India vs England: ಮೊದಲನೇ ದಿನ ಆಂಗ್ಲರ ಮೇಲುಗೈ: ಎರಡನೇ ದಿನಕ್ಕೆ ಟೀಮ್ ಇಂಡಿಯಾ ಮಾಡಬೇಕಿದೆ ಮಾಸ್ಟರ್ ಪ್ಲಾನ್

5ನೇ ಸ್ಥಾನದಲ್ಲಿ ಕಣಕ್ಕಿಳಿದ ಜಡೇಜಾ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಲಿಲ್ಲ. 34 ಎಸೆತಗಳಲ್ಲಿ 10 ರನ್ ಬಾರಿಸಿ ನಿರ್ಗಮಿಸಿದರು. ಕೊಹ್ಲಿಯ ಹೋರಾಟ ಅರ್ಧಶತಕಕ್ಕೆ ಅಂತ್ಯವಾಯಿತು.

India vs England: ಮೊದಲನೇ ದಿನ ಆಂಗ್ಲರ ಮೇಲುಗೈ: ಎರಡನೇ ದಿನಕ್ಕೆ ಟೀಮ್ ಇಂಡಿಯಾ ಮಾಡಬೇಕಿದೆ ಮಾಸ್ಟರ್ ಪ್ಲಾನ್
India vs England
Follow us
TV9 Web
| Updated By: Vinay Bhat

Updated on:Sep 03, 2021 | 8:24 AM

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಿರುವ ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಮೊದಲ ದಿನವೇ 191 ರನ್​ಗೆ ಸರ್ವಪತನ ಕಂಡಿರುವ ಕೊಹ್ಲಿ (Virat Kohli) ಬಳಗ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕಿದೆ. ಇತ್ತ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಭೋಜನ ವಿರಾಮಕ್ಕೂ ಮುನ್ನವೇ ತನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ (11) ಮತ್ತು ಕೆ. ಎಲ್ ರಾಹುಲ್ (17) ಉತ್ತಮ ಆರಂಭಿಸುವಲ್ಲಿ ಎಡವಿದರು. ಚೇತೇಶ್ವರ್ ಪೂಜಾರ ಮತ್ತದೆ ತಪ್ಪೆಸಗಿ 4 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಕೊಂಚ ಆಸರೆಯಾದರು.

ಆದರೆ, 5ನೇ ಸ್ಥಾನದಲ್ಲಿ ಕಣಕ್ಕಿಳಿದ ಜಡೇಜಾ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಲಿಲ್ಲ. 34 ಎಸೆತಗಳಲ್ಲಿ 10 ರನ್ ಬಾರಿಸಿ ನಿರ್ಗಮಿಸಿದರು. ಕೊಹ್ಲಿಯ ಹೋರಾಟ ಅರ್ಧಶತಕಕ್ಕೆ ಅಂತ್ಯವಾಯಿತು. 96 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 50 ರನ್​ಗೆ ಔಟ್ ಆದರು. ಉಪ ನಾಯಕ ಅಜಿಂಕ್ಯಾ ರಹಾನೆ (14) ಹಾಗೂ ರಿಷಭ್ ಪಂತ್ (9) ಈ ಬಾರಿಕೂಡ ತಂಡಕ್ಕೆ ಆಸೆಯಾಗಲಿಲ್ಲ.

ಆದರೆ, ಶಾರ್ದೂಲ್ ಠಾಕೂರ್ ಯಾರೂ ಗ್ರಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದರು. 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಿಡಿಸಿ 57 ರನ್ ಬಾರಿಸಿ ಉಮೇಶ್ ಯಾದವ್ (10) ಜೊತೆ ಅರ್ಧಶತಕದ ಜೊತೆಯಾಟ ಆಡಿದರು. ಅಂತಿಮವಾಗಿ ಭಾರತ 61.3 ಓವರ್​ನಲ್ಲಿ 191 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಕಿತ್ತರೆ, ರಾಬಿನ್ಸನ್ 3, ಜೇಮ್ಸ್ ಆಂಡರ್ಸನ್ ಹಾಗೂ ಓವರ್ಟನ್ ತಲಾ 1 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್​ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ರಾರಿ ಬರ್ನ್ಸ್ 5 ರನ್ ಗಳಿಸಿ ಬೌಲ್ಡ್ ಆದರೆ, ಹಸೀಬ್ ಹಮೀದ್ ಸೊನ್ನೆ ಸುತ್ತಿದರು. ಉಮೇಶ್ ಯಾದವ್ ಇಂಗ್ಲೆಂಡ್​ನ ಅತಿದೊಡ್ಡ ವಿಕೆಟ್ ಜೋ ರೂಟ್ (21) ಅವರನ್ನು ಔಟ್ ಮಾಡಿ ಬ್ರೇಕ್ ತಂದುಕೊಟ್ಟರು.

ಪರಿಣಾಮ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 17 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. 138 ರನ್​ಗಳ ಹಿನ್ನಡೆಯಲ್ಲಿದೆ. ಡೇವಿಡ್ ಮಲನ್ 26 ಹಾಗೂ ಕ್ರ್ಯಾಗ್ ಓವರ್ಟನ್ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಬುಮ್ರಾ 2 ಹಾಗೂ ಉಮೇಶ್ ಯಾದವ್1 ವಿಕೆಟ್ ಪಡೆದಿದ್ದಾರೆ.

ಎರಡನೇ ದಿನ ಕೊಹ್ಲಿ ಪಡೆಗೆ ಮುಖ್ಯವಾಗಿದ್ದು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಆದಷ್ಟು ಬೇಗ ಪೆವಿಲಿಯನ್​ಗೆ ಅಟ್ಟಬೇಕಿದೆ. ಪಿಚ್​ನಲ್ಲಿ ಚೆಂಡು ಹೆಚ್ಚಾಗಿ ಸ್ವಿಂಗ್ ಆಗುತ್ತಿದೆ. ಭಾರತೀಯ ನಾಲ್ವರು ವೇಗಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಿದೆ.

Cristiano Ronaldo: ಕೊನೇ ಕ್ಷಣದಲ್ಲಿ ಫಲಿತಾಂಶ ಬದಲಿಸಿ ವಿಶ್ವ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

Ind vs Eng: ಮೊಣಕಾಲಿನಿಂದ ರಕ್ತ ಸುರಿಯುತ್ತಿದ್ದರೂ ಬೌಲಿಂಗ್ ಮುಂದುವರೆಸಿದ ಜೇಮ್ಸ್ ಆಂಡರ್ಸನ್! ಫೋಟೋ ನೋಡಿ

(India vs England Highlights 4th Test England 53-3 at stumps trail India by 138 runs at the Oval)

Published On - 7:30 am, Fri, 3 September 21