India vs Australia, WC Final: ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ಸ್​

| Updated By: ಝಾಹಿರ್ ಯೂಸುಫ್

Updated on:Nov 19, 2023 | 10:26 PM

India vs Australia, World Cup Final 2023: ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 137 ರನ್ ಬಾರಿಸಿದರು. ಅಲ್ಲದೆ 4ನೇ ವಿಕೆಟ್​ಗೆ ಮಾರ್ನಸ್ ಲಾಬುಶೇನ್ (58) ಜೊತೆಗೂಡಿ 192 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ಕೇವಲ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ತಂಡ 241 ರನ್​ಗಳ ಗುರಿ ಮುಟ್ಟಿತು.

India vs Australia, WC Final: ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ಸ್​
ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ಸ್​

India vs Australia, ICC World Cup 2023 Final: ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ನಾಯಕ ರೋಹಿತ್ ಶರ್ಮಾ 47 ರನ್​ ಬಾರಿಸಿದರೆ, ವಿರಾಟ್ ಕೊಹ್ಲಿ 54 ರನ್​ಗಳ ಕೊಡುಗೆ ನೀಡಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 66 ರನ್​ ಬಾರಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 50 ಓವರ್​ಗಳಲ್ಲಿ 240 ರನ್​ಗಳಿಸಿ ಟೀಮ್ ಇಂಡಿಯಾ ಆಲೌಟ್ ಆಯಿತು.

241 ರನ್​ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾಗಿದ್ದರು. ತಂಡದ ಮೊತ್ತ 47 ರನ್ ಆಗುವಷ್ಟರಲ್ಲಿ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್​ ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಾಬುಶೇನ್ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು.

ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 137 ರನ್ ಬಾರಿಸಿದರು. ಅಲ್ಲದೆ 4ನೇ ವಿಕೆಟ್​ಗೆ ಮಾರ್ನಸ್ ಲಾಬುಶೇನ್ (58) ಜೊತೆಗೂಡಿ 192 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ಕೇವಲ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ತಂಡ 241 ರನ್​ಗಳ ಗುರಿ ಮುಟ್ಟಿತು.

ಈ ಮೂಲಕ 6 ವಿಕೆಟ್​ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡವು 6ನೇ ಬಾರಿಗೆ ಏಕದಿನ ವಿಶ್ವಕಪ್​ ಅನ್ನು ಮುಡಿಗೇರಿಸಿಕೊಂಡಿದೆ. ಇತ್ತ 3ನೇ ಬಾರಿಗೆ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾ ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನವನ್ನು ಅಂತ್ಯಗೊಳಿಸಿದೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.

LIVE Cricket Score & Updates

The liveblog has ended.
  • 19 Nov 2023 10:26 PM (IST)

    India vs Australia, WC Final: ಏಕದಿನ ವಿಶ್ವಕಪ್ 2023 ಅಂತ್ಯ

    ಭಾರತ– 240 (50)

    ಆಸ್ಟ್ರೇಲಿಯಾ– 241/4 (43)

    6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯನ್ನರು.

  • 19 Nov 2023 10:07 PM (IST)

    India vs Australia, WC Final LIVE Score: ಏಕದಿನ ವಿಶ್ವಕಪ್ 2023ರ ಸಾರಾಂಶ

    • ಹೆಚ್ಚು ರನ್: ವಿರಾಟ್ ಕೊಹ್ಲಿ (765 ರನ್ಸ್​)
    • ಗರಿಷ್ಠ ವೈಯಕ್ತಿಕ ಸ್ಕೋರ್: ಗ್ಲೆನ್ ಮ್ಯಾಕ್ಸ್‌ವೆಲ್ (201* ರನ್ಸ್​)
    • ಅತೀ ಹೆಚ್ಚು ಶತಕಗಳು: ಕ್ವಿಂಟನ್ ಡಿ ಕಾಕ್ (4 ಶತಕ)
    • ಅತ್ಯಧಿಕ ಸಿಕ್ಸ್: ರೋಹಿತ್ ಶರ್ಮಾ (31 ಸಿಕ್ಸರ್)
    • ಅತೀ ಹೆಚ್ಚು ವಿಕೆಟ್‌ಗಳು: ಮೊಹಮ್ಮದ್ ಶಮಿ (24 ವಿಕೆಟ್ಸ್​)
    • ಅತ್ಯುತ್ತಮ ಬೌಲಿಂಗ್: ಮೊಹಮ್ಮದ್ ಶಮಿ (7/57)
    • ಅತ್ಯುತ್ತಮ ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್ (20 ಔಟ್)
    • ಅತೀ ಹೆಚ್ಚು ಕ್ಯಾಚ್ : ಡ್ಯಾರಿಲ್ ಮಿಚೆಲ್ (11 ಕ್ಯಾಚ್​ಗಳು)

    ಭಾರತ– 240 (50)

    ಆಸ್ಟ್ರೇಲಿಯಾ– 241/4 (43)

    6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯನ್ನರು.

  • 19 Nov 2023 09:42 PM (IST)

    India vs Australia, WC Final LIVE Score: ಪ್ಲೇಯರ್ ಆಫ್ ದಿ ಮ್ಯಾಚ್

    120 ಎಸೆತಗಳಲ್ಲಿ 15 ಫೋರ್ ಹಾಗೂ 4 ಭರ್ಜರಿ ಸಿಕ್ಸ್ ಸಿಡಿಸಿದ ಆಸ್ಟ್ರೇಲಿಯಾ ತಂಡದ ಎಡಗೈ ಆರಂಭಿಕ ಆಟಗಾರ ಟ್ರಾವಿಸ್ ಹೆಡ್​ಗೆ ಒಲಿದ ಪಂದ್ಯ ಶ್ರೇಷ್ಠ ಪ್ರಶಸ್ತಿ.

    ಭಾರತ– 240 (50)

    ಆಸ್ಟ್ರೇಲಿಯಾ– 241/4 (43)

    6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯನ್ನರು.

  • 19 Nov 2023 09:22 PM (IST)

    India vs Australia, WC Final LIVE Score: ಆಸ್ಟ್ರೇಲಿಯಾಗೆ ಭರ್ಜರಿ ಜಯ

    ಟೀಮ್ ಇಂಡಿಯಾ ನೀಡಿದ 241 ರನ್​ಗಳ ಗುರಿಯನ್ನು ಕೇವಲ 43 ಓವರ್​ಗಳಲ್ಲಿ ಚೇಸ್ ಮಾಡಿದ ಆಸ್ಟ್ರೇಲಿಯಾ.

    ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ. 

    6ನೇ ಬಾರಿ ಏಕದಿನ ವಿಶ್ವಕಪ್​ ಗೆದ್ದುಕೊಂಡ ಆಸ್ಟ್ರೇಲಿಯಾ ತಂಡ.

    ಭಾರತ– 240 (50)

    ಆಸ್ಟ್ರೇಲಿಯಾ– 241/4 (43)

    ಆಸ್ಟ್ರೇಲಿಯಾ ಪರ 137 ರನ್ ಬಾರಿಸಿ ಅಬ್ಬರಿಸಿದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್.

     

  • 19 Nov 2023 09:21 PM (IST)

    India vs Australia, WC Final LIVE Score: ಟೀಮ್ ಇಂಡಿಯಾಗೆ 4ನೇ ಯಶಸ್ಸು

    ಮೊಹಮ್ಮದ್ ಸಿರಾಜ್ ಎಸೆದ 43ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ ಬೌಂಡರಿಯಲ್ಲಿ ಶುಭ್​ಮನ್ ಗಿಲ್​ಗೆ ಕ್ಯಾಚ್ ನೀಡಿದ ಟ್ರಾವಿಸ್ ಹೆಡ್.

    120 ಎಸೆತಗಳಲ್ಲಿ 137 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಟ್ರಾವಿಸ್ ಹೆಡ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಬ್ಯಾಟಿಂಗ್.

