Tokyo 2020 Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಗೆಲುವು: ಮಹಿಳಾ ಸಿಂಗಲ್ಸ್​ನಲ್ಲಿ ಗೆದ್ದು ಬೀಗಿದ ಭಾವಿನಾ

Bhavinaben Patel: ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾವಿನಾ ಮುನ್ನಡೆ ಸಾಧಿಸುತ್ತಾ ಬಂದರು. ಮೂರನೇ ಗೇಮ್​ನಲ್ಲಿ 17-15 ಮುನ್ನಡೆ ಸಾಧಿಸಿ ಭಾರತ 2-1 ಮುನ್ನಡೆ ಸಾಧಿಸಿತು.

Tokyo 2020 Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಗೆಲುವು: ಮಹಿಳಾ ಸಿಂಗಲ್ಸ್​ನಲ್ಲಿ ಗೆದ್ದು ಬೀಗಿದ ಭಾವಿನಾ
Bhavina Patel

ಟೋಕಿಯೊ ಪ್ಯಾರಾಲಿಂಪಿಕ್ಸ್‌ (Tokyo 2020 Paralympics) ನಲ್ಲಿ ಭಾರತ ಚೊಚ್ಚಲ ಗೆಲುವು ಸಾಧಿಸಿದೆ. ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳಾ ಸಿಂಗಲ್ಸ್​ನ A ಗುಂಪಿನ ಪಂದ್ಯದಲ್ಲೇ ಗೆಲುವು ಕಾಣುವ ಮೂಲಕ ಖಾತೆ ತೆರೆದಿದ್ದಾರೆ. ಇಂದು ನಡೆದ ಎರಡನೇ ಗುಂಪಿನ ಎ ಪಂದ್ಯದಲ್ಲಿ ಭಾವಿನಾ ಗ್ರೇಟ್ ಬ್ರಿಟನ್​ನ ಮೆಗನ್ ಶಾಕ್ಲೆಟನ್ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿದ್ದು ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾವಿನಾ ಮುನ್ನಡೆ ಸಾಧಿಸುತ್ತಾ ಬಂದರು. ಮೂರನೇ ಗೇಮ್​ನಲ್ಲಿ 17-15 ಮುನ್ನಡೆ ಸಾಧಿಸಿ ಭಾರತ 2-1 ಮುನ್ನಡೆ ಸಾಧಿಸಿತು. ನಾಲ್ಕನೇ ಸುತ್ತಿನಲ್ಲಿ ಇಬ್ಬರೂ 11-11 ಅಂಕ ಸಂಪಾದಿಸಿದ ಪರಿಣಾಮ ಟೈ ಆಯಿತು. ಅಂತಿಮ ಸುತ್ತಿನಲ್ಲಿ ಭಾವಿನಾ  13-11 ಪಾಯಿಂಟ್ ಸಂಪಾದಿಸಿ ಮೆಗನ್ ವಿರುದ್ಧ 3-1 ಸೆಟ್​ಗಳ ಅಂತರದಿಂದ ಗೆದ್ದರು.

 

ಬುಧವಾರ ನಡೆದ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಅವರು ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲು ಅನುಭವಿಸಿದ್ದರು.

ಇನ್ನೂ ಬುಧವಾರದ ಮತ್ತೊಂದು ಪಂದ್ಯದಲ್ಲಿ ಪ್ಯಾರಾ ಟೇಬಲ್ ಟೆನ್ನಿಸ್​ ಆಟಗಾರ್ತಿ ಸೋನಾಲ್​ಬೆನ್ ಪಟೇಲ್ ವಿಶ್ವದ 4ನೇ ಶ್ರೇಯಾಂಕದಲ್ಲಿರುವ ಕಿಯಾನ್ ಲಿ ಅವರ ವಿರುದ್ಧ ನಿರಾಶೆ ಅನುಭವಿಸಿದ್ದರು. 3-2 ಸೆಟ್​ಗಳ ಅಂತರದಿಂದ ಪಟೇಲ್ ಸೋತಿದ್ದು, ಎರಡನೇ ಗುಂಪಿನ ಡಿ ಪಂದ್ಯದಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮಿ ಗಿಯು ಲೀ ವಿರುದ್ಧ ಸೆಣಸಲಿದ್ದಾರೆ.

ಟೋಕಿಯೊ ಕ್ರೀಡಾಕೂಟದಲ್ಲಿ ಭಾರಗತೀಯ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಈಜು, ಪವರ್ ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೋ ಸೇರಿದಂತೆ ಒಂಬತ್ತು ಕ್ರೀಡೆಗಳಲ್ಲಿ ದೇಶದ 54 ಆಟಗಾರರು ಭಾಗವಹಿಸಲಿದ್ದಾರೆ.

Read Full Article

Click on your DTH Provider to Add TV9 Kannada