Rohit Sharma: ರೋಹಿತ್ ಸಿಡಿಸಿದ ಅಪ್ಪರ್​​ಕಟ್ ಸಿಕ್ಸರ್ ನೋಡಿದ್ರಾ?: ಹಿಟ್​ಮ್ಯಾನ್ ಶಾಟ್​ಗೆ ಕ್ರಿಕೆಟ್ ದಿಗ್ಗಜ ಫಿದಾ

| Updated By: Vinay Bhat

Updated on: Aug 28, 2021 | 7:52 AM

India vs England 3rd Test: ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ತಂಡಕ್ಕೆ ಆಸರೆಯಾಗಿ ನಿಂತರು. ಪೂಜಾರ ಜೊತೆಗೂಡಿ 84 ರನ್​ಗಳ ಕಾಣಿಕೆ ನೀಡಿದರು. 156 ಎಸೆತಗಳನ್ನು ಎದುರಿಸಿದ ರೋಹಿತ್ 7 ಬೌಂಡರಿ ಮತ್ತು 1 ಸಿಕ್ಸರ್​ನೊಂದಿಗೆ 59 ರನ್ ಗಳಿಸಿದರು.

Rohit Sharma: ರೋಹಿತ್ ಸಿಡಿಸಿದ ಅಪ್ಪರ್​​ಕಟ್ ಸಿಕ್ಸರ್ ನೋಡಿದ್ರಾ?: ಹಿಟ್​ಮ್ಯಾನ್ ಶಾಟ್​ಗೆ ಕ್ರಿಕೆಟ್ ದಿಗ್ಗಜ ಫಿದಾ
Rohit Sharma
Follow us on

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ಸಾಗುತ್ತರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿರುವ ಟೀಮ್ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 215 ರನ್ ಬಾರಿಸಿ ಕೇವಲ 2 ವಿಕೆಟ್​ಗಳನ್ನಷ್ಟೆ ಕಳೆದುಕೊಂಡಿದೆ. ವಿಶೇಷ ಎಂದರೆ ಕಳಪೆ ಫಾರ್ಮ್​ನಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಮತ್ತು ನಾಯಕ ವಿರಾಟ್ ಕೊಹ್ಲಿ (Virat Kohli) ಟೊಂಕಕಟ್ಟಿ ನಿಂತಿರುವುದು. ಭಾರತ 139 ರನ್​ಗಳ ಹಿನ್ನಡೆಯಲ್ಲಷ್ಟೆ ಇದೆ. ಹೀಗಾಗಿ ಕೊಹ್ಲಿ-ಪೂಜಾರ ಜೊತೆಯಾಟ ಇಂದು ಮೂರನೇ ಟೆಸ್ಟ್ (3rd Test) ಮೇಲೆ ಮುಖ್ಯ ಪಾತ್ರವಹಿಸಲಿದೆ.

ಇವರಿಬ್ಬರ ನಡುವೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ತಂಡಕ್ಕೆ ಆಸರೆಯಾಗಿ ನಿಂತರು. ಪೂಜಾರ ಜೊತೆಗೂಡಿ 84 ರನ್​ಗಳ ಕಾಣಿಕೆ ನೀಡಿದರು. 156 ಎಸೆತಗಳನ್ನು ಎದುರಿಸಿದ ರೋಹಿತ್ 7 ಬೌಂಡರಿ ಮತ್ತು 1 ಸಿಕ್ಸರ್​ನೊಂದಿಗೆ 59 ರನ್ ಗಳಿಸಿದರು. ಅದರಲ್ಲೂ ಹಿಟ್​ಮ್ಯಾನ್ ಸಿಡಿಸಿದ ಒಂದು ಸಿಕ್ಸ್ ಅದ್ಭುತವಾಗಿತ್ತು. ಇದನ್ನು ಕಂಡು ಕ್ರಿಕೆಟ್ ದಿಗ್ಗಜ ಕೂಡ ವಾವ್ ಎಂದಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಭಾರತೀಯ ಬ್ಯಾಟ್ಸ್​ಮನ್​ಗಳು ಎರಡನೇ ಇನ್ನಿಂಗ್ಸ್​ನಲ್ಲಿ ಫೈಟ್ ಬ್ಯಾಕ್ ಮಾಡುತ್ತಿದ್ದಾರೆ. ಈ ಪೈಕಿ ರೋಹಿತ್ ಶರ್ಮಾ ಕೊಂಚ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇದರಲ್ಲಿ ಹಿಟ್​ಮ್ಯಾನ್ ಅಪ್ಪರ್​ಕಟ್ ಮೂಲಕ ಸಿಡಿಸಿದ ಒಂದು ಸಿಕ್ಸ್ ಮನಮೋಹಕವಾಗಿತ್ತು. 16ನೇ ಓವರ್​ನ ಓಲ್ಲಿ ರಾಬಿನ್ಸನ್ ಬೌಲಿಂಗ್​ನಲ್ಲಿ ರೋಹಿತ್ ಈ ಸಿಕ್ಸರ್ ಬಾರಿಸಿದರು.