    AUS 239/4 (42.5)

      

  • 19 Nov 2023 09:12 PM (IST)

    India vs Australia, WC Final LIVE Score: ಗೆಲುವಿನತ್ತ ಆಸ್ಟ್ರೇಲಿಯಾ

    ಮೊಹಮ್ಮದ್ ಸಿರಾಜ್ ಎಸೆದ 41ನೇ ಓವರ್​ನ 3ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಮಾರ್ನಸ್ ಲಾಬುಶೇನ್.

    41 ಓವರ್​ಗಳಲ್ಲಿ 230 ರನ್ ಗಳಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಇನ್ನು ಕೇವಲ 11 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 230/3 (41)

      

  • 19 Nov 2023 09:08 PM (IST)

    India vs Australia, WC Final LIVE Score: ಅರ್ಧಶತಕ ಪೂರೈಸಿದ ಮಾರ್ನಸ್

    ಜಸ್​ಪ್ರೀತ್ ಬುಮ್ರಾ ಎಸೆದ 40ನೇ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಮಾರ್ನಸ್ ಲಾಬುಶೇನ್.

    ಈ ಫೋರ್​ನೊಂದಿಗೆ 99 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಾರ್ನಸ್ ಲಾಬುಶೇನ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 225/3 (40)

    ಆಸ್ಟ್ರೇಲಿಯಾ ಗೆಲುವಿಗೆ ಕೇವಲ 16 ರನ್​ಗಳ ಅವಶ್ಯಕತೆ.

      

  • 19 Nov 2023 09:04 PM (IST)

    India vs Australia, WC Final LIVE Score: ಕೇವಲ 22 ರನ್​ಗಳ ಅವಶ್ಯಕತೆ

    ಆಸ್ಟ್ರೇಲಿಯಾ ತಂಡದ ಗೆಲುವಿಗೆ 66 ಎಸೆತಗಳಲ್ಲಿ ಕೇವಲ 22 ರನ್​ಗಳ ಅವಶ್ಯಕತೆ.

    39 ಓವರ್​ಗಳಲ್ಲಿ 219 ರನ್​ ಕಲೆಹಾಕಿರುವ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 219/3 (39)

    22 ರನ್​ಗಳ ಒಳಗೆ 7 ವಿಕೆಟ್ ಕಬಳಿಸಿದರೆ ಮಾತ್ರ ಟೀಮ್ ಇಂಡಿಯಾ ಜಯ ಸಾಧಿಸಬಹುದು.

      

  • 19 Nov 2023 08:59 PM (IST)

    India vs Australia, WC Final LIVE Score: ಟ್ರಾವಿಸ್ ಸಿಡಿಲಬ್ಬರ

    ಕುಲ್ದೀಪ್ ಯಾದವ್ ಎಸೆದ 38ನೇ ಓವರ್​ನ ಮೂರನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಟ್ರಾವಿಸ್ ಹೆಡ್.

    38 ಓವರ್​ಗಳ ಮುಕ್ತಾಯದ ವೇಳೆಗೆ 214 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಆಸ್ಟ್ರೇಲಿಯಾ ತಂಡದ ಗೆಲುವಿಗೆ 72 ಎಸೆತಗಳಲ್ಲಿ ಕೇವಲ 27 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 214/3 (38)

      

  • 19 Nov 2023 08:55 PM (IST)

    India vs Australia, WC Final LIVE Score: ಹೆಡ್ ಲೈನ್- ಭರ್ಜರಿ ಸಿಕ್ಸ್​

    ಮೊಹಮ್ಮದ್ ಸಿರಾಜ್ ಎಸೆದ 37ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಟ್ರಾವಿಸ್ ಹೆಡ್.

    ಈ ಸಿಕ್ಸ್​ನೊಂದಿಗೆ ದ್ವಿಶತಕ ಪೂರೈಸಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    IND 240 (50)

    AUS 204/3 (37)

      

  • 19 Nov 2023 08:45 PM (IST)

    India vs Australia, WC Final LIVE Score: 35 ಓವರ್​ಗಳು ಮುಕ್ತಾಯ

    ರವೀಂದ್ರ ಜಡೇಜಾ ಎಸೆದ 35ನೇ ಓವರ್​ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಟ್ರಾವಿಸ್ ಹೆಡ್.

    35 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 192 ರನ್​ಗಳು.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 192/3 (35)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 08:40 PM (IST)

    India vs Australia, WC Final LIVE Score: ಶತಕ ಸಿಡಿಸಿದ ಟ್ರಾವಿಸ್ ಹೆಡ್

    ಕುಲ್ದೀಪ್ ಯಾದವ್ ಎಸೆದ 34ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಟ್ರಾವಿಸ್ ಹೆಡ್.

    95 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ ಶತಕ ಪೂರೈಸಿದ ಟ್ರಾವಿಸ್ ಹೆಡ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 185/3 (34)

      

  • 19 Nov 2023 08:35 PM (IST)

    India vs Australia, WC Final LIVE Score: ಕೇವಲ 69 ರನ್​ಗಳ ಅವಶ್ಯಕತೆ

    4ನೇ ವಿಕೆಟ್​ಗೆ 125 ರನ್​ಗಳ ಭರ್ಜರಿ ಜೊತೆಯಾಟವಾಡಿದ ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್.

    32 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 172 ರನ್​ಗಳು.

    ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೇವಲ 69 ರನ್​ಗಳ ಅವಶ್ಯಕತೆ.

    AUS 172/3 (32)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 08:30 PM (IST)

    India vs Australia, WC Final LIVE Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 167 ರನ್​ಗಳು.

    ಕೇವಲ 3 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿರುವ ಟೀಮ್ ಇಂಡಿಯಾ ಬೌಲರ್​ಗಳು,

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್ (37)​ ಹಾಗೂ ಟ್ರಾವಿಸ್ ಹೆಡ್ (87) ಬ್ಯಾಟಿಂಗ್.

    AUS 167/3 (30)

     ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್ ಔಟ್.

  • 19 Nov 2023 08:21 PM (IST)

    India vs Australia, WC Final LIVE Score: ಹೆಡ್ ಭರ್ಜರಿ ಬ್ಯಾಟಿಂಗ್

    ಜಸ್​ಪ್ರೀತ್ ಬುಮ್ರಾ ಎಸೆದ 28ನೇ ಓವರ್​ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಟ್ರಾವಿಸ್ ಹೆಡ್.

    3ನೇ ಎಸೆತದಲ್ಲಿ ಹೆಡ್​ ಬ್ಯಾಟ್​ನಿಂದ ಸ್ಟ್ರೈಟ್ ಡ್ರೈವ್ ಬೌಂಡರಿ.

    ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಮತ್ತೊಂದು ಫೋರ್.

    ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ 14 ರನ್ ಕಲೆಹಾಕಿದ ಟ್ರಾವಿಸ್-ಮಾರ್ನಸ್.

    AUS 162/3 (28)

      

  • 19 Nov 2023 08:14 PM (IST)

    India vs Australia, WC Final LIVE Score: ಟ್ರಾವಿಸ್-ಮಾರ್ನಸ್ ಶತಕದ ಜೊತೆಯಾಟ

    120 ಎಸೆತಗಳಲ್ಲಿ 101 ರನ್​ಗಳ ಭರ್ಜರಿ ಜೊತೆಯಾಟ ಪ್ರದರ್ಶಿಸಿದ ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್.

    4ನೇ ವಿಕೆಟ್​ಗೆ ಶತಕದ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಹೆಡ್-ಮಾರ್ನಸ್​.

    ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೇವಲ 93 ರನ್​ಗಳ ಅವಶ್ಯಕತೆ.

    AUS 148/3 (27)

      

  • 19 Nov 2023 08:12 PM (IST)

    India vs Australia, WC Final LIVE Score: ಕೇವಲ 97 ರನ್​ಗಳ ಅವಶ್ಯಕತೆ

    ಮೊಹಮ್ಮದ್ ಶಮಿ ಎಸೆದ 26ನೇ ಓವರ್​ನ ಮೊದಲ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಮಾರ್ನಸ್ ಲಾಬುಶೇನ್.

    ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಸಿಡಿಸಿದ ಟ್ರಾವಿಸ್ ಹೆಡ್.

