India vs England: ಭಾರತ-ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ, ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jun 30, 2022 | 5:18 PM

India vs England Full Schedule: ಈ ಏಕೈಕ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಇದರ ನಂತರ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

India vs England: ಭಾರತ-ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ, ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ
Team India
Follow us on

India vs England 5th Test Match: ಭಾರತ-ಇಂಗ್ಲೆಂಡ್ ನಡುವಣ ಸರಣಿಯು ಶುಕ್ರವಾರದಿಂದ (ಜುಲೈ 1) ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಮೊದಲು ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿರುವುದು ವಿಶೇಷ. ಆದರೆ ಈ ಪಂದ್ಯವು ಪ್ರಸ್ತುತ ಸರಣಿಯ ಭಾಗವಲ್ಲ. ಅಂದರೆ ಭಾರತ ತಂಡವು ಈ ಸಲ ಸೀಮಿತ ಓವರ್​ಗಳ ಸರಣಿ ಆಡಲು ಇಂಗ್ಲೆಂಡ್​ಗೆ ತೆರಳಿದೆ. ಆದರೆ ಕಳೆದ ವರ್ಷ ನಡೆದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಕೊರೋನಾ ಭೀತಿ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಈ ಪಂದ್ಯವನ್ನು ಜುಲೈ 1 ರಿಂದ 5 ರವರೆಗೆ ಆಡಲಾಗುತ್ತದೆ. ವಿಶೇಷ ಎಂದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ದ ಡ್ರಾ ಸಾಧಿಸಿದರೂ ಸರಣಿ ಭಾರತ ತಂಡದ ಪಾಲಾಗಲಿದೆ. ಮತ್ತೊಂದೆಡೆ ಸರಣಿಯನ್ನು ಸಮಬಲದೊಂದಿಗೆ ಅಂತ್ಯಗೊಳಿಸಲು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇನ್ನು ಈ ಏಕೈಕ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಇದರ ನಂತರ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ ಹೀಗಿದೆ:

  • ಜುಲೈ 1 – 5: ಏಕೈಕ ಟೆಸ್ಟ್ ಪಂದ್ಯ (ಎಡ್ಜ್‌ಬಾಸ್ಟನ್)

ಟಿ20 ಸರಣಿಯ ವೇಳಾಪಟ್ಟಿ:

  1. ಜುಲೈ 7: ಮೊದಲ ಟಿ20 ಪಂದ್ಯ (ಏಜಿಯಾಸ್ ಬೌಲ್)
  2. ಜುಲೈ 9: 2ನೇ ಟಿ20 ಪಂದ್ಯ (ಎಡ್ಜ್‌ಬಾಸ್ಟನ್)
  3. ಜುಲೈ 10: 3ನೇ ಟಿ20 ಪಂದ್ಯ (ಟ್ರೆಂಟ್ ಬ್ರಿಡ್ಜ್)

ಏಕದಿನ ಸರಣಿ ವೇಳಾಪಟ್ಟಿ:

  1. ಜುಲೈ 12- ಮೊದಲ ಏಕದಿನ ಪಂದ್ಯ (ಕಿಯಾ ಓವಲ್)
  2. ಜುಲೈ 14- 2ನೇ ಏಕದಿನ ಪಂದ್ಯ (ಲಾರ್ಡ್ಸ್)
  3. ಜುಲೈ 17- 3ನೇ ಏಕದಿನ ಪಂದ್ಯ (ಮ್ಯಾಂಚೆಸ್ಟರ್)

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಈ ಸರಣಿಯ ಎಲ್ಲಾ ಪಂದ್ಯಗಳು ಸೋನಿ ನೆಟ್​ವರ್ಕ್​ ಚಾನೆಲ್​ಗಳಲ್ಲಿ ಪ್ರಸಾರವಾಗಲಿದೆ. ಅಂದರೆ ಸೋನಿ ಟೆನ್​ ಹಾಗೂ ಸೋನಿ ಸಿಕ್ಸ್​ ಚಾನೆಲ್​ನಲ್ಲಿ ಈ ಪಂದ್ಯಗಳನ್ನು ವೀಕ್ಷಿಸಬಹುದು. ಇನ್ನು ಲೈವ್ ಸ್ಟ್ರೀಮಿಂಗ್​ ಅನ್ನು​ ಸೋನಿ ಲೈವ್ ಆ್ಯಪ್​ನಲ್ಲಿ ನೋಡಬಹುದು.

ಭಾರತ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಈ ಸರಣಿಗಾಗಿ ಭಾರತ ಟೆಸ್ಟ್ ತಂಡವನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇನ್ನು ಜುಲೈ ಮೊದಲ ವಾರದಲ್ಲಿ ಭಾರತ ಟಿ20 ಹಾಗೂ ಏಕದಿನ ತಂಡಗಳನ್ನು ಘೋಷಿಸಲಾಗುತ್ತದೆ.

  • ಭಾರತೀಯ ಟೆಸ್ಟ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಪ್ರಸಿಧ್ದ್ ಕೃಷ್ಣ.

ಇಂಗ್ಲೆಂಡ್​ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬೆನ್​ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಹಾಗೆಯೇ ಟಿ20 ಹಾಗೂ ಏಕದಿನ ತಂಡವನ್ನು ಇನ್ನಷ್ಟೇ ಘೋಷಿಸಬೇಕಿದೆ. ವಿಶೇಷ ಎಂದರೆ ಇಂಗ್ಲೆಂಡ್ ಸೀಮಿತ ಓವರ್​ಗಳ ತಂಡದ ನಾಯಕ ಇಯಾನ್ ಮೋರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಭಾರತದ ವಿರುದ್ದ ಇಂಗ್ಲೆಂಡ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ.

  • ಇಂಗ್ಲೆಂಡ್ ತಂಡ ಹೀಗಿದೆ: ಬೆನ್‌ ಸ್ಟೋಕ್ಸ್‌ (ನಾಯಕ), ಜೋ ರೂಟ್‌, ಜೇಮ್ಸ್‌ ಆಂಡರ್ಸನ್‌, ಜಾನಿ ಬೈರ್‌ಸ್ಟೋವ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಸ್ಟುವರ್ಟ್‌ ಬ್ರಾಡ್‌, ಹ್ಯಾರಿ ಬ್ರೂಕ್ಸ್‌, ಜಾಕ್‌ ಕ್ರಾವ್ಲೀ, ಬೆನ್‌ ಫೋಕ್ಸ್, ಜಾಕ್‌ ಲೀಚ್‌, ಅಲೆಕ್ಸ್‌ ಲೀಸ್‌, ಕ್ರೇಗ್‌ ಓವರ್ಟರ್ನ್, ಜೇಮಿ ಓವರ್ಟರ್ನ್, ಮ್ಯಾಥ್ಯೂ ಪಾಟ್ಸ್‌ ಮತ್ತು ಓಲ್ಲೀ ಪೋಪ್.

Published On - 5:17 pm, Thu, 30 June 22