
ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಇದುವರೆಗೆ ಮೂರು ಪಂದ್ಯಗಳನ್ನು ಆಡಲಾಗಿದ್ದು, ಸರಣಿ 1-1ರಲ್ಲಿ ಸಮನಾಗಿದೆ. ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನವೇನನ್ನೂ ನೀಡಿಲ್ಲ. ಆದರೆ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಈ ಆಟಗಾರನ ಹೆಸರು ರೋಹಿತ್ ಶರ್ಮಾ. ರೋಹಿತ್ ಲಾರ್ಡ್ಸ್ನಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದರು ಮತ್ತು ನಂತರ ಮೂರನೇ ಟೆಸ್ಟ್ ಪಂದ್ಯದಲ್ಲೂ ಅವರ ಬ್ಯಾಟ್ನಿಂದ ರನ್ ಗಳಿಸಿದರು. ಈಗ ಅವರ ಬ್ಯಾಟಿಂಗ್ ನೋಡಿ ಆಸ್ಟ್ರೇಲಿಯಾದ ಮಾಜಿ ಬೌಲರ್ ಬ್ರಾಡ್ ಹಾಗ್ ತುಂಬಾ ಪ್ರಭಾವಿತರಾಗಿದ್ದಾರೆ.
ರೋಹಿತ್ ಇದುವರೆಗೆ ಮೂರು ಟೆಸ್ಟ್ ಪಂದ್ಯಗಳಲ್ಲಿ 230 ರನ್ ಗಳಿಸಿದ್ದಾರೆ. ರೋಹಿತ್ ತನ್ನ ಬ್ಯಾಟಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಿದ್ದರಿಂದಲೇ ಅವರು ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ರನ್ ಗಳಿಸಲು ಸಾಧ್ಯವಾಯಿತು ಎಂದು ಹಾಗ್ ಹೇಳಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಅರ್ಧ ಶತಕ ಗಳಿಸಿದರು. ಆದಾಗ್ಯೂ, ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 76 ರನ್ನುಗಳಿಂದ ಸೋಲೊಪ್ಪಿಕೊಂಡಿತು.
ರೋಹಿತ್ ಬದಲಾವಣೆ ನಂಬಲಸಾಧ್ಯ
ಹಾಗ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ, ಈ ಸರಣಿಯಲ್ಲಿ ಅವರು ಇನ್ನೂ ಶತಕ ಗಳಿಸಿಲ್ಲ. ಆದರೆ ಭಾರತದಿಂದ ಹೊರಗೆ ರೋಹಿತ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಅವರು ಶತಕ ಭಾರಿಸುತ್ತಾರೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ರಿಷಭ್ ಪಂತ್ ಬಗ್ಗೆ ಹೇಳಿದ್ದಿದು
ಹಾಗ್, ರಿಷಬ್ ಪಂತ್ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಪಂತ್ ತನ್ನ ಬ್ಯಾಟಿಂಗ್ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ಅವರು ಹೇಳಿದರು. “ನಾನು ರಿಷಬ್ ಪಂತ್ ಬಗ್ಗೆ ಚಿಂತಿತನಾಗಿದ್ದೇನೆ ಏಕೆಂದರೆ ಈ ಸಮಯದಲ್ಲಿ ಭಾರತೀಯ ತಂಡವು ಒತ್ತಡದಲ್ಲಿದೆ. ಹೀಗಾಗಿ ಪಂತ್ ಹೇಗೆ ಆಡಬೇಕು ಎಂಬುದರ ಬಗ್ಗೆ ಗೊಂದಲದಲ್ಲಿದ್ದಾರೆ. ಆದ್ದರಿಂದ ತಂಡದ ನಾಯಕ ಆತನಿಗೆ ತನ್ನ ಆಟವನ್ನು ಆಡಲು ಬಿಡಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕೊಹ್ಲಿಗೆ ಇದುವರೆಗೆ ಇಂಗ್ಲೆಂಡ್‌ನಲ್ಲಿ ರಕ್ಷಣಾತ್ಮಕ ಆಟಗಳನ್ನು ಆಡಿದ ಅನುಭವವಿದೆ ಎಂದರು.