Shafali verma: ಲೇಡಿ ಸೆಹ್ವಾಗ್ ಸಿಡಿಲಬ್ಬರ: ಹಂಡ್ರೇಡ್ ಲೀಗ್ನಲ್ಲಿ ಹೊಸ ದಾಖಲೆ
shafali verma the hundred league: 10 ವಿಕೆಟ್ಗಳ ಈ ಜಯದೊಂದಿಗೆ ಅಂಕ ಪಟ್ಟಿಯಲ್ಲಿ 8 ತಂಡಗಳ ಪೈಕಿ ವೆಲ್ಪ್ ಫೈರ್ 7ನೇ ಸ್ಥಾನದಲ್ಲಿದ್ದು, ಬರ್ನಿಂಗ್ಹ್ಯಾಮ್ ಫೀನಿಕ್ಸ್ 5 ನೇ ಸ್ಥಾನದಲ್ಲಿದೆ.
ಲೇಡಿ ಸೆಹ್ವಾಗ್ ಖ್ಯಾತಿಯ ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ್ದಾರೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ವೆಲ್ಷ್ ಫೈರ್ ಹಾಗೂ ಬರ್ನಿಂಗ್ಹ್ಯಾಮ್ ಫೀನಿಕ್ಸ್ ನಡುವಣ ಪಂದ್ಯದಲ್ಲಿ ಶಫಾಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಫ್ ಫೈರ್ ತಂಡ 100 ಎಸೆತಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಬರ್ನಿಂಗ್ಹ್ಯಾಮ್ ಫೀನಿಕ್ಸ್ ತಂಡದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಹಾಗೂ ಎವೆಲಿನ್ ಜೋನ್ಸ್ ಭರ್ಜರಿ ಆರಂಭ ಒದಗಿಸಿದರು.
ಮೊದಲ ಎಸೆತದಿಂದಲೇ ಅಬ್ಬರಿಸಲಾರಂಭಿಸಿದ ಶಫಾಲಿ ವೆಲ್ಫ್ ಫೈರ್ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಷ್ಟೇ ಅಲ್ಲದೆ ಜೋನ್ಸ್ ಜೊತೆಗೂಡಿ ಶತಕದ ಜೊತೆಯಾಟವಾಡಿದರು. ಇದೇ ವೇಳೆ ಎವೆಲಿನ್ ಜೋನ್ಸ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಇಬ್ಬರು ಬ್ಯಾಟರುಗಳ ಅಬ್ಬರದ ನಡುವೆ ಬರ್ನಿಂಗ್ಹ್ಯಾಮ್ ಬೌಲರುಗಳು ಮಂಕಾದರು. ಇತ್ತ ಶಫಾಲಿ ವರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ ಕೇವಲ 76 ಎಸೆತಗಳಲ್ಲಿ 128 ರನ್ ಗಳ ಗುರಿ ಮುಟ್ಟಿಸಿದರು. ಇತ್ತ ಯಾವುದೇ ವಿಕೆಟ್ ಕಳೆದುಕೊಳ್ಳದೇ ಟಾರ್ಗೆಟ್ ಬೆನ್ನತ್ತಿದ ಶಫಾಲಿ ವರ್ಮಾ – ಎವೆಲಿನ್ ಜೋನ್ಸ್ ಜೋಡಿ ದಿ ಹಂಡ್ರೆಡ್ ಲೀಗ್ನಲ್ಲಿ ಅತ್ಯುತ್ತಮ ಜೊತೆಯಾಟದ ದಾಖಲೆ ಬರೆದರು.
22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಫಾಲಿ ಅಂತಿಮವಾಗಿ 42 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳು ಮೂಡಿಬಂದಿತ್ತು. ಹಾಗೆಯೇ ಶಫಾಲಿ ಈ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 10 ವಿಕೆಟ್ಗಳ ಈ ಜಯದೊಂದಿಗೆ ಅಂಕ ಪಟ್ಟಿಯಲ್ಲಿ 8 ತಂಡಗಳ ಪೈಕಿ ವೆಲ್ಪ್ ಫೈರ್ 7ನೇ ಸ್ಥಾನದಲ್ಲಿದ್ದು, ಬರ್ನಿಂಗ್ಹ್ಯಾಮ್ ಫೀನಿಕ್ಸ್ 5 ನೇ ಸ್ಥಾನದಲ್ಲಿದೆ. ಈ ಲೀಗ್‌ನ ಫೈನಲ್ ಪಂದ್ಯ ಆಗಸ್ಟ್ 21 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: IPL 2021: ಐಪಿಎಲ್ಗಾಗಿ 2 ತಂಡ ಕಟ್ಟಿದ್ದ ನ್ಯೂಜಿಲೆಂಡ್..!
ಇದನ್ನೂ ಓದಿ: IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?
(shafali verma 22 balls fifty and opening partnership record in the hundred league)