India vs England: ಥೇಟ್ ರೋಹಿತ್ ಶರ್ಮಾ ರೀತಿಯಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಜಸ್​ಪ್ರೀತ್ ಬುಮ್ರಾ: ವಿಡಿಯೋ

| Updated By: Vinay Bhat

Updated on: Aug 07, 2021 | 8:10 AM

Jasprit Bumrah: ಥೇಟ್ ಇದೇ ಮಾದರಿಯಲ್ಲಿ ಜಸ್​ಪ್ರೀತ್ ಬುಮ್ರಾ ಚೆಂಡನ್ನು ಸಿಕ್ಸ್​ಗೆ ಅಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

India vs England: ಥೇಟ್ ರೋಹಿತ್ ಶರ್ಮಾ ರೀತಿಯಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಜಸ್​ಪ್ರೀತ್ ಬುಮ್ರಾ: ವಿಡಿಯೋ
Jasprit Bumrah
Follow us on

ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಇಂಗ್ಲೆಂಡ್ ತಂಡವನ್ನು 183 ರನ್​ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ (Team India) 278 ರನ್ ಬಾರಿಸಿ 95 ರನ್​ಗಳ ಮುನ್ನಡೆ ಸಾಧಿಸಿತು. ಇತ್ತ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಆಂಗ್ಲರು 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 25 ರನ್ ಕಲೆಹಾಕಿದೆ. 70 ರನ್​ಗಳ ಹಿನ್ನಡೆಯಲ್ಲಿದೆ.

ಕೆ. ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ನಿರ್ಗಮನದ ಬಳಿಕ ದಿಢೀರ್ ಕುಸಿತ ಕಂಡ ಭಾರತಕ್ಕೆ 9ನೇ ವಿಕೆಟ್​ಗೆ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಬ್ಯಾಟಿಂಗ್ ನಡೆದ ತಂಡದ ಮೊತ್ತವನ್ನು 278ಕ್ಕೆ ತಂದಿಟ್ಟರು. ಅದರಲ್ಲೂ ಯಾರ್ಕರ್ ಕಿಂಗ್ ಬುಮ್ರಾ ಮನಬಂದಂತೆ ಬ್ಯಾಟ್ ಬೀಸಿದರು.

ಬುಮ್ರಾ ಬ್ಯಾಟಿಂಗ್​ನಲ್ಲಿ ಹೈಲೇಟ್ ಆಗಿದ್ದು ಆ ಒಂದು ಸಿಕ್ಸ್. ಟೀಮ್ ಇಂಡಿಯಾದಲ್ಲಿ ಪುಲ್ ಶಾಟ್ ಹೊಡೆಯುವುದರಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಎಕ್ಸ್​ಪರ್ಟ್. ಲೀಲಾಜಾಲವಾಗಿ ಇವರು ಚೆಂಡನ್ನು ಪುಲ್ ಮಾಡುವ ಮೂಲಕ ಸಿಕ್ಸ್​ ಸಿಡಿಸುತ್ತಾರೆ. ಆದರೆ, ಥೇಟ್ ಇದೇ ಮಾದರಿಯಲ್ಲಿ ಜಸ್​ಪ್ರೀತ್ ಬುಮ್ರಾ ಚೆಂಡನ್ನು ಸಿಕ್ಸ್​ಗೆ ಅಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಸ್ಯಾಮ್​ ಕುರ್ರನ್ ಬೌಲಿಂಗ್​ನಲ್ಲಿ ಬುಮ್ರಾ ಅವರು ಡೀಪ್ ಸ್ಕ್ವಾರ್​ ಲೆಗ್​ ಕಡೆ ಪುಲ್ ಶಾಟ್ ಮೂಲಕ ಸಿಕ್ಸ್​ ಸಿಡಿಸಿದರು. ಅಷ್ಟೇ ಅಲ್ಲದೆ ಹಿಂದಿ ಬಾಲ್​ನಲ್ಲಿ ಬೌಂಡರಿ ಬಾರಿಸಿದ್ದರು. ನಂತರದ ಬಾಲ್ ಸಿಕ್ಸ್​ ಹೋದರೆ ಮುಂದಿನ ಎಸೆತದಲ್ಲೂ ಬೌಂಡರಿ ಬಾರಿಸಿ ಪರಾಕ್ರಮ ಮೆರೆದರು. ಬುಮ್ರಾ 34 ಎಸೆತಗಳಲ್ಲಿ 3 ಬೌಂಡಡರಿ, 1 ಸಿಕ್ಸರ್ ಬಾರಿಸಿ 28 ರನ್ ಗಳಿಸಿದರು.

ಭಾರತ ಪರ ಕೆ. ಎಲ್ ರಾಹುಲ್ 214 ಎಸೆತಗಳಲ್ಲಿ 84 ರನ್ ಬಾರಿಸಿದರೆ, ರವೀಂದ್ರ ಜಡೇಜಾ 86 ಎಸೆತಗಳಲ್ಲಿ 56 ರನ್ ಚಚ್ಚಿದರು. ಭಾರತ 84.5 ಓವರ್​ನಲ್ಲಿ 278 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ರಾಬಿನ್​ಸನ್ 5 ವಿಕೆಟ್ ಕಿತ್ತರೆ, ಜೇಮ್ಸ್ 4 ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದರು.

IND vs ENG: ಅತಿ ವೇಗವಾಗಿ 600 ಟೆಸ್ಟ್ ವಿಕೆಟ್ ಪಡೆದ ಬೌಲರ್; ಟೆಸ್ಟ್​ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಆಂಡರ್ಸನ್

Tokyo Olympics: ರಿಲೇಯಲ್ಲಿ ಭಾರತಕ್ಕೆ ನಿರಾಸೆ: ಒಂದು ಸ್ಥಾನದಿಂದ ಕೈತಪ್ಪಿದ ಫೈನಲ್

(India vs England Jasprit Bumrah smacks Sam Curran for a huge six in first Test like Rohit Sharma)