KL Rahul: ಆ ಎರಡು ವರ್ಷ…ತಂಡದಿಂದ ಹೊರಬಿದ್ದ ನೋವು ಹಂಚಿಕೊಂಡ ಕೆಎಲ್ ರಾಹುಲ್

India vs England 2nd Test: ನಾನು ಬಾಲ್ಯದಲ್ಲೇ ಟೆಸ್ಟ್ ಕ್ರಿಕೆಟಿಗನಾಗಲು ಬಯಸಿದ್ದೆ. ನನ್ನ ತಂದೆ ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ.

KL Rahul: ಆ ಎರಡು ವರ್ಷ...ತಂಡದಿಂದ ಹೊರಬಿದ್ದ ನೋವು ಹಂಚಿಕೊಂಡ ಕೆಎಲ್ ರಾಹುಲ್
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ತೋರಿದ ಅನುಚಿತ ವರ್ತನೆಗೆ ಟೀಮ್ ಇಂಡಿಯಾ ಆರಂಭಿಕ ಕೆಎಲ್ ರಾಹುಲ್​ಗೆ ಐಸಿಸಿ ದಂಡ ವಿಧಿಸಿದೆ. ಎರಡನೇ ಇನ್ನಿಂಗ್ಸ್‌ನ 34 ನೇ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ರಾಹುಲ್ ವಿಕೆಟ್​ಗಾಗಿ ಮನವಿ ಮಾಡಲಾಗಿತ್ತು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿದ್ದರಿಂದ ಇಂಗ್ಲೆಂಡ್ ಆಟಗಾರರು ಮನವಿ ಮಾಡಿದ್ದರು. ಆದರೆ ಫೀಲ್ಡ್​ ಅಂಪೈರ್ ನಾಟೌಟ್ ಎಂದು ನೀಡಿದ ತೀರ್ಪಿನ ವಿರುದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಡಿಆರ್​ಎಸ್ ಮೊರೆ ಹೋಗಿದ್ದರು. ಚೆಂಡು ಬ್ಯಾಟ್ ಸವರಿ ಕೀಪರ್ ಕೈ ಸೇರಿರುವುದು ಡಿಆರ್‌ಎಸ್ ಪರಿಶೀಲನೆ ವೇಳೆ ಸ್ಷಷ್ಟವಾಗಿತ್ತು. ಇದಾಗ್ಯೂ ಅಂಪೈರ್ ಔಟ್ ನೀಡುತ್ತಿದ್ದಂತೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆದಿದ್ದರು.
Follow us
ಝಾಹಿರ್ ಯೂಸುಫ್
|

Updated on: Aug 14, 2021 | 6:54 PM

ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಶತಕ ಸಿಡಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ಅಂಗಳವನ್ನು ಆಳಿದ್ದ ಅತಿರಥ ಮಹಾರಥರೇ ಈ ಮೈದಾನದಲ್ಲಿ ಸೆಂಚುರಿ ಬಾರಿಸುವಲ್ಲಿ ಎಡವಿದ್ದಾರೆ. ಆದರೆ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಇದೇ ಮೈದಾನದಲ್ಲಿ ಶತಕ ಸಿಡಿಸಿ ಇತಿಹಾಸ ಪುಟ ಸೇರಿದ್ದಾರೆ. ಅದು ಕೂಡ ಕಂಬ್ಯಾಕ್ ಮಾಡಿದ 2ನೇ ಪಂದ್ಯದಲ್ಲೇ ಎಂಬುದು ವಿಶೇಷ. ಹೌದು, ಕೆಎಲ್ ರಾಹುಲ್ ಟೀಮ್ ಇಂಡಿಯಾ ಕ್ರಿಕೆಟ್ ಕೆರಿಯರ್ ಆರಂಭವಾಗಿದ್ದು ಟೆಸ್ಟ್ ಕ್ರಿಕೆಟ್ ಮೂಲಕ. ಆದರೆ ಆರಂಭದಲ್ಲಿ ಅಬ್ಬರಿಸಿದ್ದ ಕನ್ನಡಿಗ ಆ ಬಳಿಕ ಯಾಕೋ ಮಂಕಾಗಿದ್ದರು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ರಾಹುಲ್ ಅವರನ್ನು 2019 ರಲ್ಲಿ ತಂಡದಿಂದ ಕೈ ಬಿಡಲಾಯಿತು. ಅದೇ ವೇಳೆ ಪೃಥ್ವಿ ಶಾ ಎಂಟ್ರಿ, ರೋಹಿತ್ ಶರ್ಮಾ ಕಂಬ್ಯಾಕ್, ಶುಭ್​ಮನ್​ ಗಿಲ್ ಆಗಮನದೊಂದಿಗೆ ರಾಹುಲ್ ಟೆಸ್ಟ್ ಕ್ರಿಕೆಟ್ ಕೆರಿಯರ್ ಖತಂ ಎಂದೇಳಿದವರೇ ಹೆಚ್ಚು. ಆದರೆ ಕ್ರಿಕೆಟ್ ದೇವರಿಗೂ ಸಾಧ್ಯವಾಗದ ಪಿಚ್​ನಲ್ಲಿ ಶತಕ ಸಿಡಿಸುವುದರೊಂದಿಗೆ ತಮ್ಮ ಪುನರಾಗಮನವನ್ನು ಕೆಎಲ್ ರಾಹುಲ್ ಘೋಷಿಸುತ್ತಾರೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ.