    ಆಸ್ಟ್ರೇಲಿಯಾ ಗೆಲುವಿಗೆ 24 ಓವರ್​ಗಳಲ್ಲಿ ಕೇವಲ 97 ರನ್​ಗಳ ಅವಶ್ಯಕತೆ.

    AUS 144/3 (26)

      

  • 19 Nov 2023 08:07 PM (IST)

    India vs Australia, WC Final LIVE Score: 25 ಓವರ್​ಗಳು ಮುಕ್ತಾಯ

    ರವೀಂದ್ರ ಜಡೇಜಾ ಎಸೆದ 25ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಟ್ರಾವಿಸ್ ಹೆಡ್.

    25 ಓವರ್​ಗಳ ಮುಕ್ತಾಯದ ವೇಳೆಗೆ 135 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕೇವಲ 3 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್ (31)​ ಹಾಗೂ ಟ್ರಾವಿಸ್ ಹೆಡ್ (65) ಬ್ಯಾಟಿಂಗ್.

    AUS 135/3 (25)

      

  • 19 Nov 2023 08:04 PM (IST)

    India vs Australia, WC Final LIVE Score: ಟ್ರಾವಿಸ್ ಸೂಪರ್ ಶಾಟ್

    ಮೊಹಮ್ಮದ್ ಶಮಿ ಎಸೆದ 24ನೇ ಓವರ್​ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಟ್ರಾವಿಸ್ ಹೆಡ್.

    4ನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟದೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಹೆಡ್-ಮಾರ್ನಸ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 127/3 (24)

      

  • 19 Nov 2023 07:56 PM (IST)

    India vs Australia, WC Final LIVE Score: ಅರ್ಧಶತಕ ಪೂರೈಸಿದ ಟ್ರಾವಿಸ್ ಹೆಡ್

    58 ಎಸೆತಗಳಲ್ಲಿ 6 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ ಅರ್ಧಶತಕ ಪೂರೈಸಿದ ಟ್ರಾವಿಸ್ ಹೆಡ್.

    22 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 117 ರನ್​ಗಳು.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 117/3 (22)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

  • 19 Nov 2023 07:50 PM (IST)

    India vs Australia, WC Final LIVE Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ ಶತಕ ಪೂರೈಸಿದ ಆಸ್ಟ್ರೇಲಿಯಾ ತಂಡ.

    ಕೇವಲ 3 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್ (17)​ ಹಾಗೂ ಟ್ರಾವಿಸ್ ಹೆಡ್ (44) ಬ್ಯಾಟಿಂಗ್.

    AUS 104/3 (20)

      30 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 137 ರನ್ ​ಗಳ ಅವಶ್ಯಕತೆ.

  • 19 Nov 2023 07:46 PM (IST)

    India vs Australia, WC Final LIVE Score: ಮಾರ್ನಸ್-ಟ್ರಾವಿಸ್ ಉತ್ತಮ ಜೊತೆಯಾಟ

    70 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್.

    19 ಓವರ್​ಗಳಲ್ಲಿ 99 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ವಿಕೆಟ್​ ಪಡೆಯಲು ಟೀಮ್ ಇಂಡಿಯಾ ಬೌಲರ್​ಗಳ ಹರಸಾಹಸ.

    AUS 99/3 (19)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 07:36 PM (IST)

    India vs Australia, WC Final LIVE Score: ಆಕರ್ಷಕ ಬೌಂಡರಿ ಬಾರಿಸಿದ ಹೆಡ್

    ಮೊಹಮ್ಮದ್ ಸಿರಾಜ್ ಎಸೆದ 17ನೇ ಓವರ್​ನ 4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕವಾಗಿ ಫೋರ್ ಬಾರಿಸಿದ ಎಡಗೈ ದಾಂಡಿಗ ಟ್ರಾವಿಸ್ ಹೆಡ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 93/3 (17)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 07:32 PM (IST)

    India vs Australia, WC Final LIVE Score: ಭರ್ಜರಿ ಸಿಕ್ಸ್​ ಸಿಡಿಸಿದ ಹೆಡ್

    ಕುಲ್ದೀಪ್ ಯಾದವ್ ಎಸೆದ 16ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್​ ಬಾರಿಸಿದ ಟ್ರಾವಿಸ್ ಹೆಡ್.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 87/3 (16)

    ಔಟಾದ ಬ್ಯಾಟರ್​ಗಳು: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್.

      

  • 19 Nov 2023 07:28 PM (IST)

    India vs Australia, WC Final LIVE Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳ ಮುಕ್ತಾಯದ ವೇಳೆಗೆ 78 ರನ್ ಕಲೆಹಾಕಿರುವ ಆಸ್ಟ್ರೇಲಿಯಾ ಬ್ಯಾಟರ್​ಗಳು.

    3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 78/3 (15)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 07:21 PM (IST)

    India vs Australia, WC Final LIVE Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    12 ಓವರ್​ಗಳಲ್ಲಿ ಕೇವಲ 68 ರನ್ ನೀಡಿ 3 ವಿಕೆಟ್ ಕಬಳಿಸಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಬಲಗೈ ಬ್ಯಾಟರ್ ಮಾರ್ನಸ್​ ಲಾಬುಶೇನ್​ ಹಾಗೂ ಎಡಗೈ ದಾಂಡಿಗ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 68/3 (12)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

  • 19 Nov 2023 07:13 PM (IST)

    India vs Australia, WC Final LIVE Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊಹಮ್ಮದ್ ಶಮಿ ಎಸೆದ 10ನೇ ಓವರ್​ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಟ್ರಾವಿಸ್ ಹೆಡ್.

    10 ಓವರ್​ಗಳ ಮುಕ್ತಾಯದ ವೇಳೆಗೆ 60 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 60/3 (10)

    ಔಟಾದ ಬ್ಯಾಟರ್​ಗಳು: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್.

      

  • 19 Nov 2023 07:09 PM (IST)

    India vs Australia, WC Final LIVE Score: ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ

    ಜಸ್​ಪ್ರೀತ್ ಬುಮ್ರಾ ಎಸೆದ 5ನೇ ಎಸೆತವನ್ನು ಹಿಡಿಯುವಲ್ಲಿ ವಿಫಲರಾದ ವಿಕೆಟ್ ಕೀಪರ್ ಕೆಎಲ್ ರಾಹುಲ್…ಚೆಂಡು ಬೌಂಡರಿ ಲೈನ್ ದಾಟಿ ಫೋರ್.

    ಈ ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ ತಂಡ.

    ಕ್ರೀಸ್​ನಲ್ಲಿ ಮಾರ್ನಸ್​ ಲಾಬುಶೇನ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 51/3 (9)

      

  • 19 Nov 2023 07:00 PM (IST)

    India vs Australia, WC Final LIVE Score: ಟೀಮ್ ಇಂಡಿಯಾಗೆ 3ನೇ ಯಶಸ್ಸು

    ಜಸ್​ಪ್ರೀತ್ ಬುಮ್ರಾ ಎಸೆದ 7ನೇ ಓವರ್​ನ 4ನೇ ಎಸೆತದಲ್ಲಿ ಆಕರ್ಷಕ ಸ್ಟ್ರೈಡ್ ಡ್ರೈವ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್.

    ಕೊನೆಯ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ನಿರ್ಗಮಿಸಿದ ಸ್ಟೀವ್ ಸ್ಮಿತ್ (4).

    ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟ ಜಸ್​ಪ್ರೀತ್ ಬುಮ್ರಾ.

    AUS 47/3 (7)

      

  • 19 Nov 2023 06:56 PM (IST)

    India vs Australia, WC Final LIVE Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    6 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 42 ರನ್ ನೀಡಿದ ಟೀಮ್ ಇಂಡಿಯಾ ಬೌಲರ್​ಗಳು.

    ಡೇವಿಡ್ ವಾರ್ನರ್ (7) ಹಾಗೂ ಮಿಚೆಲ್ ಮಾರ್ಷ್ (15) ಔಟ್.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 42/2 (6)

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

      

  • 19 Nov 2023 06:49 PM (IST)

    India vs Australia, WC Final LIVE Score: ಟೀಮ್ ಇಂಡಿಯಾಗೆ 2ನೇ ಯಶಸ್ಸು

    ಜಸ್​ಪ್ರೀತ್ ಬುಮ್ರಾ ಎಸೆದ 5ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್​.

