AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ವಿರಾಟ್ ಕೊಹ್ಲಿ ತಕ್ಷಣವೇ ಸಚಿನ್ ತೆಂಡೂಲ್ಕರ್​ಗೆ ಕರೆ ಮಾಡಬೇಕು ಎಂದ ಸುನಿಲ್ ಗವಾಸ್ಕರ್

Virat Kohli: ಕೊಹ್ಲಿ ಸತತ ವೈಫಲ್ಯ ಅನಿಭವಿಸುತ್ತಿರುವುದನ್ನು ಕಂಡು ಸುನಿಲ್ ಗವಾಸ್ಕರ್ ಲೈವ್ ಕಾಮೆಂಟರಿ ವೇಳೆ, ಕೊಹ್ಲಿ ಕೂಡಲೇ ಸಚಿನ್ ತೆಂಡೂಲ್ಕರ್‌ ಸಲಹೆ ಪಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.

IND vs ENG: ವಿರಾಟ್ ಕೊಹ್ಲಿ ತಕ್ಷಣವೇ ಸಚಿನ್ ತೆಂಡೂಲ್ಕರ್​ಗೆ ಕರೆ ಮಾಡಬೇಕು ಎಂದ ಸುನಿಲ್ ಗವಾಸ್ಕರ್
ಕೊಹ್ಲಿ
TV9 Web
| Edited By: |

Updated on:Aug 26, 2021 | 10:52 AM

Share

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದೆರಡು ವರ್ಷಗಳಿಂದ ಶತಕ ಬಾರಿಸಲು ವಿಫಲವಾಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕನಿಷ್ಠ ರನ್ ಗಳಿಸಲೂ ಹರಸಾಹಸ ಪಡುತ್ತಿದ್ದಾರೆ. ಹೀನಾಯವಾಗಿ ವಿಕೆಟ್ ಒಪ್ಪಿಸುತ್ತಿರುವ ಕಿಂಗ್ ಕೊಹ್ಲಿ ಸದ್ಯ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಂತು ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಹೀಗೆ ಸಾಲು ಸಾಲು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿರುವ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ತಂತ್ರಗಾರಿಕೆ ಸುಧಾರಿಸಿಕೊಳ್ಳಲು ಕೂಡಲೇ ಸಚಿನ್‌ ತೆಂಡೂಲ್ಕರ್‌ ಅವರಿಗೆ ಕರೆಮಾಡಿ ಸಲಹೆ ಪಡೆಯುವ ಅಗತ್ಯವಿದೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

“ವಿರಾಟ್ ಕೊಹ್ಲಿ ತಕ್ಷಣ ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಿ ಸಂಪರ್ಕಿಸಬೇಕು ಹಾಗೂ ತಾವೇನು ಮಾಡಬೇಕೆಂಬುದನ್ನು ಕೇಳಬೇಕು. ಸಿಡ್ನಿಯಲ್ಲಿ ಸಚಿನ್ ಏನು ಮಾಡಿದ್ದರೋ ಅದನ್ನು ವಿರಾಟ್ ಕೊಹ್ಲಿ ಮಾಡಬೇಕು, ಕವರ್ ಡ್ರೈವ್ ಆಡುವುದಿಲ್ಲ ಎಂದು ತಮಗೆ ತಾವೇ ಹೇಳಿಕೊಳ್ಳಬೇಕು” ಎಂದು ಗವಾಸ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

