ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ (World Cup Final) ಆಸ್ಟ್ರೇಲಿಯಾ ವಿರುದ್ಧದ ಹೃದಯವಿದ್ರಾವಕ ಸೋಲಿನ ನಂತರ ಟೀಮ್ ಇಂಡಿಯಾ ಆಘಾತಕ್ಕೆ ಒಳಗಾಗಿದೆ. ಆದರೆ, ಇದರ ನಡುವೆಯೇ ನವೆಂಬರ್ 23 ರಂದು ವೈಜಾಗ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ತಯಾರಾಗಬೇಕಿದೆ. ಬಿಸಿಸಿಐ ಸೋಮವಾರ 15 ಸದಸ್ಯರ ಭಾರತ ತಂಡವನ್ನು ಕೂಡ ಪ್ರಕಟ ಮಾಡಿದ್ದು, ಸೂರ್ಯಕುಮಾರ್ ಯಾದವ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಇದು ಎರಡು ಯುವ ತಂಡಗಳ ನಡುವಿನ ಸರಣಿಯಾಗಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.
ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಯಾವಾಗ ಪ್ರಾರಂಭವಾಗುತ್ತದೆ?
ನವೆಂಬರ್ 23 ರಂದು ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ ಆರಂಭವಾಗಲಿದೆ.
ಭಾರತ-ಆಸ್ಟ್ರೇಲಿಯಾ ಟಿ20ಸರಣಿಯನ್ನು ಎಲ್ಲಿ ಆಡಲಾಗುತ್ತದೆ?
ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಯು ಭಾರತದಲ್ಲಿ ನಡೆಯಲಿದೆ.
ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯ ಸ್ಥಳಗಳು ಯಾವುವು?
5 ಪಂದ್ಯಗಳ ಟಿ20 ಸರಣಿಯ ಸ್ಥಳಗಳು -ವಿಶಾಖಪಟ್ಟಣಂ, ತಿರುವನಂತಪುರಂ, ರಾಯ್ಪುರ, ಮತ್ತು ಬೆಂಗಳೂರು.
ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಿದ ಪ್ರಧಾನಿ ಮೋದಿ
ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯನ್ನು ಎಲ್ಲಿ ವೀಕ್ಷಿಸಬಹುದು?
ಭಾರತ vs ಆಸ್ಟ್ರೇಲಿಯಾ ಟಿ29 ಸರಣಿಯನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಅಭಿಮಾನಿಗಳು Sports18 ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ಸರಣಿಯನ್ನು ವೀಕ್ಷಿಸಬಹುದು.
ಭಾರತ-ಆಸ್ಟ್ರೇಲಿಯಾ ಟಿ20ಸರಣಿ ಎಷ್ಟು ಗಂಟೆಗೆ ಆರಂಭ?
ಭಾರತ ಹಾಗೂ ಆಸ್ಟ್ರೇಲಿಯಾ ಟಿ20ಸರಣಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಉಭಯ ತಂಡಗಳು:
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್.
ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಆ್ಯಡಂ ಝಂಪಾ, ತನ್ವೀರ್ ಸಂಘ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