 

ರೋಹಿತ್ ಅವರ ಈ ಅಪ್ಪರ್​ಕಟ್ ಸಿಕ್ಸರ್ ಕಂಡು ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಾಂಜ್ರೇಕರ್‌ ಒಂದು ಕ್ಷಣ ಶಾಕ್ ಆದರು. “ನಮಗೆಲ್ಲಾ ಪರಿಚಯ ಇರುವ ರೋಹಿತ್‌ ಶರ್ಮಾ ಇವರೇ. ಇದು ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ನಮಗೆ ಕಾಣಿಸುವ ರೋಹಿತ್ ಶರ್ಮಾ. ಬೇಕೆಂದೇ ಈ ಹೊಡೆಯವನ್ನು ಆಡಿದ್ದಾರೆ. ಚೆಂಡು ಪುಟಿದೇಳುವುದರ ಜೊತೆಗೆ ನೆಗೆದು ಅಪ್ಪರ್‌ ಕಟ್‌ ಹೊಡೆದಿದ್ದಾರೆ. ಅತ್ಯಂತ ಸುರಕ್ಷಿತ ಹೊಡೆತವಿದು” ಎಂದು ಗವಾಸ್ಕರ್‌ ಅವರು ರೋಹಿತ್ ಶಾಟ್​ಗೆ ಫಿದಾ ಆಗಿದ್ದಾರೆ.

ಇನ್ನೂ ಈ ಸಿಕ್ಸರ್ ಬಾರಿಸುವ ಮೂಲಕ ವಿಶೇಷ ಸಾಧನೆ ಮಾಡಿರುವ ರೋಹಿತ್ ಶರ್ಮಾ ಕಪಿಲ್ ದೇವ್ ದಾಖಲೆ ಮುರಿದಿದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಬಾರಿಸಿದ 62ನೇ ಸಿಕ್ಸರ್‌ ಆಗಿದೆ. ಮಾಜಿ ನಾಯಕ ಕಪಿಲ್‌ ದೇವ್ ಈ ಹಿಂದೆ 61 ಸಿಕ್ಸರ್ ಬಾರಿಸಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಸಚಿನ್‌ ತೆಂಡೂಲ್ಕರ್‌ (69), ಎಂಎಸ್‌ ಧೋನಿ (78) ಮತ್ತು ವೀರೇಂದ್ರ ಸೆಹ್ವಾಗ್‌ (90) ಮೊದಲ ಮೂರು ಸ್ಥಾನದಲ್ಲಿದ್ದಾರೆ.

Tokyo Paralympics: ಟೇಬಲ್ ಟೆನಿಸ್​ನಲ್ಲಿ ಐತಿಹಾಸಿಕ ಸಾಧನೆ: ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

ಮತ್ತೊಮ್ಮೆ ಮೈದಾನಕ್ಕೆ ಎಂಟ್ರಿಕೊಟ್ಟ ಅನಾಮಿಕ; ಇಸಿಬಿ ವಿರುದ್ಧ ವಿಮಾನ ಹಾರಿಸಿ ಪ್ರತಿಭಟನೆ; ಇದು 3ನೇ ದಿನದ ಹೈಲೈಟ್ಸ್

(India vs England Hit man Rohit Sharma upper cut six impresses Sunil Gavaskar Here is the Viral video )