AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಎರಡನೇ ಟೆಸ್ಟ್​ಗೆ ಎರಡು ಆಟಗಾರರು ಔಟ್: ಮಾಂಜ್ರೇಕರ್​​ರ ಭಾರತದ ಪ್ಲೇಯಿಂಗ್ XI ಇಲ್ಲಿದೆ

ಮಾಂಜ್ರೇಕರ್ ಕೂಡ ಅಶ್ವಿನ್ ಪರ ಮಾತನಾಡಿದ್ದು, ಎರಡನೇ ಟೆಸ್ಟ್​ಗೆ ರವೀಂದ್ರ ಜಡೇಜಾ ಬದಲು ಆರ್. ಅಶ್ವಿನ್​ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

India vs England: ಎರಡನೇ ಟೆಸ್ಟ್​ಗೆ ಎರಡು ಆಟಗಾರರು ಔಟ್: ಮಾಂಜ್ರೇಕರ್​​ರ ಭಾರತದ ಪ್ಲೇಯಿಂಗ್ XI ಇಲ್ಲಿದೆ
ಭಾರತ ಎರಡು ಪಂದ್ಯಗಳಿಂದ ಒಟ್ಟು 14 ಅಂಕ ಪಡೆದರೂ ಗೆಲುವಿನ ಶೇಕಡಾವಾರು (58.33%) ಲೆಕ್ಕಚಾರದಲ್ಲಿ ದ್ವಿತೀಯ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಇದಾಗ್ಯೂ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡ ಮಾಡಿದ ಎಡವಟ್ಟಿಗೂ ಇಲ್ಲಿ ಬೆಲೆ ತೆರಬೇಕಾಯಿತು.
TV9 Web
| Edited By: |

Updated on: Aug 10, 2021 | 7:50 AM

Share

ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಡ್ರಾ ಆದ ಬೆನ್ನಲ್ಲೆ ಟೀಮ್ ಇಂಡಿಯಾ (Team India) ಎರಡನೇ ಟೆಸ್ಟ್​ಗಾಗಿ ಲಂಡನ್​ನ ಇತಿಹಾಸ ಪ್ರಸಿದ್ಧ ಲಾರ್ಡ್ಸ್ (Lords) ಕ್ರೀಡಾಂಗಣಕ್ಕೆ ತಲುಪಿದೆ. ಎರಡು ದಿನಗಳು ಬಾಕಿ ಉಳಿದಿದ್ದು ಭರ್ಜರಿ ಅಭ್ಯಸ ನಡೆಸಬೇಕಿದೆ. ಈಗಾಗಲೇ ನಾಯಕ ವಿರಾಟ್ ಕೊಹ್ಲಿ (Virat Kohli) ಎರಡನೇ ಟೆಸ್ಟ್​ಗೆ ತಂಡದಲ್ಲಿ ಬದಲಾವಣೆ ಅನುಮಾನ ಎಂದು ಹೇಳಿದ್ದಾರೆ. ಆದರೆ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಎರಡನೇ ಟೆಸ್ಟ್​ಗೆ ಎರಡು ಬದಲಾವಣೆ ಮಾಡಲೇ ಬೇಕಿದೆ ಎಂದು ಹೇಳಿದ್ದಾರೆ.

ಮೊದಲ ಟೆಸ್ಟ್ ಮಳೆಯಿಂದಾಗಿ​​ ಡ್ರಾನಲ್ಲಿ ಅಂತ್ಯಕಂಡಿತಾದರೂ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ನಾಲ್ಕು ವೇಗದ ಬೌಲರ್​ಗಳು ಹಾಗೂ ಏಕೈಕ ಸ್ಪಿನ್ನರ್ ಅನ್ನು ಕೊಹ್ಲಿ ಕಣಕ್ಕಿಳಿಸಿದ್ದರು. ಇದರ ನಡುವೆ ಅನುಭವಿ ರವಿಚಂದ್ರನ್ ಅಶ್ವಿನ್​ ಅವರನ್ನು ಆಡಿಸದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದಿದ್ದವು.

ಸದ್ಯ ಮಾಂಜ್ರೇಕರ್ ಕೂಡ ಅಶ್ವಿನ್ ಪರ ಮಾತನಾಡಿದ್ದು, ಎರಡನೇ ಟೆಸ್ಟ್​ಗೆ ರವೀಂದ್ರ ಜಡೇಜಾ ಬದಲು ಆರ್. ಅಶ್ವಿನ್​ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಇವರ ಪ್ರಕಾರ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಆಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ 5ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಆಡಲಿದ್ದಾರೆ.

ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬೇಕೆಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ತಿಳಿಸಿರುವ ಅವರು, ಕೆಳ ಮಧ್ಯಮ ಕ್ರಮಾಂಕದಲ್ಲಿಇನ್ನಷ್ಟು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, 6ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸ್ವಲ್ಪ ಗೊಂದಲವಿದ್ದು, ವಿಶೇಷ ಬ್ಯಾಟ್ಸ್‌ಮನ್‌ ಆಗಿ ಹನುಮ ವಿಹಾರಿ ಆಯ್ಕೆ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಎರಡನೇ ಟೆಸ್ಟ್​ಗೆ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಥಾಕೂರ್​ರನ್ನು ಕೈಬಿಟ್ಟು ಅಶ್ವಿನ್ ಹಾಗೂ ಹನುಮ ವಿಹಾರಿಗೆ ಅವಕಾಶ ನೀಡಬೇಕು ಎಂದು ಮಾಂಜ್ರೇಕರ್ ತಿಳಿಸಿದ್ದಾರೆ.

ಎರಡನೇ ಟೆಸ್ಟ್‌ಗೆ ಮಾಂಜ್ರೇಕರ್ ಆರಿಸಿದ ಭಾರತ ಪ್ಲೇಯಿಂಗ್‌ XI: ಕೆ.ಎಲ್‌ ರಾಹುಲ್‌, ರೋಹಿತ್‌ ಶರ್ಮಾ , ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಭ್‌ ಪಂತ್‌ (ವಿ.ಕೀ), ಆರ್‌ ಅಶ್ವಿನ್‌, ಮೊಹಮ್ಮದ್‌ ಶಮಿ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

India vs England: ಲಾರ್ಡ್ಸ್​​ಗೆ ಬಂದಿಳಿದ ಟೀಮ್ ಇಂಡಿಯಾ: ಕ್ವಾರಂಟೈನ್​ನಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್

ಪ್ರಸಕ್ತ ವಿಶ್ವ ಕ್ರಿಕೆಟ್​ನ ನಾಲ್ವರು ಉತ್ಕೃಷ್ಟ ಬೌಲರ್​ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರು: ಸ್ಟೀವ್ ಸ್ಮಿತ್

(India vs England Sanjay Manjrekar Picks India Playing XI For Lords Secondd Test leaves out Jadeja)