ತಂದುಕೊಟ್ಟರು. ಇದರೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

  • 19 Mar 2023 05:25 PM (IST)

    ಮಾರ್ಷ್ 3 ಸಿಕ್ಸರ್‌

    8ನೇ ಓವರ್‌ನಲ್ಲಿ ಮಾರ್ಷ್ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಮೊದಲ ಎಸೆತದಲ್ಲಿ ಲಾಂಗ್ ಆಫ್‌ನಲ್ಲಿ ಸಿಕ್ಸರ್ ಬಾರಿಸಿದ ನಂತರ, ಅವರು ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳನ್ನು ಬಾರಿಸಿದರು.

  • 19 Mar 2023 05:18 PM (IST)

    ಟ್ರಾವಿಸ್ ಹೆಡ್ 4 ಬೌಂಡರಿ

    ಆರನೇ ಓವರ್‌ ಎಸೆದ ಸಿರಾಜ್ ಓವರ್​ನಲ್ಲಿ ಟ್ರಾವಿಸ್ ಹೆಡ್ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಮೊದಲ ಚೆಂಡು ಡಾಟ್ ಆದ ನಂತರ, ಎರಡನೇ ಚೆಂಡು ಸ್ಕ್ವೇರ್ ಲೆಗ್‌, ಮೂರನೇ ಚೆಂಡು ಡೀಪ್ ಫೈನ್ ಲೆಗ್‌, ನಾಲ್ಕನೇ ಚೆಂಡು ಕೀಪರ್‌ ಮೇಲೆ ಮತ್ತು ಐದನೇ ಚೆಂಡು ಮಿಡ್ ಆಫ್‌ ಮೇಲೆ ಬೌಂಡರಿಗೆ ಹೋಯಿತು.

  • 19 Mar 2023 05:12 PM (IST)

    ಆಸ್ಟ್ರೇಲಿಯಾ ಸ್ಕೋರ್ 49/0

    ಐದು ಓವರ್‌ಗಳ ನಂತರ ಆಸ್ಟ್ರೇಲಿಯಾದ ಸ್ಕೋರ್ 49/0. ಐದನೇ ಓವರ್‌ನಲ್ಲಿ ಆಸ್ಟ್ರೇಲಿಯಾ ಖಾತೆಗೆ ಒಟ್ಟು 16 ರನ್‌ಗಳು ಬಂದಿವೆ. ಮಿಚೆಲ್ 18 ಎಸೆತಗಳಲ್ಲಿ 31 ರನ್ ಮತ್ತು ಹೆಡ್ 12 ಎಸೆತಗಳಲ್ಲಿ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 19 Mar 2023 05:12 PM (IST)

    ಮಾರ್ಷ್ ಸಿಕ್ಸ್

    ಆಸ್ಟ್ರೇಲಿಯದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಐದನೇ ಓವರ್‌ನಲ್ಲಿ 16 ರನ್ ಗಳಿಸಿದರು. ಈ ಓವರ್‌ನಲ್ಲಿ ಅವರು ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

  • 19 Mar 2023 04:58 PM (IST)

    ಆಸ್ಟ್ರೇಲಿಯಾ 3 ಓವರ್‌ಗಳಲ್ಲಿ 23 ರನ್

    118 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯ ಉತ್ತಮ ಆರಂಭ ಕಂಡಿದೆ. 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ಈ ಓವರ್‌ನಲ್ಲಿ ಆಸ್ಟ್ರೇಲಿಯಾ ಖಾತೆಗೆ ಒಟ್ಟು 10 ರನ್‌ಗಳು ಬಂದಿವೆ. ಮಿಚೆಲ್ ಮಾರ್ಷ್ 9 ಎಸೆತಗಳಲ್ಲಿ 9 ರನ್ ಮತ್ತು ಹೆಡ್ 8 ಎಸೆತಗಳಲ್ಲಿ 10 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 19 Mar 2023 04:52 PM (IST)

    ಹೆಡ್ ಎರಡು ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆದ ಎರಡನೇ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಹೆಡ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು.

  • 19 Mar 2023 04:52 PM (IST)

    ಆಸ್ಟ್ರೇಲಿಯಾ ಇನ್ನಿಂಗ್ಸ್ ಆರಂಭ

    ಆಸ್ಟ್ರೇಲಿಯಾ ಇನ್ನಿಂಗ್ಸ್ ಆರಂಭವಾಗಿದೆ. ಭಾರತದ ಪರ ಮೊಹಮ್ಮದ್ ಶಮಿ ಬೌಲಿಂಗ್ ಆರಂಭಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಜೋಡಿಯು ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಪ್ರಾರಂಭಿದ್ದಾರೆ.

