India vs England: ರೋಚಕ ಘಟ್ಟದ ಲಾರ್ಡ್ಸ್ ಟೆಸ್ಟ್​ನಲ್ಲಿ ಟ್ವಿಸ್ಟ್: ಭಾರತಕ್ಕಿದೆ ಗೆಲ್ಲುವ ಅವಕಾಶ: ಹೇಗೆ ಗೊತ್ತೇ?

| Updated By: Vinay Bhat

Updated on: Aug 16, 2021 | 8:15 AM

IND vs ENG: ಸದ್ಯ ರಿಷಭ್ ಪಂತ್ ಮೇಲೆ ಭಾರತ ಅವಲಂಬಿತವಾಗಿದೆ. ಅಂತಿಮ ಐದನೇ ದಿನ ಪಂತ್ ತಮ್ಮ ಆಕ್ರಮಣಕಾರಿ ಆಟ ತೋರಿಸಬೇಕಿದೆ. ಡ್ರಾ ಮಾಡುವ ಯೋಜನೆಯಲ್ಲಿದ್ದರೆ ಮಧ್ಯಾಹ್ನದ ವರೆಗೂ ಕ್ರೀಸ್​ನಲ್ಲಿ ನಿಲ್ಲಬೇಕಿದೆ.

India vs England: ರೋಚಕ ಘಟ್ಟದ ಲಾರ್ಡ್ಸ್ ಟೆಸ್ಟ್​ನಲ್ಲಿ ಟ್ವಿಸ್ಟ್: ಭಾರತಕ್ಕಿದೆ ಗೆಲ್ಲುವ ಅವಕಾಶ: ಹೇಗೆ ಗೊತ್ತೇ?
ಭಾರತ ತಂಡ (ಸಾಂದರ್ಭಿಕಚಿತ್ರ)
Follow us on

ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ಕ್ರೀಡಾಂಗಣದಲ್ಲಿ ನಡಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಟೆಸ್ಟ್​ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. ಇಂದು ಅಂತಿಮ ದಿನದಾಟದ ಮೇಲೆ ಉಭಯ ತಂಡಗಳ ಗೆಲುವಿನ ಲೆಕ್ಕಚಾರ ನಿಂತಿದೆ. 6 ವಿಕೆಟ್ ಕಳೆದುಕೊಂಡು 154 ರನ್​ಗಳ ಮುನ್ನಡೆ ಸಾಧಿಸಿರುವ ಭಾರತಕ್ಕೆ ಗೆಲುವು ಅಸಾಧ್ಯ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಕನಿಷ್ಠ ಡ್ರಾ ಮಾಡುವತ್ತ ಕೊಹ್ಲಿ (Virat Kohli) ಪಡೆ ಹೋರಾಡಬೇಕಿದೆ. ಹೀಗಿದ್ದರೂ ಟೀಮ್ ಇಂಡಿಯಾ (Team India) ಈರೀತಿ ಮಾಡಿದರೆ ಗೆಲುವು ಸಾಧಿಸಬಹುದು ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 181 ರನ್ ಗಳಿಸಿದ್ದೇ ಹೆಚ್ಚು ಎಂದು ಹೇಳಬಹುದು. ಯಾಕೆಂದರೆ ಫಾರ್ಮ್​ನಲ್ಲಿದ್ದ ಇಬ್ಬರು ಓಪನರ್​ಗಳು ರೋಹಿತ್ ಶರ್ಮಾ (21) ಹಾಗೂ ಕೆ. ಎಲ್ ರಾಹುಲ್ (5) ಆರಂಭದಲ್ಲೇ ಪೆವಿಲಿಯನ್ ಸೇರಿಕೊಂಡರು. ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಕಳಪೆ ಆಟವನ್ನು ಮುಂದುವರೆಸಿ 20 ರನ್​ಗೆ ಔಟ್ ಆದರು. ಹೀಗೆ 55 ರನ್​ಗೆ ಟಾಪ್ 3 ಬ್ಯಾಟ್ಸ್​ಮನ್​ಗಳನ್ನು ಭಾರತ ಕಳೆದುಕೊಂಡಿತು.

 

ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ಇವರ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ, ಟೀಕಾಕಾರರಿಗೆ ಸರಿಯಾಗಿ ಚಾಟಿ ಬೀಸಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಎಚ್ಚರಿಕೆಯಿಂದ ನೂರು ರನ್​ಗಳ ಜೊತೆಯಾಟ ಆಡಿದ್ದಲ್ಲದೆ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಪೂಜಾರ 45 ಹಾಗೂ ರಹಾನೆ 61 ರನ್ ಗಳಿಸಿದರು. ಆದರೆ, ಇವರಿಬ್ಬರ ನಿರ್ಗಮನದ ಜೊತೆ ಜಡೇಜಾ ಕೂಡ ಔಟ್ ಆಗಿದ್ದು ತಂಡ ಮತ್ತೆ ಕುಸಿಯಿತು.

ಸದ್ಯ ರಿಷಭ್ ಪಂತ್ ಮೇಲೆ ಭಾರತ ಅವಲಂಬಿತವಾಗಿದೆ. ಅಂತಿಮ ಐದನೇ ದಿನ ಪಂತ್ ತಮ್ಮ ಆಕ್ರಮಣಕಾರಿ ಆಟ ತೋರಿಸಬೇಕಿದೆ. ಡ್ರಾ ಮಾಡುವ ಯೋಜನೆಯಲ್ಲಿದ್ದರೆ ಮಧ್ಯಾಹ್ನದ ವರೆಗೂ ಕ್ರೀಸ್​ನಲ್ಲಿ ನಿಲ್ಲಬೇಕಿದೆ. ಇದರ ನಡುವೆ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ 225 ರನ್​ಗಳ ಟಾರ್ಗೆಟ್ ನೀಡಿದರೆ ಗೆಲುವು ಸಾಧಿಸುವ ಚಾನ್ಸ್ ಇದೆ ಎಂದು ಖಚಿತವಾಗಿ ಹೇಳಿದ್ದಾರೆ. ಅಂದರೆ ಭಾರತ ಇನ್ನೂ 70 ರನ್​ಗಳ ಮುನ್ನಡೆಯನ್ನಾದರೂ ಸಾಧಿಸಬೇಕಿದೆ. ಹೀಗಾಗಿ ಪಂತ್ ಆಟದ ಮೇಲೆ ಭಾರತದ ಗೆಲುವಿನ ನಿರ್ಧಾರ ನಿಂತಿದೆ.

ಒಟ್ಟಾರೆ 4ನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಮೊದಲ ಇನ್ನಿಂಗ್ಸ್ 364/10 (126.1 ಓವರ್)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 391/10 (128 ಓವರ್)

ಭಾರತ ಎರಡನೇ ಇನ್ನಿಂಗ್ಸ್ 181/6 (82 ಓವರ್, ನಾಲ್ಕನೇ ದಿನದಾಟದ ಅಂತ್ಯಕ್ಕೆ)

India vs England: ಬ್ಯಾಟ್ ಮಾಡುತ್ತಿದ್ದ ಪಂತ್​ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, 29 ಎಸೆತಗಳಲ್ಲಿ 93 ರನ್! ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುನಾಮಿ ಎಬ್ಬಿಸಿದ ಕ್ರಿಕೆಟಿಗ ಯಾರು ಗೊತ್ತಾ?

(India vs England 2nd Test India lead by 154 runs Virat Kohli Team chances to win in the Lords Test)