IPL 2021: ಲಯನ್ ಡೇ ಎಂಟ್ರಿ! ದ್ವಿತೀಯಾರ್ಧದ ಐಪಿಎಲ್ಗಾಗಿ ಚೆನ್ನೈಗೆ ಬಂದಿಳಿದ ಸಿಎಸ್‌ಕೆ ನಾಯಕ ಧೋನಿ
Mahendra Singh Dhoni: ಸಿಎಸ್‌ಕೆ ಆಟಗಾರರು ಯುಎಇಗೆ ತೆರಳುವ ಮುನ್ನ ಚೆನ್ನೈನಲ್ಲಿ ಯಾವುದೇ ತರಬೇತಿ ಶಿಬಿರವಿರುವುದಿಲ್ಲ ಎಂದು ವಿಶ್ವನಾಥ್ ಹೇಳಿದರು. ಉಳಿದ ಐಪಿಎಲ್ 2021 ಟೂರ್ನಮೆಂಟ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮಂಗಳವಾರ ಚೆನ್ನೈ ತಲುಪಿದ್ದಾರೆ. ತಂಡದ ಆಟಗಾರರು ಇಲ್ಲಿಂದ ಉಳಿದ ಐಪಿಎಲ್ ಪಂದ್ಯಗಳನ್ನು ಆಡುವ ಸಲುವಾಗಿ ಯುಎಇಗೆ ತೆರಳಲ್ಲಿದ್ದಾರೆ. ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ಉಳಿದ ಸೀಸನ್ ಅನ್ನು ಯುಎಇ ಆಯೋಜಿಸಲಿದೆ. ಆಗಸ್ಟ್ 13 ರಂದು ತಂಡದ ಭಾರತೀಯ ಆಟಗಾರರು ಯುಎಇಗೆ ತೆರಳುವ ಸಾಧ್ಯತೆಯಿದೆ ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಎಸ್‌ಕೆ ಸಿಇಒ ಕೆಎಸ್ ವಿಶ್ವನಾಥನ್ ಮಾತನಾಡಿ, ತಂಡದ ಭಾರತೀಯ ಆಟಗಾರರಲ್ಲಿ ಯಾರು ಲಭ್ಯರಿದ್ದಾರೋ ಅವರು ಆಗಸ್ಟ್ 13 ರಂದು ಯುಎಇಗೆ ತೆರಳುವ ಸಾಧ್ಯತೆಯಿದೆ ಎಂದಿದ್ದಾರೆ. ಇದರ ಪ್ರಯುಕ್ತ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ. ಧೋನಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
CSK ತನ್ನ ಟ್ವಿಟರ್ ಖಾತೆಯಲ್ಲಿ ಧೋನಿಯ ಚಿತ್ರವನ್ನು ಹಂಚಿಕೊಂಡು ಅವರು ನಗರಕ್ಕೆ ಬಂದಿರುವ ಬಗ್ಗೆ ಮಾಹಿತಿ ನೀಡಿದೆ ಮತ್ತು ‘ಲಯನ್ ಡೇ ಎಂಟ್ರಿ’ ಎಂದು ಬರೆದುಕೊಂಡಿದೆ. ಸಿಎಸ್‌ಕೆ ಆಟಗಾರರು ಯುಎಇಗೆ ತೆರಳುವ ಮುನ್ನ ಚೆನ್ನೈನಲ್ಲಿ ಯಾವುದೇ ತರಬೇತಿ ಶಿಬಿರವಿರುವುದಿಲ್ಲ ಎಂದು ವಿಶ್ವನಾಥ್ ಹೇಳಿದರು. ಉಳಿದ ಐಪಿಎಲ್ 2021 ಟೂರ್ನಮೆಂಟ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನಡೆಯಲಿದೆ. ಮೇ ತಿಂಗಳಲ್ಲಿ, ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ನಂತರ ಪಂದ್ಯವನ್ನು ಮಧ್ಯದಲ್ಲಿ ಮುಂದೂಡಲಾಯಿತು. ಇದರ ನಂತರ, ಬಿಸಿಸಿಐ ಯುಎಇಯಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತು. ಈ ಹಿಂದೆ ಐಪಿಎಲ್ 2020 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ CSK, ಮುಂಬೈ ಇಂಡಿಯನ್ಸ್ ವಿರುದ್ಧ ಸೆಪ್ಟೆಂಬರ್ 19 ರಂದು ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಲೀಗ್ ಅನ್ನು ಅಮಾನತುಗೊಳಿಸುವ ಮೊದಲು, ಧೋನಿ ತಂಡವು ಏಳು ಪಂದ್ಯಗಳಿಂದ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಅವರು ಕೇವಲ ಎರಡು ಪಂದ್ಯಗಳಲ್ಲಿ ಸೋತಿದ್ದರು. ಐಪಿಎಲ್ 2020 ಕ್ಕೆ ಹೋಲಿಸಿದರೆ, ತಂಡವು ಈ ವರ್ಷ ಉತ್ತಮ ಆಟವನ್ನು ತೋರಿಸಿದೆ. ಕೊರೊನಾ ಪ್ರಕರಣಗಳಿಂದ ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸುವವರೆಗೆ ಚೆನ್ನೈ ಪ್ಲೇಆಫ್ ತಲುಪಲು ಪ್ರಬಲ ಸ್ಪರ್ಧಿಯಾಗಿತ್ತು. ಈಗ ಯುಎಇಯಲ್ಲಿ ಈ ತಂಡ ಹೇಗೆ ಆಡುತ್ತದೆ ಎಂಬುದನ್ನು ನೋಡಬೇಕು. ಕಳೆದ ವರ್ಷವೂ ಟೂರ್ನಮೆಂಟ್ ಯುಎಇಯಲ್ಲಿಯೇ ನಡೆದಿತ್ತು. ಆದರೆ ಅಲ್ಲಿ ತಂಡವು ಏಳನೇ ಸ್ಥಾನದಲ್ಲಿತ್ತು. ಐಪಿಎಲ್ 2020ರಲ್ಲಿ ಚೆನ್ನೈ ತಂಡವು ಪ್ಲೇಆಫ್‌ಗೆ ಪ್ರವೇಶಿಸಲು ಸಾಧ್ಯವಾಗದ ಮೊದಲ ಸೀಸನ್ ಆಗಿತ್ತು.
Lion Day Entry ?
?Anbuden Chennai#ThalaDharisanam #WhistlePodu #Yellove ?? pic.twitter.com/Ci2G4vBuEQ
— Chennai Super Kings – Mask P?du Whistle P?du! (@ChennaiIPL) August 10, 2021
ಇದನ್ನೂ ಓದಿ:IPL 2022 Mega Auction: ಐಪಿಎಲ್ ಮೆಗಾ ಹರಾಜಿನ ಬಗ್ಗೆ ಹೊರಬಿತ್ತು ಶಾಕಿಂಗ್ ಸುದ್ದಿ: ಫ್ರಾಂಚೈಸಿಗಳಿಗೆ ಭಾರೀ ನಿರಾಸೆ