    15 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಿಚೆಲ್ ಮಾರ್ಷ್​.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 41/2 (5)

      

      

  • 19 Nov 2023 06:46 PM (IST)

    India vs Australia, WC Final LIVE Score: ಬಿಗ್ ಸಿಕ್ಸ್​- ಸಿಕ್ಸರ್ ಮಾರ್ಷ್​

    ಮೊಹಮ್ಮದ್ ಶಮಿ ಎಸೆದ 4ನೇ ಓವರ್​ನ ಮೂರನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಮಿಚೆಲ್ ಮಾರ್ಷ್​.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್​ ಹಾಗೂ ಟ್ರಾವಿಸ್ ಹೆಡ್ ಉತ್ತಮ ಬ್ಯಾಟಿಂಗ್.

    AUS 41/1 (4)

    ಡೇವಿಡ್ ವಾರ್ನರ್ (7) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಮೊಹಮ್ಮದ್ ಶಮಿ.

      

  • 19 Nov 2023 06:41 PM (IST)

    India vs Australia, WC Final LIVE Score: ಕೇವಲ 1 ರನ್ ನೀಡಿದ ಬುಮ್ರಾ

    3ನೇ ಓವರ್​ನಲ್ಲಿ ಕೇವಲ 1 ರನ್ ನೀಡಿದ ಜಸ್​ಪ್ರೀತ್ ಬುಮ್ರಾ.

    3 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ಸ್ಕೋರ್ 29 ರನ್​ಗಳು.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    ಆಸ್ಟ್ರೇಲಿಯಾಗೆ 241 ರನ್​ಗಳ ಗುರಿ ನೀಡಿರುವ ಟೀಮ್ ಇಂಡಿಯಾ.

    AUS 29/1 (3)

      

  • 19 Nov 2023 06:31 PM (IST)

    India vs Australia, WC Final LIVE Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು

    ಮೊಹಮ್ಮದ್ ಶಮಿ ಎಸೆದ 2ನೇ ಓವರ್​ನ 2ನೇ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.

    3 ಎಸೆತಗಳಲ್ಲಿ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ವಾರ್ನರ್.

    ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್​ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 28/1 (2)

      

      

  • 19 Nov 2023 06:29 PM (IST)

    India vs Australia, WC Final LIVE Score: ಆಸ್ಟ್ರೇಲಿಯಾ ಇನಿಂಗ್ಸ್​ ಆರಂಭ

    ಜಸ್​ಪ್ರೀತ್ ಬುಮ್ರಾ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಸ್ಲಿಪ್​ ಮೂಲಕ ಫೋರ್ ಬಾರಿಸಿದ ಡೇವಿಡ್ ವಾರ್ನರ್. ಗೊಂದಲದಲ್ಲಿ ಕ್ಯಾಚ್ ಹಿಡಿಯುವ ಅವಕಾಶವನ್ನು ಕೈಚೆಲ್ಲಿಕೊಂಡ ವಿರಾಟ್ ಕೊಹ್ಲಿ-ಶುಭ್​ಮನ್ ಗಿಲ್.

    4ನೇ ಎಸೆತದಲ್ಲಿ ಮಿಡ್ ಆಫ್​ನತ್ತ ಫೋರ್ ಬಾರಿಸಿದ ಟ್ರಾವಿಸ್ ಹೆಡ್.

    6ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಟ್ರಾವಿಸ್ ಬ್ಯಾಟ್​ನಿಂದ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.

    AUS 15/0 (1)

      

  • 19 Nov 2023 05:55 PM (IST)

    India vs Australia, WC Final LIVE Score: ಟೀಮ್ ಇಂಡಿಯಾ ಇನಿಂಗ್ಸ್​ ಅಂತ್ಯ

    ಜೋಶ್ ಹ್ಯಾಝಲ್​ವುಡ್ ಎಸೆದ ಕೊನೆಯ ಓವರ್​ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಮೊಹಮ್ಮದ್ ಸಿರಾಜ್.

    ಕೊನೆಯ ಎಸೆತದಲ್ಲಿ 2 ರನ್ ಓಡುವ ವೇಳೆ ರನೌಟ್ ಆದ ಕುಲ್ದೀಪ್ ಯಾದವ್.

    50 ಓವರ್​ಗಳಲ್ಲಿ 240 ರನ್​ಗಳಿಸಿ ಆಲೌಟ್ ಆದ ಟೀಮ್ ಇಂಡಿಯಾ.

    ಭಾರತ– 240 (50)

    ಆಸ್ಟ್ರೇಲಿಯಾ ತಂಡಕ್ಕೆ 241 ರನ್​ಗಳ ಗುರಿ ನೀಡಿದ ಭಾರತ.

      

  • 19 Nov 2023 05:50 PM (IST)

    India vs Australia, WC Final LIVE Score: ಕೊನೆಯ ಓವರ್​ ಬಾಕಿ

    49 ಓವರ್​ಗಳಲ್ಲಿ 232 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕೊನೆಯ ಓವರ್​ನಲ್ಲಿ ಕೊನೆಯ ವಿಕೆಟ್​ನ ಜೊತೆಯಾಟ.

    ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ತಂಡ​.

    ಕ್ರೀಸ್​ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್.

    IND 232/9 (49)

      

  • 19 Nov 2023 05:42 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ 9ನೇ ವಿಕೆಟ್ ಪತನ

    ಜೋಶ್ ಹ್ಯಾಝಲ್​ವುಡ್​ ಎಸೆದ 48ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್​​​ಗೆ ಸುಲಭ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್.

    28 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್​ ಒಪ್ಪಿಸಿದ ಸೂರ್ಯಕುಮಾರ್.

    ಕ್ರೀಸ್​ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್.

    IND 227/9 (48)

      

      

  • 19 Nov 2023 05:34 PM (IST)

    India vs Australia, WC Final LIVE Score: ಮಿಚೆಲ್ ಸ್ಟಾರ್ಕ್​ 10 ಓವರ್ ಪೂರ್ಣ

    10 ಓವರ್​ಗಳಲ್ಲಿ 55 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದ ಮಿಚೆಲ್ ಸ್ಟಾರ್ಕ್​.

    ಕೊನೆಯ 4 ಓವರ್​ಗಳು ಬಾಕಿ. 24 ಎಸೆತಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್.

    IND 221/8 (46)

      

  • 19 Nov 2023 05:28 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ 8ನೇ ವಿಕೆಟ್ ಪತನ

    ಆ್ಯಡಂ ಝಂಪಾ ಎಸೆದ 45ನೇ ಓವರ್​ನ 5ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಜಸ್​ಪ್ರೀತ್ ಬುಮ್ರಾ (1).

    45 ಓವರ್​ಗಳ ಮುಕ್ತಾಯದ ವೇಳೆಗೆ 215 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್.

    IND 215/8 (45)

      

      

  • 19 Nov 2023 05:21 PM (IST)

    India vs Australia, WC Final LIVE Score: ಡೆತ್ ಓವರ್​ನಲ್ಲಿ ಆಸ್ಟ್ರೇಲಿಯಾ ಉತ್ತಮ ಬೌಲಿಂಗ್

    43ನೇ ಓವರ್​ನಲ್ಲಿ ಕೇವಲ 4 ರನ್ ನೀಡಿದ ಪ್ಯಾಟ್ ಕಮಿನ್ಸ್​.

    ಮಿಚೆಲ್ ಸ್ಟಾರ್ಕ್​ ಎಸೆದ 44ನೇ ಓವರ್​ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಮೊಹಮ್ಮದ್ ಶಮಿ (6).

    ಆಸ್ಟ್ರೇಲಿಯಾ ತಂಡಕ್ಕೆ 7ನೇ ಯಶಸ್ಸು.

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಜಸ್​ಪ್ರೀತ್ ಬುಮ್ರಾ ಬ್ಯಾಟಿಂಗ್.