  • 19 Mar 2023 04:02 PM (IST)

    ಭಾರತ 117 ರನ್​ಗೆ ಆಲೌಟ್

    ಭಾರತ ತಂಡ 117 ರನ್‌ಗಳಿಗೆ ಆಲೌಟ್ ಆಗಿದೆ. ಮಿಚೆಲ್ ಸ್ಟಾರ್ಕ್ 26ನೇ ಓವರ್‌ನ ಆರನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.

  • 19 Mar 2023 03:53 PM (IST)

    ಪಟೇಲ್ ಸಿಕ್ಸರ್

    26ನೇ ಓವರ್ ಎಸೆದ ಮಿಚೆಲ್ ಸ್ಟಾರ್ಕ್ ಮೇಲೆ ಅಕ್ಷರ್ ಪಟೇಲ್ 2 ಸಿಕ್ಸರ್ ಬಾರಿಸಿದ್ದರು. ಈ ಓವರ್‌ನ ಮೊದಲ ಮತ್ತು ಎರಡನೇ ಎಸೆತದಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಪಟೇಲ್ ಬಾರಿಸಿದರು.

  • 19 Mar 2023 03:49 PM (IST)

    ಮೊಹಮ್ಮದ್ ಶಮಿ ಔಟ್

    ಮೊಹಮ್ಮದ್ ಶಮಿ ಔಟಾಗಿದ್ದಾರೆ. ಇದರೊಂದಿಗೆ ಭಾರತದ ಒಂಬತ್ತನೇ ವಿಕೆಟ್ ಕೂಡ ಪತನಗೊಂಡಿದೆ.

  • 19 Mar 2023 03:43 PM (IST)

    ಕುಲ್ದೀಪ್ ಯಾದವ್ ಔಟ್

    ಕುಲ್ದೀಪ್ ಯಾದವ್ ಔಟಾಗಿದ್ದು, ಇದರೊಂದಿಗೆ ಭಾರತದ ಎಂಟನೇ ವಿಕೆಟ್ ಪತನವಾಗಿದೆ.

  • 19 Mar 2023 03:42 PM (IST)

    ಭಾರತದ ಶತಕ ಪೂರ್ಣ

    ಭಾರತ ತಂಡ ಶತಕ ಪೂರೈಸಿದೆ. 23ನೇ ಓವರ್‌ನ ಐದನೇ ಎಸೆತದಲ್ಲಿ ಪಟೇಲ್ ಒಂದು ರನ್ ಗಳಿಸಿ ತಂಡವನ್ನು 100 ರ ಗಡಿ ದಾಟಿಸಿದರು.

  • 19 Mar 2023 03:26 PM (IST)

    ರವೀಂದ್ರ ಜಡೇಜಾ ಔಟ್

    ರವೀಂದ್ರ ಜಡೇಜಾ ವಿಕೆಟ್ ಪತನವಾಗಿದ್ದು, ಟೀಂ ಇಂಡಿಯಾದ ಮತ್ತೊಂದು ಭರವಸೆ ಕೊನೆಗೊಂಡಿದೆ. ವಿರಾಟ್ ಕೊಹ್ಲಿ ನಂತರ ಆಸ್ಟ್ರೇಲಿಯಾ ಭಾರತದ ಆಲ್ ರೌಂಡರ್ ವಿಕೆಟ್ ಪಡೆದಿದೆ. ಭಾರತದ ಸ್ಕೋರ್ 7 ವಿಕೆಟ್‌ಗೆ 91 ರನ್ ಆಗಿದೆ.

  • 19 Mar 2023 03:13 PM (IST)

    ಅಕ್ಷರ್ ಪಟೇಲ್ ಬೌಂಡರಿ

    17ನೇ ಓವರ್​ನ ಮೂರನೇ ಎಸೆತದಲ್ಲಿ ಅಕ್ಷರ್ ಪಟೇಲ್ ಬೌಂಡರಿ ಬಾರಿಸಿದರು. ಭಾರತ ತಂಡದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ.

