IND vs AUS: ಪ್ರಮುಖರ ಗೈರು; ಮೂರನೇ ಟೆಸ್ಟ್ಗೆ ಆಸೀಸ್ ತಂಡದಲ್ಲಿ ಮಹತ್ವದ ಬದಲಾವಣೆ
IND vs AUS: ವಾಸ್ತವವಾಗಿ, ಇಬ್ಬರು ಆಸ್ಟ್ರೇಲಿಯನ್ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜೋಸ್ ಹ್ಯಾಜಲ್ವುಡ್ ಗಾಯದ ಕಾರಣದಿಂದಾಗಿ ತಂಡ ತೊರಿದ್ದಾರೆ. ಅಲ್ಲದೆ ಸ್ಪಿನ್ನರ್ ಆಶ್ಟನ್ ಆಗರ್ ಕೂಡ ದೇಶೀಯ ಪಂದ್ಯಾವಳಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಮೂರನೇ ಟೆಸ್ಟ್ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಈಗಾಗಲೇ ಸೋತಿದೆ. ಹೀಗಾಗಿ ಭಾರತ ಸರಣಿಯನ್ನು ಗೆಲ್ಲುವುದನ್ನು ತಡೆಯಲು, ಆಸೀಸ್ ತಂಡ ಯಾವುದೇ ಬೆಲೆ ತೆತ್ತಾದರೂ ಉಳಿದಿರುವ ಎರಡೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕು. ಆದರೆ, ಈ ಪಂದ್ಯಕ್ಕೂ ಮುನ್ನ ಆಸೀಸ್ ತಂಡಕ್ಕೆ ಪ್ರಮುಖ ಆಟಗಾರರ ಅಲಭ್ಯತೆಯ ಸಮಸ್ಯೆ ಎದುರಾಗಿದ್ದು, ಆಸೀಸ್ ನಾಯಕನಿಗೆ ತನ್ನ ತಂಡದ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿದೆ.
ವಾರ್ನರ್ ಮತ್ತು ಹ್ಯಾಜಲ್ವುಡ್ ಅಲಭ್ಯ
ವಾಸ್ತವವಾಗಿ, ಇಬ್ಬರು ಆಸ್ಟ್ರೇಲಿಯನ್ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜೋಸ್ ಹ್ಯಾಜಲ್ವುಡ್ ಗಾಯದ ಕಾರಣದಿಂದಾಗಿ ತಂಡ ತೊರಿದ್ದಾರೆ. ಅಲ್ಲದೆ ಸ್ಪಿನ್ನರ್ ಆಶ್ಟನ್ ಆಗರ್ ಕೂಡ ದೇಶೀಯ ಪಂದ್ಯಾವಳಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ ಮತ್ತು ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಕೂಡ ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಆದರೆ ಮೂರನೇ ಟೆಸ್ಟ್‌ಗೂ ಮುನ್ನ ಇಬ್ಬರೂ ಆಟಗಾರರು ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಮರಳಲು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಆದರೆ ಅವರು ಯಾವಾಗ ಮರಳುತ್ತಾರೆ ಮತ್ತು ಅವರು ಮೂರನೇ ಟೆಸ್ಟ್ ಆಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ತಂಡದ ಮತ್ತೋರ್ವ ಸ್ಪಿನ್ನರ್ ಟಾಡ್ ಮರ್ಫಿ ಕೂಡ ಸೈಡ್ ಸ್ಟ್ರೈನ್‌ನೊಂದಿಗೆ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಸದ್ಯ ಸಂಕಷ್ಟದಲ್ಲಿದೆ.
IND vs AUS: ಭಾರತ- ಆಸೀಸ್ ಕೊನೆಯ ಟೆಸ್ಟ್ ಕಾಳಗಕ್ಕೆ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಉಪಸ್ಥಿತಿ
ಮೂರನೇ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾಕ್ಕೆ ಸಮಸ್ಯೆ
ಇಂದೋರ್‌ನಲ್ಲಿ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳು ನಡೆದಿವೆ. ಈ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್‌ಗಳದ್ದೇ ಮೇಲುಗೈ. ಅಂದರೆ ನಾಗ್ಪುರ ಮತ್ತು ದೆಹಲಿಯಂತೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಮುಂದೆ ಸ್ಪಿನ್ ಬೌಲಿಂಗ್ ಹೆಚ್ಚು ತೊಂದರೆಗಳನ್ನು ಸೃಷ್ಟಿಸುವುದಂತೂ ಖಚಿತ. ಮತ್ತೊಂದೆಡೆ, ಟಾಡ್ ಮರ್ಫಿ ಆಸ್ಟ್ರೇಲಿಯಾಕ್ಕೆ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ, ನಾಥನ್ ಲಿಯಾನ್ ಹೊರತುಪಡಿಸಿ ಬೇರೆ ಯಾವುದೇ ಉತ್ತಮ ಸ್ಪಿನ್ನರ್ ಇಲ್ಲ. ದೆಹಲಿ ಟೆಸ್ಟ್‌ನಲ್ಲಿ ಮ್ಯಾಥ್ಯೂ ಕುಹ್ನೆಮನ್ ಅಷ್ಟು ಪ್ರಭಾವ ಬೀರಲಿಲ್ಲ. ಮಿಚೆಲ್ ಸ್ವೆಪ್ಸನ್ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗದ ಬೌಲರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಈ ಪಂದ್ಯಕ್ಕೆ ಕ್ಯಾಮರೂನ್ ಗ್ರೀನ್ ಸಂಪೂರ್ಣ ಫಿಟ್ ಆಗಿರುವುದು ಆಸ್ಟ್ರೇಲಿಯಾಕ್ಕೆ ಸಂತಸದ ಸಂಗತಿಯಾಗಿದೆ. ಅಲ್ಲದೆ ಕ್ಯಾಮರೂನ್ ಗ್ರೀನ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕಾಂಗರೂ ತಂಡಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Thu, 23 February 23