    IND 213/7 (44)

      

      

  • 19 Nov 2023 05:11 PM (IST)

    India vs Australia, WC Final LIVE Score: ಆಸ್ಟ್ರೇಲಿಯಾಗೆ 6ನೇ ಯಶಸ್ಸು

    ಮಿಚೆಲ್ ಸ್ಟಾರ್ಕ್​ ಎಸೆದ 42ನೇ ಓವರ್​ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್​ ಜೋಶ್ ಇಂಗ್ಲಿಸ್​ಗೆ ಕ್ಯಾಚ್ ನೀಡಿದ ಕೆಎಲ್ ರಾಹುಲ್.

    107 ಎಸೆತಗಳಲ್ಲಿ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್.

    ಕ್ರೀಸ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್.

    IND 207/6 (42)

      

      

  • 19 Nov 2023 05:08 PM (IST)

    India vs Australia, WC Final LIVE Score: ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ

    41 ಓವರ್​ಗಳ ಮುಕ್ತಾಯದ ವೇಳೆಗೆ 200 ರನ್ ಪೂರೈಸಿದ ಟೀಮ್ ಇಂಡಿಯಾ.

    ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಔಟ್.

    ಕೊನೆಯ 9 ಓವರ್​ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 200/5 (41)

      

  • 19 Nov 2023 05:03 PM (IST)

    India vs Australia, WC Final LIVE Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ ಭಾರತ ತಂಡದ ಸ್ಕೋರ್​ 197 ರನ್​ಗಳು.

    5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ (64) ಹಾಗೂ ಸೂರ್ಯಕುಮಾರ್ ಯಾದವ್ (8) ಬ್ಯಾಟಿಂಗ್.

    IND 197/5 (40)

    ಔಟಾದ ಬ್ಯಾಟರ್​ಗಳು:

    • ಶುಭ್​ಮನ್ ಗಿಲ್ (4)
    • ರೋಹಿತ್ ಶರ್ಮಾ (47)
    • ಶ್ರೇಯಸ್ ಅಯ್ಯರ್ (4)
    • ವಿರಾಟ್ ಕೊಹ್ಲಿ (54)
    • ರವೀಂದ್ರ ಜಡೇಜಾ (9)
  • 19 Nov 2023 04:59 PM (IST)

    India vs Australia, WC Final LIVE Score: ವೆಲ್ಕಂ ಬೌಂಡರಿ

    ಆ್ಯಡಂ ಝಂಪಾ ಎಸೆದ 39ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್.

    8 ಓವರ್​ಗಳಲ್ಲಿ ಕೇವಲ 39 ರನ್ ನೀಡಿದ ಆ್ಯಡಂ ಝಂಪಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 192/5 (39)

      

  • 19 Nov 2023 04:54 PM (IST)

    India vs Australia, WC Final LIVE Score: ಆಸ್ಟ್ರೇಲಿಯಾ ಉತ್ತಮ ಬೌಲಿಂಗ್

    38 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್​ 182 ರನ್​ಗಳು.

    ಟೀಮ್ ಇಂಡಿಯಾ ರನ್​ ಗಳಿಕೆಯನ್ನು 4.79 ಸರಾಸರಿಗೆ ಇಳಿಸಿದ ಆಸ್ಟ್ರೇಲಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 182/5 (38)

     ಕೊನೆಯ 12 ಓವರ್​ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ.

  • 19 Nov 2023 04:43 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ 5ನೇ ವಿಕೆಟ್ ಪತನ

    ಜೋಶ್​ ಹ್ಯಾಝಲ್​ವುಡ್​ ಎಸೆದ 36ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ ಜೋಶ್ ಇಂಗ್ಲಿಸ್​ಗೆ ಕ್ಯಾಚ್ ನೀಡಿದ ರವೀಂದ್ರ ಜಡೇಜಾ.

    22 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ರವೀಂದ್ರ ಜಡೇಜಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 178/5 (36)

      

  • 19 Nov 2023 04:37 PM (IST)

    India vs Australia, WC Final LIVE Score: ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್

    86 ಎಸೆತಗಳಲ್ಲಿ 1 ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್.

    35 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 173 ರನ್​ಗಳು.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ (50) ಹಾಗೂ ರವೀಂದ್ರ ಜಡೇಜಾ (9) ಬ್ಯಾಟಿಂಗ್.

    IND 173/4 (35)

    ಔಟಾದ ಬ್ಯಾಟರ್​ಗಳು:

    • ಶುಭ್​ಮನ್ ಗಿಲ್ (4)
    • ರೋಹಿತ್ ಶರ್ಮಾ (47)
    • ಶ್ರೇಯಸ್ ಅಯ್ಯರ್ (4)
    • ವಿರಾಟ್ ಕೊಹ್ಲಿ (54)
  • 19 Nov 2023 04:29 PM (IST)

    India vs Australia, WC Final LIVE Score: ಅರ್ಧಶತಕದತ್ತ ಕೆಎಲ್ ರಾಹುಲ್

    80 ಎಸೆತಗಳಲ್ಲಿ 47 ರನ್ ಬಾರಿಸಿ ಅರ್ಧಶತಕದತ್ತ ಮುನ್ನಡೆಯುತ್ತಿರುವ ಕೆಎಲ್ ರಾಹುಲ್.

    33 ಓವರ್​ಗಳಲ್ಲಿ 165 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಆಸ್ಟ್ರೇಲಿಯಾ ವೇಗಿಗಳಿಂದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.

    IND 165/4 (33)

  • 19 Nov 2023 04:12 PM (IST)

    India vs Australia, WC Final LIVE Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 150 ರನ್ ಪೂರೈಸಿದ ಟೀಮ್ ಇಂಡಿಯಾ.

    4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.

    IND 152/4 (30)

    ಔಟಾದ ಬ್ಯಾಟರ್​ಗಳು:

    • ಶುಭ್​ಮನ್ ಗಿಲ್ (4)
    • ರೋಹಿತ್ ಶರ್ಮಾ (47)
    • ಶ್ರೇಯಸ್ ಅಯ್ಯರ್ (4)
    • ವಿರಾಟ್ ಕೊಹ್ಲಿ (54)
  • 19 Nov 2023 04:06 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ

    ಪ್ಯಾಟ್ ಕಮಿನ್ಸ್​ ಎಸೆದ 29ನೇ ಓವರ್​ನ 3ನೇ ಎಸೆತದಲ್ಲಿ ಬ್ಯಾಟ್ ಇನ್​ಸೈಡ್​ ಎಡ್ಜ್​ ಆಗಿ ಬೌಲ್ಡ್​ ಆದ ವಿರಾಟ್ ಕೊಹ್ಲಿ.

    63 ಎಸೆತಗಳಲ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ.

    ಆಸ್ಟ್ರೇಲಿಯಾ ತಂಡಕ್ಕೆ ಅತ್ಯಮೂಲ್ಯ ಯಶಸ್ಸು ತಂದುಕೊಟ್ಟ ನಾಯಕ ಪ್ಯಾಟ್ ಕಮಿನ್ಸ್​.

    IND 149/4 (29)

      

  • 19 Nov 2023 03:59 PM (IST)

    India vs Australia, WC Final LIVE Score: ವೆಲ್ಕಂ ಬೌಂಡರಿ

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆದ 27ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಕೆಎಲ್ ರಾಹುಲ್.

    ಇದು 97 ಎಸೆತಗಳ ಬಳಿಕ ಟೀಮ್ ಇಂಡಿಯಾ ಕಡೆಯಿಂದ ಮೂಡಿಬಂದ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 142/3 (27)

      

  • 19 Nov 2023 03:53 PM (IST)

    India vs Australia, WC Final LIVE Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

    56 ಎಸೆತಗಳಲ್ಲಿ 4 ಫೋರ್​ಗಳೊಂದಿಗೆ ಅರ್ಧ ಶತಕ ಪೂರೈಸಿದ ವಿರಾಟ್ ಕೊಹ್ಲಿ

    ಇದು ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ 72ನೇ ಹಾಫ್ ಸೆಂಚುರಿ.

