India vs Canada T20 WC Highlights: ಮಳೆಯಿಂದಾಗಿ ಭಾರತ- ಕೆನಡಾ ಪಂದ್ಯ ರದ್ದು
India vs Canada, T20 world Cup 2024 Highlights Updates: ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ-ಕೆನಡಾ ನಡುವಿನ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ-ಕೆನಡಾ ನಡುವಿನ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು ಕೊನೆಯ ಔಪಚಾರಿಕ ಪಂದ್ಯವಾಗಿತ್ತು. ಏಕೆಂದರೆ ಟೀಂ ಇಂಡಿಯಾ ಸತತ ಮೂರು ಪಂದ್ಯಗಳನ್ನು ಗೆದ್ದು ಈಗಾಗಲೇ ಸೂಪರ್ 8 ಸುತ್ತನ್ನು ಪ್ರವೇಶಿಸಿದ್ದರೆ, ಇತ್ತ ಕೆನಡಾ ತಂಡ ಕೇವಲ 1 ಪಂದ್ಯದಲ್ಲಿ ಗೆದ್ದು ಲೀಗ್ನಿಂದ ಹೊರಬಿದ್ದಿತ್ತು.
LIVE NEWS & UPDATES
-
India vs Canada Live Score: ಭಾರತ-ಕೆನಡಾ ಪಂದ್ಯ ರದ್ದು
ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ-ಕೆನಡಾ ನಡುವಿನ ಪಂದ್ಯ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಒಂದೇ ಒಂದು ಚೆಂಡು ಕೂಡ ಎಸೆಯಲಾಗದೆ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ನಡೆಯಲು ಸಾಧ್ಯವಾಗದ ಕಾರಣ ಎರಡು ಬಾರಿ ಫೀಲ್ಡ್ ಪರಿಶೀಲಿಸಿದ ಅಂಪೈರ್ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
-
India vs Canada Live Score: ಪಂದ್ಯ ವಿಳಂಬ
ಫ್ಲೋರಿಡಾದ ಪಿಚ್ ಇನ್ನೂ ಒಣಗಿಲ್ಲ. ಈಗ 9 ಗಂಟೆಗೆ ಮೈದಾನವನ್ನು ಪರಿಶೀಲಿಸಲಾಗುವುದು.
-
India vs Canada Live Score: 8 ಗಂಟೆಗೆ ನಿರ್ಧಾರ
ಮಳೆಯಿಂದಾಗಿ ಮೈದಾನ ಒದ್ದೆಯಾಗಿರುವ ಕಾರಣ ಟಾಸ್‌ನಲ್ಲಿ ವಿಳಂಬವಾಗಲಿದ್ದು, ಅಂಪೈರ್ ರಾತ್ರಿ 8 ಗಂಟೆಗೆ ಮೈದಾನವನ್ನು ಪರಿಶೀಲಿಸಿದ ನಂತರ ಪಂದ್ಯವನ್ನು ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸದ್ಯ ಫ್ಲೋರಿಡಾದಲ್ಲಿ ಮಳೆಯಾಗದಿರುವುದು ಸಮಾಧಾನದ ಸಂಗತಿ.
India vs Canada Live Score: ಟಾಸ್ ಮುಂದೂಡಲಾಗಿದೆ
ಭಾರತ ಮತ್ತು ಕೆನಡಾ ನಡುವಿನ ಪಂದ್ಯ ಈಗ ವಿಳಂಬವಾಗಲಿದೆ. ಟಾಸ್‌ಗಾಗಿ ಉಭಯ ತಂಡಗಳ ನಾಯಕರು ಬರಬೇಕಿತ್ತು ಆದರೆ ಮೈದಾನ ತೇವಗೊಂಡಿದ್ದರಿಂದ ಮುಂದೂಡಲಾಯಿತು. ಇನ್ನು ಪಂದ್ಯದ ಅಧಿಕಾರಿಗಳು 8 ಗಂಟೆಗೆ ಮೈದಾನದ ಪರಿಶೀಲನೆಗೆ ಬರಲಿದ್ದಾರೆ.
ಫ್ಲೋರಿಡಾದಲ್ಲಿ ಪ್ರಸ್ತುತ ಹವಾಮಾನ
ಫ್ಲೋರಿಡಾದಲ್ಲಿ ನಡೆಯಲಿರುವ ಭಾರತ ಮತ್ತು ಕೆನಡಾ ನಡುವಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಸದ್ಯ ವಾತಾವರಣ ಶುಭ್ರವಾಗಿದೆ. ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಹವಾಮಾನ ಈಗ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
Published On - Jun 15,2024 7:08 PM