ಏಕೆಂದರೆ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿ ಇರಲಿ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಇರಲಿ, ಈ ವೇಳೆ ರಾಹುಲ್ ತಂಡದಲ್ಲಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಅಂದರೆ ಪ್ರಮುಖ ಸರಣಿ ಹಾಗೂ ಫೈನಲ್ ಪಂದ್ಯದಲ್ಲೂ ಬೆಂಚ್ ಕಾಯಬೇಕಾದ ಪರಿಸ್ಥಿತಿ ಕೆಎಲ್​ಆರ್​ಗೆ ಒದಗಿತ್ತು. ಆದರೆ ಇಂಗ್ಲೆಂಡ್ ವಿರುದ್ದ ಮಯಾಂಕ್ ಅರ್ಗವಾಲ್ ಗಾಯಗೊಂಡಿದ್ದರಿಂದ ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ಮೊದಲ ಟೆಸ್ಟ್​ನಲ್ಲಿ 214 ಎಸೆತಗಳನ್ನು ಎದುರಿಸಿ 84 ರನ್ ಬಾರಿಸುವ ಮೂಲಕ ಕನ್ನಡಿಗ ಮತ್ತೊಮ್ಮೆ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾರಿದ್ದರು. ಇದೀಗ ಲಾರ್ಡ್ಸ್​ನಲ್ಲಿ 129 ರನ್ ಬಾರಿಸುವ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಶತಕ ಸಿಡಿಸಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಅದ್ಭುತ ಕಂಬ್ಯಾಕ್ ಹಿಂದಿನ ನೋವು ಹಾಗೂ ಹತಾಶೆಯ ಬಗ್ಗೆ ಖುದ್ದು ಕೆಎಲ್ ರಾಹುಲ್ ಮನಬಿಚ್ಚಿ ಮಾತನಾಡಿದ್ದಾರೆ. ತಾವು ತಂಡದಿಂದ ಹೊರಬಿದ್ದ ಬಳಿಕ ಉಂಟಾದ ಯಾತನೆಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಎರಡು ವರ್ಷಗಳ ಹಿಂದೆ ನನ್ನನ್ನು ಟೆಸ್ಟ್ ತಂಡದಿಂದ ಕೈಬಿಟ್ಟಾಗ ತುಂಬಾ ನೋವಾಗಿತ್ತು. ತಂಡದಲ್ಲಿ ಸ್ಥಾನ ನಿರೀಕ್ಷಿಸಿದವರನ್ನು ಕೈ ಬಿಡುವುದು ಒಂಥರಾ ನಿರಾಶಾದಾಯಕ. ಅದಕ್ಕೆ ನಾನೇ ಕಾರಣ. ನಾನು ಕೂಡ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಬರೋಬ್ಬರಿ 2 ವರ್ಷಗಳು ಉರುಳಿತು. ಆದರೆ ಚಾನ್ಸ್​ ಸಿಕ್ಕಿರಲಿಲ್ಲ. ಇದೀಗ ಅವಕಾಶ ಸಿಕ್ಕಾಗ, ಅದು ನನಗಾಗಿಯೇ ಇರುವುದು ಎಂದು ಭಾವಿಸಿದೆ. ಮತ್ತೆ ನನ್ನ ಬ್ಯಾಟಿಂಗ್ ಅನ್ನು ಆನಂದಿಸಿದೆ. ಲಾರ್ಡ್ಸ್‌ನಲ್ಲಿ ಶತಕ ಮೂಡಿ ಬಂದಿರುವುದರಿಂದ ಅದು ಮತ್ತಷ್ಟು ವಿಶೇಷವಾಯಿತು. ನಾನು ಗತಕಾಲದ ಬಗ್ಗೆ ಯೋಚಿಸುವುದಿಲ್ಲ. ನನಗೆ ತುಂಬಾ ನೋವಾಗಿತ್ತು. ಆ ನೋವು ನನ್ನನ್ನು ಮತ್ತಷ್ಟು ಪರಿಶ್ರಮ ಪಡಲು ಪ್ರೇರೇಪಿಸಿತು. ಈಗ ಅವಕಾಶ ಸಿಕ್ಕಿದೆ. ಇದನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಮೊದಲು ನಾನು ಕೊನೆಯ ಟೆಸ್ಟ್ ಅನ್ನು ವೆಸ್ಟ್ ಇಂಡೀಸ್ ವಿರುದ್ಧ 2019 ರ ಆಗಸ್ಟ್‌ನಲ್ಲಿದ್ದೆ ಆಡಿದ್ದೆ. ತಂಡದಿಂದ ಕೈಬಿಡುವ ಮೊದಲು, ನಾನು ದಕ್ಷಿಣ ಆಫ್ರಿಕಾದಲ್ಲಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿಭಿನ್ನ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಿದ್ದೆ. ಈ ದೇಶಗಳ ಪಿಚ್​ಗಳು ಕೂಡ ನನಗೆ ಮೊದಲ ಅನುಭವವಾಗಿತ್ತು. ಹೀಗಾಗಿಯೇ ನನ್ನ ಮನಸ್ಸು ಕೂಡ ಸ್ಥಿರವಾಗಿರಲಿಲ್ಲ. ನಾನು ಪ್ರತಿ ಚೆಂಡನ್ನು ಎದುರಿಸುವಾಗ ಎರಡು ಹೊಡೆತಗಳ ಬಗ್ಗೆ ಯೋಚಿಸುತ್ತಿದ್ದೆ. ನಾನು ರನ್, ರನ್​ಗಳಿಸುವುದು ಮತ್ತು ರನ್​ ಕಲೆಹಾಕುವುದರ ಬಗ್ಗೆ ಯೋಚಿಸಿದೆ. ಆಮೇಲೆ ಅರ್ಥವಾಯ್ತು ನನ್ನ ಬ್ಯಾಟಿಂಗ್ ಶೈಲಿ ಬದಲಿಸಲೇಬೇಕೆಂದು.