    4ನೇ ವಿಕೆಟ್​ಗೆ ಅರ್ಧ ಶತಕದ ಜೊತೆಯಾಟವಾಡಿದ ಕಿಂಗ್ ಕೊಹ್ಲಿ- ಕೆಎಲ್ ರಾಹುಲ್.

    IND 135/3 (26)

      

      

  • 19 Nov 2023 03:52 PM (IST)

    India vs Australia, WC Final LIVE Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 131 ರನ್​ಗಳು.

    10.2 ಓವರ್​ಗಳಲ್ಲಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ತಂಡ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (49) ಹಾಗೂ ಕೆಎಲ್ ರಾಹುಲ್ (25) ಬ್ಯಾಟಿಂಗ್.

    IND 131/3 (25)

    ಔಟಾದ ಬ್ಯಾಟರ್​ಗಳು:

    • ಶುಭ್​ಮನ್ ಗಿಲ್ (4)
    • ರೋಹಿತ್ ಶರ್ಮಾ (47)
    • ಶ್ರೇಯಸ್ ಅಯ್ಯರ್ (4)
  • 19 Nov 2023 03:40 PM (IST)

    India vs Australia, WC Final LIVE Score: ಟೀಮ್ ಇಂಡಿಯಾ ರನ್ ಸರಾಸರಿ ಇಳಿಕೆ

    10 ಓವರ್​ಗಳ ಮುಕ್ತಾಯದ ವೇಳೆಗೆ 8.0 ಇದ್ದ ರನ್ ಸರಾಸರಿಯನ್ನು 22ನೇ ಓವರ್​ ವೇಳೆಗೆ 5.54 ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್​ಗಳು.

    22 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 121 ರನ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 121/3 (22)

      

  • 19 Nov 2023 03:33 PM (IST)

    India vs Australia, WC Final LIVE Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 115 ರನ್ ಕಲೆಹಾಕಿರುವ ಟೀಮ್ ಇಂಡಿಯಾ ಬ್ಯಾಟರ್​ಗಳು.

    3 ವಿಕೆಟ್ ಕಬಳಿಸಿ ಉತ್ತಮ ದಾಳಿ ಸಂಘಟಿಸುತ್ತಿರುವ ಆಸ್ಟ್ರೇಲಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (39) ಹಾಗೂ ಕೆಎಲ್ ರಾಹುಲ್ (19) ಬ್ಯಾಟಿಂಗ್.

    IND 115/3 (20)

     ಶುಭ್​ಮನ್ ಗಿಲ್ (4), ರೋಹಿತ್ ಶರ್ಮಾ (47) ಹಾಗೂ ಶ್ರೇಯಸ್ ಅಯ್ಯರ್ (4) ಔಟ್.

  • 19 Nov 2023 03:29 PM (IST)

    India vs Australia, WC Final LIVE Score: ಆಸ್ಟ್ರೇಲಿಯಾ ಉತ್ತಮ ಬೌಲಿಂಗ್

    ಟೀಮ್ ಇಂಡಿಯಾ ರನ್ ಸರಾಸರಿಯಲ್ಲಿ 6 ರನ್​ಗಳೊಳಗೆ ತರುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್​ಗಳು.

    19 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್​ ಕಲೆಹಾಕಿರುವ ಟೀಮ್ ಇಂಡಿಯಾ.

    ಕ್ರೀಸ್​ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 113/3 (19)

      

  • 19 Nov 2023 03:15 PM (IST)

    India vs Australia, WC Final LIVE Score: ಶತಕ ಪೂರೈಸಿದ ಟೀಮ್ ಇಂಡಿಯಾ

    16 ಓವರ್​ಗಳಲ್ಲಿ ಶತಕ ಪೂರೈಸಿದ ಟೀಮ್ ಇಂಡಿಯಾ.

    ಪ್ತತಿ ಓವರ್​ಗೆ 6.31 ಸರಾಸರಿಯಲ್ಲಿ ರನ್ ಪೇರಿಸುತ್ತಿರುವ ಭಾರತೀಯ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 101/3 (16)

    ಕೊಹ್ಲಿ-ರಾಹುಲ್ ನಡುವೆ 4ನೇ ವಿಕೆಟ್​ಗೆ 20 ರನ್​ಗಳ ಜೊತೆಯಾಟ.

      

  • 19 Nov 2023 03:10 PM (IST)

    India vs Australia, WC Final LIVE Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳ ಮುಕ್ತಾಯದ ವೇಳೆಗೆ 97 ರನ್ ಕಲೆಹಾಕಿದ ಟೀಮ್ ಇಂಡಿಯಾ ಬ್ಯಾಟರ್​ಗಳು.

    3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (32) ಹಾಗೂ ಕೆಎಲ್ ರಾಹುಲ್ (8) ಬ್ಯಾಟಿಂಗ್.

    IND 97/3 (15)

    ಶುಭ್​ಮನ್ ಗಿಲ್ (3), ರೋಹಿತ್ ಶರ್ಮಾ (47) ಹಾಗೂ ಶ್ರೇಯಸ್ ಅಯ್ಯರ್ (4) ಔಟ್.

  • 19 Nov 2023 03:06 PM (IST)

    India vs Australia, WC Final LIVE Score: ಝಂಪಾ ಉತ್ತಮ ಬೌಲಿಂಗ್

    2 ಓವರ್​ಗಳನ್ನು ಬೌಲಿಂಗ್ ಮಾಡಿರುವ ಸ್ಪಿನ್ನರ್ ಆ್ಯಡಂ ಝಂಪಾ ಕೇವಲ 10 ರನ್ ಮಾತ್ರ ನೀಡಿದ್ದಾರೆ.

    14 ಓವರ್​ಗಳ ಮುಕ್ತಾಯದ ವೇಳೆಗೆ 94 ರನ್ ಕಲೆಹಾಕಿರುವ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಬಲಗೈ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 94/3 (14)

      

  • 19 Nov 2023 02:52 PM (IST)

    India vs Australia, WC Final LIVE Score: ಮತ್ತೊಂದು ವಿಕೆಟ್ ಪತನ

    ಪ್ಯಾಟ್ ಕಮಿನ್ಸ್ ಎಸೆದ 10ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್.

    3 ಎಸೆತಗಳಲ್ಲಿ 4 ರನ್ ಬಾರಿಸಿ ನಿರ್ಗಮಿಸಿದ ಶ್ರೇಯಸ್ ಅಯ್ಯರ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 82/3 (11)

      

  • 19 Nov 2023 02:49 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆದ 10ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ. ಅದ್ಭುತ ರನ್ನಿಂಗ್ ಕ್ಯಾಚ್ ಹಿಡಿದ ಟ್ರಾವಿಸ್ ಹೆಡ್.

    31 ಎಸೆತಗಳಲ್ಲಿ 47 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ. ಆಸ್ಟ್ರೇಲಿಯಾ ತಂಡಕ್ಕೆ 2ನೇ ಯಶಸ್ಸು.

    IND 81/2 (10)

      

  • 19 Nov 2023 02:34 PM (IST)

    India vs Australia, WC Final LIVE Score: ಕಿಂಗ್ ಕೊಹ್ಲಿ-ಹ್ಯಾಟ್ರಿಕ್ ಫೋರ್

    ಮಿಚೆಲ್ ಸ್ಟಾರ್ಕ್ ಎಸೆದ 7ನೇ ಓವರ್​ನ ಮೊದಲ ಎಸೆತವನ್ನು ಡೀಪ್ ಮಿಡ್ ಆನ್​ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಕೊಹ್ಲಿ ಬ್ಯಾಟ್​ನಿಂದ ಆಕರ್ಷಕ ಫೋರ್.

    3ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಮತ್ತೊಂದು ಬೌಂಡರಿ.

    ಈ ಹ್ಯಾಟ್ರಿಕ್ ಫೋರ್​ಗಳೊಂದಿಗೆ 6.3 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 54/1 (7)

      

  • 19 Nov 2023 02:22 PM (IST)

    India vs Australia, WC Final LIVE Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ

    ಮಿಚೆಲ್ ಸ್ಟಾರ್ಕ್​ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಮಿಡ್​ ಆನ್​ನಲ್ಲಿದ್ದ ಆ್ಯಡಂ ಝಂಪಾಗೆ ಕ್ಯಾಚ್ ನೀಡಿದ ಶುಭ್​ಮನ್ ಗಿಲ್.