  • 19 Mar 2023 03:08 PM (IST)

    ಭಾರತ ಸ್ಕೋರ್ 16 ಓವರ್‌ಗಳಲ್ಲಿ 73/6

    16 ಓವರ್​ಗಳ ಬಳಿಕ ಟೀಂ ಇಂಡಿಯಾ ಸ್ಕೋರ್ 5 ವಿಕೆಟ್ ನಷ್ಟಕ್ಕೆ 73 ರನ್ ಆಗಿದೆ. ಸದ್ಯಕ್ಕೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಡುತ್ತಿದ್ದಾರೆ.

  • 19 Mar 2023 03:01 PM (IST)

    ವಿರಾಟ್ ಕೊಹ್ಲಿ ಔಟ್

    ಭಾರತಕ್ಕೆ ಆರನೇ ಹೊಡೆತ ಬಿದ್ದಿದೆ. ವಿರಾಟ್ ಕೊಹ್ಲಿ ಔಟಾಗಿದ್ದಾರೆ. 16ನೇ ಓವರ್​ನ ಎರಡನೇ ಎಸೆತದಲ್ಲಿ ಕೊಹ್ಲಿ ಎಲ್​​ಬಿಡಬ್ಲ್ಯೂ ಆಗಿ ಪೆವಿಲಿಯನ್​ಗೆ ಮರಳಬೇಕಾಯಿತು.

    ವಿರಾಟ್ ಕೊಹ್ಲಿ – 31 ರನ್, 35 ಎಸೆತಗಳು 4×4

  • 19 Mar 2023 02:51 PM (IST)

    ಭಾರತ ಸ್ಕೋರ್ 64/5

    ಭಾರತದ ಸ್ಕೋರ್ 12 ಓವರ್‌ಗಳಲ್ಲಿ ಐದು ವಿಕೆಟ್‌ಗೆ 64 ಆಗಿದೆ. ಸದ್ಯ ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜಾ 10 ಎಸೆತಗಳಲ್ಲಿ 8 ರನ್‌ ಬಾರಿಸಿದ್ದಾರೆ.

  • 19 Mar 2023 02:38 PM (IST)

    10 ಓವರ್‌ಗಳ ನಂತರ ಭಾರತ 5 ವಿಕೆಟ್‌ಗೆ 51 ರನ್

    ರಾಹುಲ್ ಔಟಾದ ನಂತರ ಟೀಂ ಇಂಡಿಯಾ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಓವರ್‌ನಲ್ಲಿ ಸೀನ್ ಅಬಾಟ್ ಭಾರತಕ್ಕೆ ಮತ್ತೊಂದು ಹೊಡೆತ ನೀಡಿದರು. 10ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿದರು. ಗಾಳಿಯಲ್ಲಿ ಡೈವಿಂಗ್ ಮಾಡುವ ಮೂಲಕ ಸ್ಮಿತ್ ಕ್ಯಾಚ್ ಪಡೆದರು. 10 ಓವರ್‌ಗಳಲ್ಲಿ ಭಾರತದ ಸ್ಕೋರ್ 5 ವಿಕೆಟ್‌ಗೆ 51 ಆಗಿದೆ. ಸದ್ಯ ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

  • 19 Mar 2023 02:30 PM (IST)

    ಹಾರ್ದಿಕ್ ಕೂಡ ಔಟ್

    ಬಂದ ತಕ್ಷಣ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಒಪ್ಪಿಸಿದ್ದಾರೆ. 10ನೇ ಓವರ್‌ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಸೀನ್ ಅಬಾಟ್ ಔಟ್ ಮಾಡಿದರು. ಅದ್ಭುತ ಕ್ಯಾಚ್ ಹಿಡಿದ ಸ್ಟೀವ್ ಸ್ಮಿತ್‌ಗೆ ಈ ವಿಕೆಟ್‌ನ ಹೆಚ್ಚಿನ ಕ್ರೆಡಿಟ್ ಸಲ್ಲುತ್ತದೆ. ಓವರ್‌ನ ಎರಡನೇ ಎಸೆತ ಹಾರ್ದಿಕ್ ಬ್ಯಾಟ್‌ನ ಹೊರಗಿನ ಅಂಚಿಗೆ ಬಡಿಯಿತು. ಸ್ಟೀವ್ ಸ್ಮಿತ್ ಮೊದಲ ಸ್ಲಿಪ್‌ನಲ್ಲಿ ಅದ್ಭುತ ಡೈವ್ ಮಾಡಿ ಕ್ಯಾಚ್ ಪಡೆದರು.

