India vs England 2nd test weather report: ಭಾರತ ಮತ್ತು ಇಂಗ್ಲೆಂಡ್ (India vs England 2nd Test) ನಡುವಿನ 5 ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯ (IND vs ENG 2 ನೇ ಟೆಸ್ಟ್) ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಆಗಸ್ಟ್ 12 ರಿಂದ 16ರವರೆಗೆ ಈ ಪಂದ್ಯ ನಡೆಯಲಿದೆ. ಇದಾಗ್ಯೂ ಈ ಪಂದ್ಯಕ್ಕೂ ವರುಣ ಅಡ್ಡಿಪಡಿಸಲಿದ್ದಾನಾ ಎಂಬ ಪ್ರಶ್ನೆಯೊಂದು ಕ್ರಿಕೆಟ್ ಪ್ರೇಮಿಗಳಲ್ಲಿದೆ. ಏಕೆಂದರೆ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ, ಮಳೆಯಿಂದಾಗಿ ಡ್ರಾ ಆಗಿತ್ತು. ಪಂದ್ಯದ ಅಂತಿಮ ದಿನದಾಟ (5ನೇ ದಿನ) ಮಳೆಯ ಕಾರಣ ನಡೆದಿರಲಿಲ್ಲ. ಇತ್ತ 5ನೇ ದಿನ ಕೇವಲ 157 ರನ್ಗಳ ಟಾರ್ಗೆಟ್ ಪಡೆದಿದ್ದ ಭಾರತಕ್ಕೆ ಗೆಲ್ಲುವ ಅವಕಾಶವಿತ್ತು. ಆದರೆ ನಿರಂತರ ಸುರಿದ ಮಳೆಯಿಂದಾಗಿ ಈ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈಗ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಳೆ ಇಂಗ್ಲೆಂಡ್ ಹವಾಮಾನ ಹೇಗಿರಲಿದೆ (india vs england 2nd test weather report) ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೊಸ ಕುತೂಹಲ.
ಮೊದಲಿಗೆ, ನಾಟಿಂಗ್‌ಹ್ಯಾಮ್‌ನಿಂದ ಲಂಡನ್ ನಡುವಣ ಅಂತರವನ್ನು ಗಮನಿಸಿದರೆ, ಈ ಎರಡು ನಗರಗಳ ನಡುವಣ ಸಂಚಾರಕ್ಕೆ ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದಾಗ್ಯೂ ಎರಡೂ ಸ್ಥಳಗಳಲ್ಲಿನ ಹವಾಮಾನವು ತುಂಬಾ ವಿಭಿನ್ನ. ಹೀಗಾಗಿ ಸದ್ಯ ಲಂಡನ್ನಲ್ಲಿ ನಾಟಿಂಗ್ಹ್ಯಾಮ್ನಂತೆ ಮೋಡ ಮುಸುಕಿದ ವಾತಾವರಣ ಇಲ್ಲ. ಇನ್ನು ಆಗಸ್ಟ್ 12 ರಿಂದ 2ನೇ ಟೆಸ್ಟ್ ಪ್ರಾರಂಭವಾಗಲಿದೆ. ಆ ದಿನದ ಹವಾಮಾನ ಮಾಹಿತಿಯಲ್ಲೂ ಮಳೆ ಬರುವ ಸಾಧ್ಯತೆಯಿಲ್ಲ. ಹೀಗಾಗಿ ಮೊದಲ ದಿನವೇ ಟಾಸ್ ನಡೆಯಲಿದೆ.
ಅಕ್ಯೂವೆದರ್ ಹವಾಮಾನ ಮಾಹಿತಿ ಪ್ರಕಾರ, ಆಗಸ್ಟ್ 12 ರಂದು ಗರಿಷ್ಠ ತಾಪಮಾನವು 23 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಅಂದರೆ ಮಳೆ ಬರುವ ಸಾಧ್ಯತೆ ಇಲ್ಲ. ಇನ್ನುಆಗಸ್ಟ್ 13 ಶುಕ್ರವಾರದ ತಾಪಮಾನವು ಪಂದ್ಯದ ಮೊದಲ ದಿನದಂತೆಯೇ ಇರಲಿದೆ. ಕೆಲ ಹೊತ್ತು ಮೋಡ ಕಾಣಿಸಿಕೊಂಡರೂ ಎರಡನೇ ದಿನವೂ ಮಳೆಯಾಗುವ ಸಾಧ್ಯತೆ ಇಲ್ಲ.
ಆಗಸ್ಟ್ 14 ಶನಿವಾರ ಅಂದರೆ ಟೆಸ್ಟ್ ಪಂದ್ಯದ ಮೂರನೇ ದಿನ, ಬಿಸಿಲಿನ ವಾತಾವರಣ ಇರಲಿದೆ. ಆಗಸ್ಟ್ 15, ಭಾನುವಾರದಂದು ಕೂಡ ಹವಾಮಾನವು ಹಿತವಾಗಿರಲಿದೆ. ಹೀಗಾಗಿ ಮಳೆಯ ಭೀತಿ ಇರುವುದಿಲ್ಲ. ಇನ್ನು ಪಂದ್ಯದ ಐದನೇ ಮತ್ತು ಅಂತಿಮ ದಿನವಾದ ಆಗಸ್ಟ್ 16 ರಂದು ಯಾವುದೇ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಅಕ್ಯೂವೆದರ್ ಮಾಹಿತಿ ನೀಡಿದೆ. ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ ಪಂದ್ಯದ ಫಲಿತಾಂಶವನ್ನು ನಿರೀಕ್ಷಿಸಬಹುದು.
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವು ನಿಶ್ಚಿತವಾಗಿತ್ತು. ಆದರೆ ಅದೃಷ್ಟ ಇಂಗ್ಲೆಂಡ್ ಪಾಲಿಗೆ ವರುಣನ ರೂಪದಲ್ಲಿ ಬಂತು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ (England) 183 ರನ್ಗಳಿಸಿದರೆ, 2ನೇ ಇನಿಂಗ್ಸ್ನಲ್ಲಿ 303 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್ನ್ನು 278 ರನ್ಗಳೊಂದಿಗೆ ಅಂತ್ಯಗೊಳಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾ (Team India) 2ನೇ ಇನಿಂಗ್ಸ್ನಲ್ಲಿ 209 ರನ್ಗಳಿಸಬೇಕಿತ್ತು. ಇದಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟದೊಂದಿಗೆ 52 ರನ್ಗಳಿಸಿತ್ತು. ಅದರಂತೆ ಗೆಲ್ಲಲು ಅಂತಿಮ ದಿನದಾಟದಲ್ಲಿ 157 ರನ್ಗಳನ್ನು ಕಲೆಹಾಕಬೇಕಿತ್ತು. ಆದರೆ 5ನೇ ದಿನದಾಟ ಮಳೆಗೆ ಅಹುತಿಯಾದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ
ಇದನ್ನೂ ಓದಿ: ICC Test Rankings: ಕೊಹ್ಲಿಗೆ ಹಿಂಬಡ್ತಿ, ಒಂಬತ್ತನೇ ಸ್ಥಾನಕ್ಕೇರಿದ ಬುಮ್ರಾ! ಟಾಪ್ 10 ರಲ್ಲಿ ಮೂವರು ಭಾರತೀಯರು
(india vs england 2nd test at london lords know all about weather updates of 5 days)