Mohammed Shami: ಅಭಿಮಾನಿ ತಂದ ಕೇಕ್ ಕತ್ತರಿಸಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ ಮೊಹಮ್ಮದ್ ಶಮಿ

| Updated By: Vinay Bhat

Updated on: Sep 04, 2021 | 10:31 AM

India vs England: ಮೊಹಮ್ಮದ್ ಶಮಿ ಹುಟ್ಟುಹಬ್ಬವಾದ ಶುಕ್ರವಾರ (ಸೆಪ್ಟೆಂಬರ್ 3) ಮೂರನೇ ದಿನದಾಟದ ವೇಳೆ ಅಭಿಮಾನಿಯೊಬ್ಬರು ಸ್ಟೇಡಿಯಂಗೇ ಕೇಕ್ ತಂದಿದ್ದರು.

Mohammed Shami: ಅಭಿಮಾನಿ ತಂದ ಕೇಕ್ ಕತ್ತರಿಸಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ ಮೊಹಮ್ಮದ್ ಶಮಿ
Mohammed Shami
Follow us on

ನಿನ್ನೆ ಶುಕ್ರವಾರ ಸೆಪ್ಟೆಂಬರ್ 3 ರಂದು ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಹುಟ್ಟುಹಬ್ಬ. ಶಮಿ ಸದ್ಯ ಭಾರತ ಜೊತೆಗೆ ಇಂಗ್ಲೆಂಡ್ (England) ಪ್ರವಾಸದಲ್ಲಿದ್ದು, ನಾಲ್ಕನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಿರುವಾಗ ಅತ್ತ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ ಇತ್ತ ಶಮಿ ಅಭಿಮಾನಿಗಳು ತಂದ ಕೇಕ್ ಅನ್ನು ಕಟ್ ಮಾಡಿ ವಿಶೇಷವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ.

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಮೊಹಮ್ಮದ್ ಶಮಿ ಹುಟ್ಟುಹಬ್ಬವಾದ ಶುಕ್ರವಾರ (ಸೆಪ್ಟೆಂಬರ್ 3) ಮೂರನೇ ದಿನದಾಟದ ವೇಳೆ ಅಭಿಮಾನಿಯೊಬ್ಬರು ಸ್ಟೇಡಿಯಂಗೇ ಕೇಕ್ ತಂದಿದ್ದರು. ಶಮಿ ಅವರಲ್ಲಿ ಕೇಕ್ ಕಟ್ ಮಾಡುವಂತೆ ವಿನಂತಿಸಿಕೊಂಡರು ಕೂಡ.

ಪ್ಲೇಯಿಂಗ್‌ XIನಲ್ಲಿ ಇರದ ಶಮಿ ಬಿಬ್‌ನಲ್ಲಿದ್ದರು. ಅಭಿಮಾನಿ ವಿನಂತಿಗೆ ಸ್ಪಂದಿಸಿದ ಶಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರಿದ್ದ ಬದಿಗೆ ಬಂದು ಅಭಿಮಾನಿ ತಂದಿದ್ದ ಕೇಕ್ ಕಟ್ ಮಾಡುವ ಮೂಲಕ ಆತನ ಖುಷಿಯಲ್ಲಿ ಭಾಗಿಯಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

 

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನಲದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಪಂದ್ಯ ಆರಂಭವಾದ ಮೊದಲ ದಿನ ಆಂಗ್ಲರು ಮೇಲುಗೈ ಸಾಧಿಸಿದರೆ, ಎರಡನೇ ದಿನದ ಅಂತ್ಯದ ಹೊತ್ತಿಗೆ ಭಾರತ ಕಮ್​ಬ್ಯಾಕ್ ಮಾಡಿದ್ದು, ಅಪಾಯಕಾರಿಯಾಗಿ ಗೋಚರಿಸಿದೆ. ಹೀಗೆ ಉಭಯ ತಂಡಗಳು ಸಮಬಲದ ಹೋರಾಟ ನಡೆಸುತ್ತಿದೆ.

ಇಂಗ್ಲೆಂಡ್ 290 ರನ್‌ಗಳಿಗೆ ಆಲ್‌ಔಟ್‌ ಆದರೂ 99 ರನ್‌ಗಳ ಮುನ್ನಡೆ ದಕ್ಕಿಸಿಕೊಂಡಿದೆ. ಬಳಿಕ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದೆ. ಓಪನರ್​ಗಳಾದ ರೋಹಿತ್ ಶರ್ಮಾ (20*) ಮತ್ತು ಕೆ ಎಲ್ ರಾಹುಲ್ (22*) ಅಜೇಯರಾಗಿ ಉಳಿದಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 43 ರನ್ ಗಳಿಸಿದೆ. 56 ರನ್​ಗಳ ಹಿನ್ನಡೆಯಲ್ಲಿದೆ. ಇಂದು ಮೂರನೇ ದಿನ ಉಭಯ ತಂಡಗಳಿಗೆ ಮುಖ್ಯವಾಗಿದೆ. ಬ್ಯಾಟಿಂಗ್​ನಲ್ಲಿ ಎಡವುತ್ತಿರುವ ಭಾರತಕ್ಕೆ ಕಮ್​ಬ್ಯಾಕ್ ಮಾಡಲು ಇದು ಸೂಕ್ತ ಸಮಯವಾಗಿದೆ.

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಚಿನ್ನ: ಶೂಟಿಂಗ್​ನಲ್ಲಿ ಮನೀಶ್- ಸಿಂಗ್​ರಾಜ್​ಗೆ ಪದಕ

Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್

(India vs England Fans bring cake to celebrate Mohammed Shamis birthday Watch Video)