CSK: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ನಡೆಯನ್ನು ಮೆಚ್ಚಲೇಬೇಕು

ನೀರಜ್ ಚೋಪ್ರಾಗೆ ಗೌರವಾರ್ಥವಾಗಿ ವಿಶೇಷ ಜರ್ಸಿ ಸಂಖ್ಯೆ 8758 ಅನ್ನು ಸಹ ಫ್ರಾಂಚೈಸಿ ನೀಡಲಿದೆ. ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಇದೇ ಸಂಖ್ಯೆಯ ಜೆರ್ಸಿಯನ್ನು ನೀಡಿ ಗೌರವಿಸಲು ಸಿಎಸ್​ಕೆ ನಿರ್ಧರಿಸಿದೆ.

CSK: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ನಡೆಯನ್ನು ಮೆಚ್ಚಲೇಬೇಕು
CSK
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 10, 2021 | 7:09 PM

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತನ್ನದೇಯಾದ ವಿಶೇಷ ಅಭಿಮಾನಿಗಳ ಬಳಗ ಇರುವುದು ಗೊತ್ತೇ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಿಎಸ್​ಕೆ ತಂಡ ಮಾಡಿರುವ ಸಮಾಜಮುಖಿ ಕಾರ್ಯದಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕೊರೋನಾ ಸಮಯದಲ್ಲಿ ಸಿಎಸ್​ಕೆ ಫ್ರಾಂಚೈಸಿಯು ತಮಿಳುನಾಡಿನಲ್ಲಿ ವೆಂಟಿಲೇಟರ್​ಗಳ ವ್ಯವಸ್ಥೆ ಮಾಡಿತ್ತು. ಅಷ್ಟೇ ಅಲ್ಲದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಒಂದು ಕೋಟಿ ರೂ. ಪುರಸ್ಕಾರ ಹಾಗೂ ಸಿಎಸ್​ಕೆ ವಿಶೇಷ ಜೆರ್ಸಿಯನ್ನು ನೀಡುವುದಾಗಿ ತಿಳಿಸಿ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ತಮಿಳುನಾಡಿನ ಮಾಜಿ ಕ್ರಿಕೆಟರುಗಳ ನೆರವಿಗೆ ನಿಲ್ಲುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಹೌದು, ತಮಿಳುನಾಡನ್ನು ಪ್ರತಿನಿಧಿಸಿದ ಹಿರಿಯ ಮಾಜಿ ಕ್ರಿಕೆಟರುಗಳಿಗೆ 7 ಲಕ್ಷ ರೂ. ನೀಡುವ ಮೂಲಕ ಗೌರವಿಸಿದೆ. ಮಂಗಳವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು ಹಿರಿಯ ಕ್ರಿಕೆಟಿಗರಿಗೆ ಧನ ಸಹಾಯ ನೀಡಿದೆ. 1950ರಿಂದ 1990ರವರೆಗೆ ಸೇವೆ ಸಲ್ಲಿಸಿದ ಕ್ರಿಕೆಟಿಗರನ್ನು ಗುರುತಿಸಿ 7 ಲಕ್ಷ ರೂ. ಗೌರವ ಧನ ನೀಡಿ ಸನ್ಮಾನಿಸಿದೆ. ಹಾಗೆಯೇ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 1973ರಿಂದ 2013ರವರೆಗೆ ಸೇವೆ ಸಲ್ಲಿಸಿರುವ ಮಾಜಿ ಪಿಚ್ ಕ್ಯುರೇಟರ್ ಕೆ ಪಾರ್ಥ ಸಾರಥಿ ಅವರಿಗೂ ಧನ ಸಹಾಯ ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯಿಂದ ಗೌರವ ಧನ ಪಡೆದ ಫಲಾನುಭವಿಗಳ ಪಟ್ಟಿ ಹೀಗಿದೆ: ಮಾಜಿ ವಿಕೆಟ್ ಕೀಪರ್ ಕೆಆರ್ ರಾಜಗೋಪಾಲ್, ಆಲ್ ರೌಂಡರ್ ನಜಮ್ ಹುಸೇನ್, ದಕ್ಷಿಣ ವಲಯ ಕ್ರಿಕೆಟಿಗ ಎಸ್ ವಿ ಎಸ್ ಮಣಿ ಮತ್ತು ಮಧ್ಯಮ ವೇಗಿ ಆರ್. ಪ್ರಭಾಕರ್, ಹಾಗೂ ಎಂ ಎ ಚಿದಂಬರಂ ಕ್ರೀಡಾಂಗಣದ ಮಾಜಿ ಕ್ಯುರೇಟರ್ ಕೆ ಪಾರ್ಥಸಾರಥಿ. ಹೀಗೆ ಕಷ್ಟದಲ್ಲಿರುವ ಹಿರಿಯ ಆಟಗಾರರನ್ನು ಗುರುತಿಸಿ ಗೌರವಿಸುವ ಮೂಲಕ ಸಿಎಸ್​ಕೆ ತಂಡವು ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: IPL 2021: ಐಪಿಎಲ್​ಗಾಗಿ 2 ತಂಡ ಕಟ್ಟಿದ್ದ ನ್ಯೂಜಿಲೆಂಡ್..!

ಇದನ್ನೂ ಓದಿ: IPL 2021: ಐಪಿಎಲ್​ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