    7 ಎಸೆತಗಳಲ್ಲಿ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್​​ಮನ್ ಗಿಲ್. ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 37/1 (5)

      

      

  • 19 Nov 2023 02:20 PM (IST)

    India vs Australia, WC Final LIVE Score: ರೋಹಿಟ್​- ಸೂಪರ್ ಸಿಕ್ಸ್​

    ಜೋಶ್ ಹ್ಯಾಝಲ್​ವುಡ್ ಎಸೆದ 4ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.

    ಕೊನೆಯ ಎಸೆತದಲ್ಲಿ ರೋಹಿತ್ ಬ್ಯಾಟ್​ನಿಂದ ಲಾಂಗ್ ಆನ್​ನತ್ತ ಆಕರ್ಷಕ ಫೋರ್​.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 30/0 (4)

      

  • 19 Nov 2023 02:15 PM (IST)

    India vs Australia, WC Final LIVE Score: ಸ್ಟಾರ್ಕ್​ ಉತ್ತಮ ಬೌಲಿಂಗ್

    ಮಿಚೆಲ್ ಸ್ಟಾರ್ಕ್ ತಮ್ಮ 2ನೇ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿದ್ದಾರೆ.

    ಕ್ರೀಸ್ ​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 18/0 (3)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ.

      

  • 19 Nov 2023 02:09 PM (IST)

    India vs Australia, WC Final LIVE Score: ಹಿಟ್​ಮ್ಯಾನ್- ರಾಕೆಟ್ ಶಾಟ್

    ಜೋಶ್ ಹ್ಯಾಝಲ್​ವುಡ್ ಎಸೆದ 2ನೇ ಓವರ್​ನ 2ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.

    3ನೇ ಎಸೆತದಲ್ಲಿ ಹಿಟ್​ಮ್ಯಾನ್ ಬ್ಯಾಟ್​ನಿಂದ ಲೆಗ್ ಸೈಡ್​ನತ್ತ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 13/0 (2)

      

  • 19 Nov 2023 02:05 PM (IST)

    India vs Australia, WC Final LIVE Score: ಆಸ್ಟ್ರೇಲಿಯಾ ಶುಭಾರಂಭ

    ಮೊದಲ ಓವರ್ ​ನಲ್ಲಿ ಕೇವಲ 3 ರನ್​ ನೀಡಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​.

    6 ಎಸೆತಗಳಲ್ಲಿ 3 ರನ್​ ಕಲೆಹಾಕಿದ ಟೀಮ್ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 3/0 (1)

     

  • 19 Nov 2023 01:59 PM (IST)

    India vs Australia, WC Final LIVE Score: ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಆಸ್ಟ್ರೇಲಿಯಾ.

    ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ.

    ಭಾರತ ತಂಡದ ಆರಂಭಿಕರು:- ರೋಹಿತ್ ಶರ್ಮಾ ಹಾಗೂ ಶುಭ್​​ಮನ್ ಗಿಲ್.

    ಆಸ್ಟ್ರೇಲಿಯಾ ಪರ ಮೊದಲ ಓವರ್​: ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​.

  • 19 Nov 2023 01:40 PM (IST)

    India vs Australia, WC Final LIVE Score: ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.

  • 19 Nov 2023 01:39 PM (IST)

    India vs Australia, WC Final LIVE Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

  • 19 Nov 2023 01:34 PM (IST)

    India vs Australia, WC Final LIVE Score: ಟಾಸ್ ಗೆದ್ದ ಆಸ್ಟ್ರೇಲಿಯಾ

    ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 19 Nov 2023 01:30 PM (IST)

    India vs Australia, WC Final LIVE Score: ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿ RO-KO

    ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ.

  • 19 Nov 2023 01:26 PM (IST)

    India vs Australia, WC Final LIVE Score: ಉಭಯ ತಂಡಗಳು ಹೀಗಿವೆ

    ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

    ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.

  • 19 Nov 2023 01:20 PM (IST)

    India vs Australia, WC Final LIVE Score: ಉಭಯ ತಂಡಗಳ ಮುಖಾಮುಖಿ

    ಏಕದಿನ ವಿಶ್ವಕಪ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 8 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದರೆ, 5 ಮ್ಯಾಚ್​ಗಳಲ್ಲಿ ಭಾರತ ತಂಡ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

  • 19 Nov 2023 01:06 PM (IST)

    India vs Australia Live Update: ಸಂಜೆ 5:30ಕ್ಕೆ ಚಾಂಪಿಯನ್‌ಗಳ ಪರೇಡ್

    ಐಸಿಸಿ ಎಲ್ಲಾ ವಿಶ್ವಕಪ್ ವಿಜೇತ ತಂಡಗಳ ನಾಯಕರನ್ನು 2023 ರ ಫೈನಲ್ ವೀಕ್ಷಿಸಲು ಆಹ್ವಾನಿಸಿದೆ. ಇವರೆಲ್ಲರು ವಿಶ್ವಕಪ್‌ನ ಥೀಮ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಒಂದೇ ರೀತಿಯ ಬ್ಲೇಜರ್ ಅನ್ನು ಧರಿಸಿ ಪರೇಡ್ ನಡೆಸಲಿದ್ದಾರೆ.

  • 19 Nov 2023 01:03 PM (IST)

    India vs Australia Live Update: ಆಸೀಸ್ ಫ್ಯಾನ್ಸ್

    ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಆಸ್ಟ್ರೇಲಿಯಾ ತಂಡದ ಅಭಿಮಾನಿಗಳು ಕೂಡ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದಾರೆ.

  • 19 Nov 2023 12:53 PM (IST)

    India vs Australia Live Update: ಮೋದಿ ಟ್ವೀಟ್

    ಕೆಲ ಹೊತ್ತಿನಲ್ಲೇ ಭಾರತ, ಆಸ್ಟ್ರೇಲಿಯಾ ವಿಶ್ವಕಪ್‌​​​​ ಫೈನಲ್ ಪಂದ್ಯ ಶುರುವಾಗಲಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಭಾರತ ತಂಡಕ್ಕೆ ಶುಭಕೋರಿದ್ದಾರೆ. ನಿಮ್ಮ ಗೆಲುವಿಗಾಗಿ 140 ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಫೈನಲ್ಸ್‌ನಲ್ಲಿ ಉತ್ತಮವಾಗಿ ಆಡಿ ಹಾಗೂ ಕ್ರೀಡಾ ಮನೋಭಾವ ಎತ್ತಿ ಹಿಡಿಯಿರಿ ಎಂದು ಹೇಳಿದ್ದಾರೆ.

  • 19 Nov 2023 12:49 PM (IST)

    India vs Australia Live Update: ಏರ್​ ಶೋಗೆ ಕ್ಷಣಗಣನೆ

    ಭಾರತೀಯ ವಾಯುಪಡೆಯ ಸೂರ್ಯಕಿರಣ್ ಅಕ್ರೋಬ್ಯಾಟಿಕ್ ತಂಡದಿಂದ 15 ನಿಮಿಷಗಳ ಏರ್ ಶೋ ಕಾರ್ಯಕ್ರಮ ಟಾಸ್ ಬಳಿಕ ಮಧ್ಯಾಹ್ನ 1:35ಕ್ಕೆ ಶುರುವಾಗಲಿದೆ. ತಂಡದ ಫ್ಲೈಟ್ ಕಮಾಂಡರ್ ಮತ್ತು ಡೆಪ್ಯುಟಿ ಟೀಮ್ ಲೀಡರ್ ವಿಂಗ್ ಕಮಾಂಡರ್ ಸಿದ್ದೇಶ್ ಕಾರ್ತಿಕ್ ನೇತೃತ್ವದಲ್ಲಿ ಈ ಏರ್​ ಶೋ ನಡೆಯಲಿದೆ. ಸೂರ್ಯಕಿರಣ್ ಅಕ್ರೋಬ್ಯಾಟಿಕ್ ತಂಡವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟು ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ವರ್ಟಿಕಲ್ ಏರ್ ಶೋ ಆಯೋಜಿಸಲಾಗಿದೆ.

  • 19 Nov 2023 12:39 PM (IST)

    India vs Australia Live Update : ಹಾಲಿನ ಅಭಿಷೇಕ

    ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲಲಿ ಎಂದು ಅನೇಕ ಕಡೆಗಳಲ್ಲಿ ಹೋಮಗಳು ನಡೆಯುತ್ತಿದೆ. ಇದರ ನಡುವೆ ಪುಣೆಯಲ್ಲಿ ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿ ಶುಭಕೋರಿದ್ದಾರೆ.

  • 19 Nov 2023 12:34 PM (IST)

    India vs Australia Live Update : ಭಾರತ- ಆಸೀಸ್ ದಾಖಲೆ ಹೇಗಿದೆ?

    ಟೀಂ ಇಂಡಿಯಾ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದುವರೆಗೆ 19 ಪಂದ್ಯಗಳನ್ನು ಆಡಿದೆ. ಇದರಲ್ಲಿ 11 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ, 8 ಪಂದ್ಯಗಳಲ್ಲಿ ಸೋಲಿನ ಶಾಕ್ ಎದುರಿಸಿದೆ. ಇನ್ನು ಈ ಮೈದಾನದಲ್ಲಿ ಭಾರತ ಮೂರು ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಆಡಿರುವ ಅಷ್ಟೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ತಂಡ ಕೂಡ ಅಹಮದಾಬಾದ್‌ನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿದೆ. ಇದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಆಸೀಸ್ ಎರಡು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ.

  • 19 Nov 2023 12:30 PM (IST)

    India vs Australia Live Update : ಪಿಚ್ ಹೇಗಿದೆ?

    ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಸರು ಪಡೆದುಕೊಂಡಿರುವ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೆ, ಪಂದ್ಯ ಸಾಗುತ್ತಿದ್ದಂತೆ ಇಲ್ಲಿನ ವಿಕೆಟ್‌ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ. ಇಲ್ಲಿರುವ ಕಪ್ಪು ಮಣ್ಣಿನ ಪಿಚ್‌ಗಳು ಉತ್ತಮ ಬೌನ್ಸ್‌ನೊಂದಿಗೆ ಬೌಲರ್‌ಗಳಿಗೆ ಯೋಗ್ಯವಾಗಿದೆ. ಬ್ಯಾಟರ್‌ಗಳಿಗೆ ಆರಂಭಿಕ ಓವರ್‌ಗಳು ಸವಾಲಾಗಿರಬಹುದು. ಆಟಗಾರರು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದರಿಂದ, ಪಿಚ್ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಸ್ವರ್ಗವಾಗಿ ಬದಲಾಗುತ್ತದೆ.

  • 19 Nov 2023 12:26 PM (IST)

    India vs Australia Live Update : ರಣವೀರ್-ದೀಪಕಾ

    ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ ವೀಕ್ಷಿಸಲು ಅನೇಕ ಬಾಲಿವುಡ್ ತಾರೆಯರು ಆಗಮಿಸುತ್ತಿದ್ದಾರೆ. ಸದ್ಯ ರಣವೀರ್ ಸಿಂಗ್ ಹಾಗೂ ದೀಪಕಾ ಪಡುಕೋಣೆ ಸ್ಟೇಡಿಯಂ ಒಳಗೆ ಪ್ರವೇಶಿಸಿದ್ದಾರೆ.

  • 19 Nov 2023 12:21 PM (IST)

    India vs Australia Live Update : ಸುಧೀರ್ ಕುಮಾರ್ ಚೌಧರಿ ಆಗಮನ

    ಟೀಮ್ ಇಂಡಿಯಾ ಬೆಂಬಲಿಗ ಹಾಗೂ ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಕೂಡ ಅಹಮದಾಬಾದ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಆಗಮನಿಸಿದ್ದು. 2011ರಂತೆಯೇ ಈ ಬಾರಿಯೂ ಭಾರತ ತಂಡ ತವರಿನಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.

  • 19 Nov 2023 12:14 PM (IST)

    ಭಾರತೀಯ ಆಟಗಾರರ ಆಗಮನ

    ಟೀಮ್ ಇಂಡಿಯಾ ಆಟಗಾರರು ಹೋಟೆಲ್​ನಿಂದ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ.

  • 19 Nov 2023 12:13 PM (IST)

    ಜನಸಾಗರ

    ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗೆ ನರೇಂದ್ರ ಮೋದಿ ಸ್ಟೇಡಿಯಂ ಎದುರು 1 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

  • 19 Nov 2023 12:11 PM (IST)

    ಟೀಮ್ ಇಂಡಿಯಾದ ಪ್ಲೇಯಿಂಗ್ 11?

    ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗ ಹೇಗಿರಬಹುದು?.

    ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ ನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

  • 19 Nov 2023 12:08 PM (IST)

    ಹೇಗಿದೆ ಸ್ಟೇಡಿಯಂ?

    ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ಈಗ ಹೇಗಿದೆ ಎಂದು ತೋರಿಸಿದ್ದಾರೆ.

  • 19 Nov 2023 12:05 PM (IST)

    ಕೆಲವೇ ಕ್ಷಣಗಳಲ್ಲಿ ಭಾರತ ಸ್ಟೇಡಿಯಂಗೆ

    ಫೈನಲ್ ಪಂದ್ಯಕ್ಕಾಗಿ ಪ್ರೇಕ್ಷಕರು ತುಂಬಾ ಉತ್ಸುಕರಾಗಿದ್ದಾರೆ. ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರಲಾರಂಭಿಸಿದ್ದಾರೆ. ಇತ್ತ ಕೆಲವೇ ನಿಮಿಷಗಳಲ್ಲಿ ಭಾರತ ತಂಡ ಕೂಡ ನರೆಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಲಿದೆ.

  • 19 Nov 2023 12:03 PM (IST)

    ಶುಭಾಶಯಗಳ ಮಹಾಪೂರ

    ಟೀಮ್ ಇಂಡಿಯಾಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತದ ಕ್ರಿಕೆಟ್ ದಿಗ್ಗಜರು, ಟೀಮ್ ಇಂಡಿಯಾ ಆಟಗಾರರ ಕುಟುಂಬದವರು, ಬಾಲಿವುಡ್, ಸ್ಯಾಂಡಲ್​ವುಡ್ ನಟ-ನಟಿಯರು ಭಾರತ ಗೆಲ್ಲಲಿ ಎಂದು ಶುಭಕೋರಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಜಯಕ್ಕೆ ಹೋಮ-ಹವನಗಳು ನಡೆಯುತ್ತಿದೆ.

  • 19 Nov 2023 12:01 PM (IST)

    ಭಾರತ-ಆಸ್ಟ್ರೇಲಿಯಾ

    ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಪಂದ್ಯಕ್ಕೆ ಇನ್ನೇನು ಕೆಲವೇ ಸಮಯ ಬಾಕಿಯಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವ ಭಾರತ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಮುಖಾಮುಖಿ ಆಗಲಿವೆ.

  • Published On - Nov 19,2023 12:00 PM

    Follow us
    ಚಾಮುಂಡೇಶ್ವರಿ ವರ್ಧಂತಿ ಮಹತ್ವವೇನು? ಪ್ರಧಾನ ಅರ್ಚಕರು ವಿವರಿಸಿದ್ದಾರೆ ನೋಡಿ
    ಚಾಮುಂಡೇಶ್ವರಿ ವರ್ಧಂತಿ ಮಹತ್ವವೇನು? ಪ್ರಧಾನ ಅರ್ಚಕರು ವಿವರಿಸಿದ್ದಾರೆ ನೋಡಿ
    ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್​: ಡಿಕೆ ಶಿವಕುಮಾರ್
    ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್​: ಡಿಕೆ ಶಿವಕುಮಾರ್
    ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ
    ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ
    ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ; ರವಿ
    ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ; ರವಿ
    MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
    MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
    ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
    ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
    ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
    ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
    ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
    ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
    ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
    ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
    Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
    Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