ಅದರಂತೆ ಈ ಬಾರಿ ನಾನು ಚೆಂಡನ್ನು ಆಡುತ್ತೇನೆ ಎಂಬ ವಿಶ್ವಾಸ ಬೆಳೆಸಿಕೊಂಡೆ. ಆದರೆ ರನ್​ಗಳಿಸಲೇ ಬೇಕು ಎಂಬ ಮನಸ್ಥಿತಿಯನ್ನು ಬದಲಿಸಿದೆ. ಇದು ರಾತ್ರೋರಾತ್ರಿ ಸಂಭವಿಸಿಲ್ಲ. ತಂಡದಿಂದ ಹೊರಬಿದ್ದ ಆ ಎರಡು ವರ್ಷಗಳಲ್ಲಿ, ನಾನು ಹಲವು ಬ್ಯಾಟ್ಸ್‌ಮನ್‌ಗಳ ಆಟ ಮತ್ತು ಅಭ್ಯಾಸವನ್ನು ನೋಡುತ್ತಿದ್ದೆ. ಬ್ಯಾಟ್ಸ್‌ಮನ್ ಹೇಗೆ ರನ್ ಗಳಿಸುತ್ತಾರೆ ಮತ್ತು ಹೇಗೆ ಇನ್ನಿಂಗ್ಸ್ ಕಟ್ಟುತ್ತಾರೆ ಎಂಬುದನ್ನು ಅಭ್ಯಸಿಸಿದೆ. ಇದು ಇಂದು ಫಲ ನೀಡಿದೆ. ಈ ಬಗ್ಗೆ ನನಗೂ ಸಂತೋಷವಿದೆ ಎಂದು ರಾಹುಲ್ ತಿಳಿಸಿದರು.

ಇನ್ನು ಲಾರ್ಡ್ಸ್‌ನಲ್ಲಿನ ಶತಕದ ಬಗ್ಗೆ ಮಾತನಾಡಿದ ರಾಹುಲ್ , “ಇದು ತುಂಬಾ ವಿಶೇಷವಾಗಿದೆ. ನಾನು ಬಾಲ್ಯದಲ್ಲೇ ಟೆಸ್ಟ್ ಕ್ರಿಕೆಟಿಗನಾಗಲು ಬಯಸಿದ್ದೆ. ನನ್ನ ತಂದೆ ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ. ನನ್ನ ತರಬೇತುದಾರರು ಕೂಡ ನಾನು ಯಾವಾಗಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡಬೇಕೆಂದು ಬಯಸಿದ್ದರು. ಇದೀಗ ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲೇ ನನ್ನ ಬ್ಯಾಟ್​​ನಿಂದ ಶತಕ ಮೂಡಿಬಂದಿದೆ. ನಿಜವಾಗಲೂ ತುಂಬಾ ಸಂತೋಷವಾಗುತ್ತಿದೆ. ನಾನು ಪಟ್ಟ ಪರಿಶ್ರಮಕ್ಕೆಲ್ಲಾ ಫಲ ಸಿಗುತ್ತಿದೆ ಎಂದು ಕೆಎಲ್ ಸಂತಸ ಹಂಚಿಕೊಂಡರು.

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

(Hurt KL Rahul used axing from Test team as “fuel” to make strong comeback)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್