ಅಲ್ಲದೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕೊಹ್ಲಿ ಜೇಮ್ಸ್ ಆಂಡರ್ಸನ್ ಅವರ ಆಫ್ ಸ್ಟಮ್ ನ ಹೊರಭಾಗದಲ್ಲಿದ್ದ ಎಸೆತವನ್ನು ಆಡಲು ಹೋಗಿ ವಿಕೆಟ್ ಕೀಪರ್ ಗೆ ಕ್ಯಾಚ್ ಇತ್ತು ವಿಕೆಟ್ ಒಪ್ಪಿಸಿದ್ದರು. 23 ಟೆಸ್ಟ್ ಗಳ ಪೈಕಿ ಕೊಹ್ಲಿಯನ್ನು ಆಂಡರ್ಸನ್ ಈ ರೀತಿ ಪೆವಿಲಿಯನ್ ಗೆ ಕಳಿಸುತ್ತಿರುವುದು ಇದು 7 ನೇ ಬಾರಿಯಾಗಿದೆ. ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲಿ ಕೊಹ್ಲಿ ಗಳಿಸಿರುವುದು ಕೇವಲ 69 ರನ್‌ಗಳನ್ನು ಮಾತ್ರ. ಒಮ್ಮೆಯೂ ಕೂಡ ಅರ್ಧಶತಕದ ಗಡಿ ದಾಟಿಲ್ಲ. ಈ ಮೂಲಕ ಕೊಹ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.

ಕೊಹ್ಲಿ ಸತತ ವೈಫಲ್ಯ ಅನಿಭವಿಸುತ್ತಿರುವುದನ್ನು ಕಂಡು ಸುನಿಲ್ ಗವಾಸ್ಕರ್ ಲೈವ್ ಕಾಮೆಂಟರಿ ವೇಳೆ, 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಆಂಡರ್ಸನ್‌ ಎದುರು ರನ್‌ ಗಳಿಸಲು ತಿಣುಕಾಡಿದ್ದ ಕೊಹ್ಲಿ ಆಫ್‌ ಸ್ಟಂಪ್‌ನ ಆಚೆಗಿನ ಚೆಂಡನ್ನು ಎದುರಿಸಲು ವಿಫಲವಾರಾಗಿದ್ದರು. ಭಾರತ ತಂಡದ ಆ ಪ್ರವಾಸದ ಬಳಿಕ ತಾಯ್ನಾಡಿಗೆ ಹಿಂದಿರುಗಿದ್ದ ಕೊಹ್ಲಿ ಕೂಡಲೇ ಸಚಿನ್ ತೆಂಡೂಲ್ಕರ್‌ ಮಾರ್ಗದರ್ಶನ ಪಡೆಯಲು ಮುಂದಾಗಿದ್ದರು. ಕೊಹ್ಲಿ ಈಗಲೂ ಕೂಡ ಅಂಥದ್ದೇ ಸಲಹೆ ಪಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇನ್ನೂ ವಿರಾಟ್ ಕೊಹ್ಲಿ 7ನೇ ಸ್ಟಂಪ್‌ನ ನೇರದಲ್ಲಿ ಇರುವ ಎಸೆತಗಳಲ್ಲೂ ಔಟ್ ಆಗುತ್ತಿರುವುದು ನಿಜಕ್ಕೂ ಶಾಕಿಂಗ್ ವಿಚಾರ. 2014ರಲ್ಲೂ ಅವರು ಇದೇ ರೀತಿ ಆಫ್‌ ಸ್ಟಂಪ್‌ನ ಆಚೆ ಇರುವ ಎಸೆತಗಳಲ್ಲಿ ವಿಕೆಟ್‌ ಕೈಚೆಲ್ಲುತ್ತಿದ್ದರು ಎಂದಿರುವ ಗವಾಸ್ಕರ್‌ ಸಚಿನ್ ಸಲಹೆ ಬೇಕೇ ಬೇಕು ಎಂದಿದ್ದಾರೆ.

Tokyo 2020 Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಗೆಲುವು: ಮಹಿಳಾ ಸಿಂಗಲ್ಸ್​ನಲ್ಲಿ ಗೆದ್ದು ಬೀಗಿದ ಭಾವಿನಾ

India vs England: ಫೀಲ್ಡಿಂಗ್ ವೇಳೆ ನಿಮ್ಮ ಸ್ಕೋರ್ ಎಷ್ಟೆಂದು ಕೇಳಿದ ಫ್ಯಾನ್ಸ್​ಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟ ಸಿರಾಜ್

(India vs England 3rd test A Quick Call To Sachin Tendulkar May Help to Virat Kohli Says Sunil Gavaskar)

Published On - 10:50 am, Thu, 26 August 21

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು