India vs England: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ತಕ್ಷಣ ಜೇಮ್ಸ್ ಆ್ಯಂಡರ್ಸನ್ ಮಾಡಿದ್ದೇನು ನೋಡಿ

| Updated By: Vinay Bhat

Updated on: Aug 26, 2021 | 7:23 AM

Virat Kohli: ಕೊಹ್ಲಿ 7 ರನ್ ಗಳಿಸಿ ಔಟ್ ಆದಾಗ ಜೇಮ್ಸ್ ಆಂಡರ್ಸನ್ ಸಂಭ್ರಮಿಸಿದ ರೀತಿ ಸದ್ಯ ವೈರಲ್ ಆಗುತ್ತಿದೆ. ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಆಂಡರ್ಸನ್ ಹಾಗೂ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.

India vs England: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ತಕ್ಷಣ ಜೇಮ್ಸ್ ಆ್ಯಂಡರ್ಸನ್ ಮಾಡಿದ್ದೇನು ನೋಡಿ
James Anderson and Virat Kohli
Follow us on

ಲೀಡ್ಸ್​ನ ಹೆಡಿಂಗ್ಲೆ (Headingley, Leeds) ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಕೇವಲ 78 ರನ್​ಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದೆ. ಇತ್ತ ಟೀಮ್ ಇಂಡಿಯಾವನ್ನು ಹೆಡೆಮುರಿ ಕಟ್ಟಿ ಮೊದಲ ದಿನವೇ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 120 ರನ್ ಬಾರಿಸಿದ್ದು, 42 ರನ್​ಗಳ ಮುನ್ನಡೆ ಸಾಧಿಸಿದೆ.

ಭಾರತ ಪರ ರೋಹಿತ್ ಶರ್ಮಾ 19 ರನ್ ಹಾಗೂ ಅಜಿಂಕ್ಯಾ ರಹಾನೆ 18 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಮತ್ತದೆ ತಪ್ಪು ಮಾಡಿ ಪೆವಿಲಿಯನ್ ಸೇರಿಕೊಂಡಿದ್ದು ಅತ್ಯಂತ ಹೀನಾಯವಾಗಿತ್ತು. ದಾಖಲೆ ಎಂಬಂತೆ ಜೇಮ್ಸ್ ಆಂಡರ್ಸನ್ ಬೌಲಿಂಗ್​ನಲ್ಲಿ ಕೊಹ್ಲಿ 7ನೇ ಬಾರಿ ಪೆವಿಲಿಯನ್​ಗೆ ಕಾಲಿಟ್ಟರು.

ಅದರಲ್ಲೂ ಕೊಹ್ಲಿ 7 ರನ್ ಗಳಿಸಿ ಔಟ್ ಆದಾಗ ಜೇಮ್ಸ್ ಆಂಡರ್ಸನ್ ಸಂಭ್ರಮಿಸಿದ ರೀತಿ ಸದ್ಯ ವೈರಲ್ ಆಗುತ್ತಿದೆ. ಟೆಸ್ಟ್ ಸರಣಿ ಆರಂಭವಾದಾಗಿನಿಂದಲೂ ಆಂಡರ್ಸನ್ ಹಾಗೂ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಇದು ಮೂರನೇ ಟೆಸ್ಟ್​ನಲ್ಲೂ ಮುಂದುವರೆದಿದ್ದು, ಕೊಹ್ಲಿ ಅನ್ನು ಔಟ್ ಮಾಡಿದಾದ ಆಂಡರ್ಸನ್ ಅವರು ಥೇಟ್ ಕೊಹ್ಲಿ ಮಾದರಿಯಲ್ಲಿಅಗ್ರೆಸ್ಸಿವ್ ಆಗಿ ಸಂಭ್ರಮಿಸಿ ಅಣುಕಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.

 

ಇನ್ನೂ ಇದರೊಂದಿಗೆ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಅನಗತ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಓರ್ವ ಬೌಲರ್‌ಗೆ ಅತಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಕೆಟ್ಟ ದಾಖಲೆಗಾಗಿ ಕಿಂಗ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟಾರೆ 7 ಬಾರಿ ಔಟ್ ಆಗಿದ್ದಾರೆ. ಆಂಡರ್ಸನ್ ಬಿಟ್ಟರೆ ಆಸೀಸ್‌ ಸ್ಪಿನ್ನರ್ ಕ್ರಿಸ್ ಲಿನ್ ಕೂಡ ಕೊಹ್ಲಿಯನ್ನು 7 ಸಾರಿ ಟೆಸ್ಟ್‌ನಲ್ಲಿ ಔಟ್ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹೆಚ್ಚು ಬಾರಿ ಔಟ್ ಮಾಡಿರುವ ಬೌಲರ್‌ಗಳು

ಜೇಮ್ಸ್ ಆಂಡರ್ಸನ್, ಇಂಗ್ಲೆಂಡ್, 7 ಬಾರಿ

ಕ್ರಿಸ್ ಲಿನ್, ಆಸ್ಟ್ರೇಲಿಯಾ, 7 ಬಾರಿ

ಸ್ಟುವರ್ಟ್ ಬ್ರಾಡ್, ಇಂಗ್ಲೆಂಡ್, 5 ಸಾರಿ

ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ, 5 ಸಾರಿ

ಬೆನ್ ಸ್ಟೋಕ್ಸ್, ಇಂಗ್ಲೆಂಡ್, 5 ಸಾರಿ

ಮೊಯೀನ್ ಅಲಿ, ಇಂಗ್ಲೆಂಡ್, 5 ಸಾರಿ

George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

Ind vs Eng: ಮುಂದುವರೆದ ಕೊಹ್ಲಿಯ ಪೆವಿಲಿಯನ್ ಪರೇಡ್; 7ನೇ ಬಾರಿಗೆ ವಿರಾಟ್ ಬಲಿ ಪಡೆದ ಆಂಡರ್ಸನ್

(India vs England James Anderson imitate Celebration After Dismissing Virat Kohli In ind vs eng 3rd Test)