IND vs ENG: ಅಜೇಯ 70 ರನ್ ಸಿಡಿಸಿದ ಜೈಸ್ವಾಲ್ ! ಮೊದಲ ದಿನದಾಟದಂತ್ಯಕ್ಕೆ ಭಾರತ 119/1

|

Updated on: Jan 25, 2024 | 5:17 PM

IND vs ENG: ಹೈದರಾಬಾದ್ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿದೆ.

IND vs ENG: ಅಜೇಯ 70 ರನ್ ಸಿಡಿಸಿದ ಜೈಸ್ವಾಲ್ ! ಮೊದಲ ದಿನದಾಟದಂತ್ಯಕ್ಕೆ ಭಾರತ 119/1
ಟೀಂ ಇಂಡಿಯಾ
Follow us on

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ (Team India) 1 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿದೆ. ತಂಡದ ಪರ ಅಜೇಯ 76 ರನ್ ಕಲೆಹಾಕಿರುವ ಆರಂಭಿಕ ಯಶಸ್ವಿ ಜೈಸ್ಬಾಲ್ ( Yashasvi Jaiswal) ಹಾಗೂ ಅಜೇಯ 14 ರನ್ ಸಿಡಿಸಿರುವ ಶುಭ್​ಮನ್ ಗಿಲ್ (Shubman Gill) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ರೂಪದಲ್ಲಿ ತಂಡ ಏಕೈಕ ವಿಕೆಟ್ ಕಳೆದುಕೊಂಡಿದೆ.

246 ರನ್​ಗಳಿಗೆ ಇಂಗ್ಲೆಂಡ್ ಆಲೌಟ್

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡ ದಿನದ ಮೂರನೇ ಸೆಷನ್​ನಲ್ಲಿ 246 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಝಾಕ್ ಕ್ರಾಲಿ (20 ರನ್) ಹಾಗೂ ಬೆನ್ ಡಕೆಟ್ (35 ರನ್) ಮೊದಲ ವಿಕೆಟ್​ಗೆ 55 ರನ್​ಗಳ ಜೊತೆಯಾಟ ನೀಡಿದರು. ನಂತರ ಬಂದ ಒಲಿ ಪೋಪ್ ಕೇವಲ 1 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ತಂಡದ ಮಾಜಿ ನಾಯಕ ಜೋ ರೂಟ್ 29 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು.

ಸ್ಟೋಕ್ಸ್ ಅರ್ಧಶತಕ

ಅನುಭವಿ ಜಾನಿ ಬೈರ್​ಸ್ಟೋ ಕೂಡ 37 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಕೆಳಕ್ರಮಾಂಕದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಬೆನ್ ಸ್ಟೋಕ್ಸ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಾಯಕನಿಗೆ ಸಾಥ್ ನೀಡಿದ ಟಾಮ್ ಹಾರ್ಟ್ಲಿ 23 ರನ್​ಗಳಿಗೆ ಕಾಣಿಕೆ ನೀಡಿದರು. ಉಳಿದಂತೆ ಇಂಗ್ಲೆಂಡ್ ತಂಡದ ಯಾವುದೇ ಬ್ಯಾಟರ್​ಗೆ ಭಾರತದ ಸ್ಪಿನ್ ದಾಳಿಯ ಮುಂದೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಮಿಂಚಿದ ಸ್ಪಿನ್ನರ್​ಗಳು

ನಿರೀಕ್ಷೆಯಂತೆ ಟೀಂ ಇಂಡಿಯಾ ಪರ ಸ್ಪಿನ್ನರ್‌ಗಳು ಚಾಣಾಕ್ಷತನದ ಬೌಲಿಂಗ್ ಮಾಡಿ ಇಂಗ್ಲೆಂಡ್ ಆಟಗಾರರ ಬಝ್ ಬಾಲ್ ಕ್ರಿಕೆಟ್​ಗೆ ತಕ್ಕ ತಿರುಗೇಟು ನೀಡಿದರು. ತಂಡದ ಪರ ರವೀಂದ್ರ ಜಡೇಜಾ ಹಾಗೂ ಆರ್​ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಮತ್ತೊಬ್ಬ ಆಫ್ ಸ್ಪಿನ್ನರ್‌ ಅಕ್ಷರ್ ಪಟೇಲ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಲಾ ವಿಕೆಟ್ ಪಡೆದರು.

IND vs ENG: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರವೀಂದ್ರ ಜಡೇಜಾ..!

ಭಾರತಕ್ಕೆ ಭರ್ಜರಿ ಆರಂಭ

ಇಂಗ್ಲೆಂಡ್‌ ತಂಡವನ್ನು 246 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಹೀಗಾಗಿ ತಂಡ ದಿನದಾಟದಂತ್ಯಕ್ಕೆ 23 ಓವರ್​ ಬ್ಯಾಟಿಂಗ್ ಮಾಡಿ 119 ರನ್ ಕಲೆಹಾಕಲು ಸಾಧ್ಯವಾಯಿತು. ಈ ವೇಳೆ ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 70 ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Thu, 25 January 24