ನ್ಯಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲಿ 303 ರನ್ಗೆ ಆಲೌಟ್ ಮಾಡಿ 209 ರನ್ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾ (Team India) ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ. ಕೊಹ್ಲಿ (Virat kohli) ಪಡೆಯ ಗೆಲುವಿಗೆ ಇನ್ನೂ 157 ರನ್ಗಳ ಅವಶ್ಯಕತೆಯಿದೆ. ಹೀಗಾಗಿ ಅಂತಿಮ ದಿನದಾಟದ ಮೇಲೆ ಉಭಯ ತಂಡಗಳು ಕಣ್ಣಿಟ್ಟಿದೆ.
ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿದರು. ಇದು ಮೊಹಮ್ಮದ್ ಸಿರಾಜ್ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕುರ್ರನ್ ನಡುವೆ ಮಾಹಿನ ಚಕಮಕಿ ನಡೆಯುವ ವರೆಗೆ ಹೋಯಿತು.
ಅದು ಇಂಗ್ಲೆಂಡ್ ಬ್ಯಾಟಿಂಗ್ನ ಎರಡನೇ ಇನ್ನಿಂಗ್ಸ್ನ 74ನೇ ಓವರ್. ಒಂದುಕಡೆ ನಾಯಕ ಜೋ ರೂಟ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರೆ, ಇತ್ತ ಸ್ಯಾಮ್ ಕುರ್ರನ್ ಸಾಥ್ ನೀಡುತ್ತಿದ್ದರು. ಇವರ ಜೊತೆಯಾಟವನ್ನು ಮುರಿಯುವುದು ಭಾರತಕ್ಕೆ ಮುಖ್ಯವಾಗಿತ್ತು. ಇದೇವೇಳೆ 74ನೇ ಓವರ್ ಬೌಲಿಂಗ್ ಮಾಡಲು ಬಂದ ಮೊಹಮ್ಮದ್ ಸಿರಾಜ್ ಅವರು ಕುರ್ರನ್ಗೆ ಶಾರ್ಟ್ ಮತ್ತು ವೈಡ್ ಬಾಲ್ ಎಸೆದರು. ಆದರೆ, ಇದು ಚೆಂಡು ಬೌಂಡರಿ ಗೆರೆ ತಲುಪಿತು. ಇದರಿಂದ ಕುಪಿತಗೊಂಡ ಸಿರಾಜ್ ಅವರು ಕುರ್ರನ್ ಬಳಿ ತೆರಳಿ ಮಾತಿಗಿಳಿದರು. ಇತ್ತ ಕುರ್ರನ್ ಕೂಡ ಮಾತಿಗೆ ಮಾತು ಬೆಳೆಸಿದರು.
This Curran vs Siraj battle is ace !!! #ENGvIND pic.twitter.com/puhRL813jo
— Jutin (@JUSTIN_AVFC_) August 7, 2021
ಈ ಸಂದರ್ಭ ಮಧ್ಯ ಪ್ರವೇಶಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಿರಾಜ್ ಅವರನ್ನು ಕರೆಸಿ ಸಮಾಧಾನ ಪಡಿಸಿದರು. ಕೊನೆಗೂ ಸಿರಾಜ್ಗೆ ಕುರ್ರನ್ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಬುಮ್ರಾ ಬೌಲಿಂಗ್ನಲ್ಲಿ ಸಿರಾಜ್ ಅವರು ಕುರ್ರನ್ ಕ್ಯಾಚ್ ಹಿಡಿದು ತೃಪ್ತಿಪಟ್ಟುಕೊಂಡರು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಇತ್ತ ಭಾರತ ಕೆ. ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅವರ ಆಟದ ಫಲದಿಂದ 278 ರನ್ ಕಲೆಹಾಕಿತು. ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ನಾಯಕ ಜೋ ರೂಟ್ (109) ಬಿಟ್ಟರೆ ಮತ್ಯಾವ ಬ್ಯಾಟ್ಸ್ಮನ್ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮ ಇಂಗ್ಲೆಂಡ್ 303 ರನ್ಗೆ ಸರ್ವಪತನ ಕಂಡಿತು.
ಹೀಗಾಗಿ 209 ರನ್ಗಳ ಟಾರ್ಗೆಟ್ ಪಡೆದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿದೆ. ಅಂತಿಮ ದಿನದಲ್ಲಿ ಭಾರತ ಗೆಲುವಿಗಾಗಿ 157 ರನ್ ಗಳಿಸಬೇಕಿದೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ತಲಾ 12 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ
(India vs England Mohammad Siraj and Sam Curran involved in argument after that Virat Kohli plays pacifier)