India vs England: ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ಗೆ ಶಾಕ್ ಮೇಲೆ ಶಾಕ್: ಕೊಹ್ಲಿ ಪಡೆ ಫುಲ್ ಖುಷ್

| Updated By: Vinay Bhat

Updated on: Aug 20, 2021 | 7:58 AM

Ind vs Eng 3rd Test: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ರಿಂದ ಲೀಡ್ಸ್​ನಲ್ಲಿ ಪ್ರಾರಂಭವಾಗಲಿದೆ. ಆದರೆ, ಈ ಹೊತ್ತಿಗೆ ವುಡ್ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ.

India vs England: ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ಗೆ ಶಾಕ್ ಮೇಲೆ ಶಾಕ್: ಕೊಹ್ಲಿ ಪಡೆ ಫುಲ್ ಖುಷ್
India vs England
Follow us on

ಇತ್ತೀಚೆಗಷ್ಟೆ ಕ್ರಿಕೆಟ್ ಕಾಶಿ ಲಾರ್ಡ್ಸ್ (lords) ಮೈದಾನದಲ್ಲಿ ನಡೆದ ಭಾರತ (India) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಇಂಗ್ಲೆಂಡ್ (England) ಇನ್ನೂ ಆಘಾತದಿಂದ ಹೊರಬಂದಿಲ್ಲ. ಹೀಗಿರುವಾಗಲೇ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಆಂಗ್ಲರ ಸ್ಟಾರ್ ಬೌಲರ್ ಮಾರ್ಕ್​ ವುಡ್ (Mark Wood) ಮೂರನೇ ಟೆಸ್ಟ್​ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಎರಡನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಾಟದ ವೇಳೆ ವುಡ್ ಭುಜದ ನೋವಿಗೆ ತುತ್ತಾಗಿದ್ದರು. ಹೀಗಿದ್ದರೂ ಅಂತಿಮ ದಿನ ಕಣಕ್ಕಿಳಿದಿದ್ದರು.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25 ರಿಂದ ಲೀಡ್ಸ್​ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಇದರಲ್ಲಿ ಮಾರ್ಕ್ ವುಡ್ ಹೆಸರು ಕೂಡ ಇದೆ. ಆದರೆ, ಈ ಹೊತ್ತಿಗೆ ವುಡ್ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ. ಇದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತವಾಗಿದ್ದು, ಮತ್ತೊಬ್ಬ ಪ್ರಮುಖ ಆಟಗಾರನನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಈಗಾಗಲೇ ಇಂಗ್ಲೆಂಡ್ ತಂಡದಲ್ಲಿನ ಆಟಗಾರರು ಸತತ ಇಂಜುರಿಯಿಂದ ಬಳಲುತ್ತಿದ್ದಾರೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಮಾನಸಿಕ ಸಡೃಢತೆಗಾಗಿ ಬೆನ್ ಸ್ಟೋಕ್ಸ್ ಹಿಂದೆ ಸರಿದಿದ್ದರೆ, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಬಿದ್ದರು. ಇದೀಗ ಗಾಯಾಳುಗಳ ಪಟ್ಟಿಗೆ ಮಾರ್ಕ್ ವುಡ್ ಸೇರ್ಪಡೆಯಾಗಿದ್ದಾರೆ.

ಇನ್ನೂ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಚ್ಚರಿಯ ತಂಡವನ್ನು ಪ್ರಕಟಮಾಡಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ಗೆ ಡಾವಿಡ್ ಮೆಲನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಎಡಗೈ ಆಟಗಾರ ಡಾವಿಡ್‌ ಮಲಾನ್‌, ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ- ಇಂಗ್ಲೆಂಡ್ 3ನೇ ಟೆಸ್ಟ್ ಪಂದ್ಯ ಲೀಡ್ಸ್‌ನ ಹೆಡ್ಡಿಂಗ್‌ಗ್ಲೇ ಮೈದಾನದಲ್ಲಿ ಆಗಸ್ಟ್ 25 ರಿಂದ ಆಗಸ್ಟ್ 29 ವರೆಗೆ ನಡೆಯಲಿದೆ. ಮೊದಲ ಪಂದ್ಯ ಡ್ರಾ ಮೂಲಕ ಅಂತ್ಯಕಂಡಿತ್ತು. ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 151 ರಿಂದ ವಶಪಡಿಸಿಕೊಂಡಿತ್ತು. ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ.

ಮೂರನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ:

ಜೋ ರೂಟ್‌ (ನಾಯಕ), ಮೊಯೀನ್‌ ಅಲಿ, ಜೇಮ್ಸ್‌ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್‌ (ವಿಕೆಟ್ ಕೀಪರ್), ಸ್ಯಾಮ್‌ ಕರ್ರನ್, ಹಸೀಬ್‌ ಹಮೀದ್‌, ಡ್ಯಾನ್‌ ಲಾರೆನ್ಸ್‌, ಸಕಿಬ್‌ ಮಹ್ಮೂದ್‌, ಡಾವಿಡ್‌ ಮಲಾನ್, ಕ್ರೇಗ್‌ ಓವರ್‌ಟರ್ನ್, ಓಲ್ಲೀ ಪೋಪ್, ಓಲ್ಲೀ ರಾಬಿನ್ಸನ್‌ ಮತ್ತು ಮಾರ್ಕ್‌ ವುಡ್‌.

ಅಫ್ಘಾನಿಸ್ತಾನದಲ್ಲಿ ವಿಮಾನದಿಂದ ಬಿದ್ದು ಸತ್ತಿರುವುದು ಖ್ಯಾತ ಫುಟ್ಬಾಲ್ ಆಟಗಾರ

ಮೊಹಮ್ಮದ್ ಸಿರಾಜ್​ಗೆ ಇಂಗ್ಲೆಂಡ್ ಮಾಜಿ ಆರಂಭ ಆಟಗಾರ ಜೆಫ್ರಿ ಬಾಯ್ಕಾಟ್ ರೂಪದಲ್ಲಿ ಮತ್ತೊಬ್ಬ ಅಭಿಮಾನಿ ಹುಟ್ಟಿಕೊಂಡಿದ್ದಾನೆ!

(India vs England 3rd Test English pacer Mark Wood a major doubt for third Test against India in leeds)