ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ತಮಿಳುನಾಡಿನ ಚೆಪಾಕ್ ಮೈದಾನದಲ್ಲಿ ಫೆಬ್ರವರಿ 5ರಿಂದ ಆರಂಭವಾಗಲಿದೆ. ಹೀಗಾಗಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಎರಡು ತಂಡಗಳು ತಮ್ಮ ತಂಡದ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಈ ಸರಣಿ ಎರಡು ತಂಡಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಆದ್ದರಿಂದ ಎರಡು ತಂಡಗಳು ಸರಣಿಯನ್ನು ಗೆಲ್ಲಲೇಬೇಕೆಂಬ ಉದ್ದೇಶದಿಂದ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಅಭ್ಯಾಸಕ್ಕಿಳಿದಿವೆ. ಇತ್ತ ಆಸಿಸ್ ಸರಣಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಭರವಸೆಯ ಆಟಗಾರರು ತಂಡಕ್ಕೆ ಮರಳುತ್ತಿರುವುದು ಟೀಂ ಇಂಡಿಯಾಕ್ಕೆ ವರದಾನವಾಗಿದೆ. ಪಿತೃತ್ವ ರಜೆಯ ಮೇಲಿದ್ದ ನಾಯಕ ಕೊಹ್ಲಿ ಮತ್ತೆ ತಂಡ ಸೇರಿಕೊಂಡಿದ್ದಾರೆ. ಹಾಗೆಯೇ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಇಶಾಂತ್ ಶರ್ಮ ತಂಡಕ್ಕೆ ವಾಪಾಸ್ಸಾಗಿದ್ದರೆ, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಪೃಥ್ವಿ ಶಾನನ್ನು ತಂಡದಿಂದ ಕೈಬಿಡಲಾಗಿದೆ.
ಮೊದಲೆರಡು ಟೆಸ್ಟ್ಗೆ ಟೀಂ ಇಂಡಿಯಾದ ಸದಸ್ಯರ ಪಟ್ಟಿ..
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಆಕ್ಸಾರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮಹಮದ್ ಸಿರಾಜ್, ಶಾರ್ದುಲ್ ಠಾಕೂರ್.
ಮೊದಲೆರಡು ಟೆಸ್ಟ್ಗೆ ಇಂಗ್ಲೆಂಡ್ ತಂಡದ ಸದಸ್ಯರ ಪಟ್ಟಿ..
ಜೋ ರೂಟ್ (ನಾಯಕ), ಮೊಯೀನ್ ಅಲಿ, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಬೆನ್ ಸ್ಟೋಕ್ಸ್, ಆಲಿ ಸ್ಟೋನ್, ಡೊಮ್ ಸಿಬ್ಲಿ, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜೇಮ್ಸ್ ಆಂಡರ್ಸನ್.
India vs England: ಭಾರತ – ಇಂಗ್ಲೆಂಡ್ ಮೂರೂ ಆವೃತ್ತಿಗಳ ಕ್ರಿಕೆಟ್ ಕದನದ ಸ್ಥಳ, ವೇಳಾಪಟ್ಟಿ ಇಲ್ಲಿದೆ..