  • 19 Mar 2023 02:24 PM (IST)

    ಕೆಎಲ್ ರಾಹುಲ್ ಔಟ್

    ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ 9ನೇ ಓವರ್ ಮೂರನೇ ಎಸೆತದಲ್ಲಿ ಭಾರತದ ಖಾತೆಗೆ 1 ರನ್ ಬಂದಿತ್ತು. ನಾಲ್ಕನೇ ಎಸೆತದಲ್ಲಿ ಕೆಎಲ್ ರಾಹುಲ್ ಎಲ್ಬಿಡಬ್ಲ್ಯೂ ಆಗಿ ಔಟಾದರು.

  • 19 Mar 2023 02:24 PM (IST)

    ಭಾರತ 50 ರನ್‌ಗಳ ಸಮೀಪದಲ್ಲಿದೆ

    ಭಾರತದ ಸ್ಕೋರ್ 8 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 47 ರನ್ ಆಗಿದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ. ಕೆಎಲ್ ರಾಹುಲ್ 9 ಮತ್ತು ವಿರಾಟ್ ಕೊಹ್ಲಿ 21 ರನ್ ಗಳಿಸಿ ಆಡುತ್ತಿದ್ದಾರೆ.

  • 19 Mar 2023 02:23 PM (IST)

    ಭಾರತ 7 ಓವರ್‌ಗಳ ನಂತರ ಮೂರು ವಿಕೆಟ್‌ಗೆ 42 ರನ್

    ಮೊದಲ ಐದು ಓವರ್‌ಗಳಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತದ ಸ್ಕೋರ್ 7 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 42 ರನ್ ಆಗಿದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ. 7ನೇ ಓವರ್‌ನಲ್ಲಿ ಭಾರತ ಒಟ್ಟು 8 ರನ್ ಗಳಿಸಿತು.

  • 19 Mar 2023 01:59 PM (IST)

    ರೋಹಿತ್- ಸೂರ್ಯ ಔಟ್

    4ನೇ ಓವರ್​ವರೆಗೂ ಉತ್ತಮ ಸ್ಥಿತಿಯಲ್ಲಿದ್ದ ಭಾರತದ ಇನ್ನಿಂಗ್ಸ್​ 5ನೇ ಓವರ್​ನಲ್ಲಿ ಹಳಿ ತಪ್ಪಿದೆ. 5ನೇ ಓವರ್ 4ನೇ ಎಸೆತದಲ್ಲಿ ರೋಹಿತ್, ಸ್ಮಿತ್​ಗೆ ಕ್ಯಾಚಿತ್ತು ಔಟಾದರೆ, ಆ ಬಳಿಕ ಬಂದ ಸೂರ್ಯಕುಮಾರ್ 5ನೇ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 19 Mar 2023 01:48 PM (IST)

    ಕೊಹ್ಲಿ- ರೋಹಿತ್ ಬೊಂಬಾಟ್ ಬ್ಯಾಟಿಂಗ್

    ಗಿಲ್ ವಿಕೆಟ್ ಬಳಿಕ ಜೊತೆಯಾಗಿರುವ ಕೊಹ್ಲಿ ಹಾಗೂ ರೋಹಿತ್ ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ. ಈಗಾಗಲೇ ಭಾರತದ ಇನ್ನಿಂಗ್ಸ್​ನ 3 ಓವರ್​ ಮುಗಿದಿದ್ದು, ಇದರಲ್ಲಿ ಈ ಜೋಡಿ  29 ರನ್ ಕಲೆಹಾಕಿದೆ

  • 19 Mar 2023 01:38 PM (IST)

    ಗಿಲ್ ಔಟ್

    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಹಿನ್ನಡೆಯುಂಟಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್ ಶೂನ್ಯಕೆ ವಿಕಟ್ ಒಪ್ಪಿಸಿದ್ದಾರೆ.

  • 19 Mar 2023 01:15 PM (IST)

    ಆಸ್ಟ್ರೇಲಿಯಾ ತಂಡ

    ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಎಲಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ

  • 19 Mar 2023 01:13 PM (IST)

    ಭಾರತ ತಂಡ

    ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಮಿ.

  • 19 Mar 2023 01:05 PM (IST)

    ಟಾಸ್ ಗೆದ್ದ ಆಸೀಸ್

    ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ.

  • Published On - Mar 19,2023 1:02 PM

    Follow us
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್